ಆಂಡ್ರಾಯ್ಡ್‌ | ಕನ್ನಡದಲ್ಲಿ ಬರೆಯುವುದು ಸುಲಭ

ಕನ್ನಡ ಪ್ರೈಡ್ ಕನ್ನಡ ಎಡಿಟರ್

ಕನ್ನಡದಲ್ಲಿ ಬರೆಯಲು, ಕನ್ನಡದಲ್ಲೇ ಟಿಪ್ಪಣಿಗಳನ್ನು ತಯಾರಿಸಲು ‘ಕನ್ನಡ ಎಡಿಟರ್’ ಆಪ್ ಸಹಕಾರಿ. ಇಂಗ್ಲಿಷ್ ಕೀಬೋರ್ಡ್ ಬಳಸಿ ಬೆರಳಚ್ಚಿಸಿದ ಪದಗಳನ್ನು ಕನ್ನಡ ಲಿಪಿಗೆ ಪರಿವರ್ತಿಸಲು ಈ ಆಪ್‌ನಿಂದ ಸಾಧ್ಯ. ಯಾವುದೇ ಪ್ರತ್ಯೇಕ ಕನ್ನಡ ಸಾಫ್‌ಟ್‌‌ವೇರ್ ಸಹಾಯವಿಲ್ಲದೆ, ಇಂಗ್ಲಿಿಷ್ ಕೀಬೋರ್ಡ್‌ನ್ನೇ ಕನ್ನಡ ಟೈಪಿಂಗ್‌ಗೆ ಬಳಸಬಹುದು. ಟೈಪ್ ಮಾಡಿದ ಪದಗಳನ್ನು ಕಾಪಿ ಮಾಡಿಕೊಂಡು ಬೇಕಾದ ಜಾಗದಲ್ಲಿ ಅಂಟಿಸಿ ಬಳಸಬಹುದು. ಇಲ್ಲಿ ಟೈಪ್ ಮಾಡಿದ ಬದಗಳನ್ನು ಸಾಮಾಜಿಕ ಜಾಲ ತಾಣ ಅಥವಾ ಎಸ್‌ಎಂಎಸ್ ಮೂಲಕ ಹಂಚಿಕೊಳ್ಳಬಹುದು. ಡೇಟಾ ಸೇವ್ ಮಾಡಿಟ್ಟು, ಬೇಕಾದಾಗಲೂ ಬಳಸಲು ಅವಕಾಶವಿದೆ.