
ಮಾರ್ನಿಂಗ್ ಕಿಟ್ ಸ್ಮಾರ್ಟ್ ಅಲಾರ್ಮ್
ಸ್ಮಾರ್ಟ್ ಟೆಕ್ ಯುಗದಲ್ಲಿ ಅಲಾರ್ಮ್ ಅನ್ನುವುದು ನಿಮ್ಮನ್ನು ಬೆಳಗ್ಗೆ ಎಚ್ಚರಿಸುವುದು ಮಾತ್ರವಲ್ಲ. ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಹುದು. ಮುಂಜಾನೆ ಎದ್ದ ತಕ್ಷಣ ಅಂದಂದಿನ ಕೆಲಸ ಕಾರ್ಯಗಳನ್ನು ನೆನಪಿಸಿ ನಿಮ್ಮನ್ನು ಮಾನಸಿಕವಾಗಿ ಈ ದಿನಕ್ಕೆ ರೆಡಿ ಮಾಡುವ ಜವಾಬ್ದಾರಿಯನ್ನೂ ಈ ಆಪ್ ಹೊತ್ತುಕೊಂಡಿದೆ. ಮಾರ್ನಿಂಗ್ ಕಿಟ್ ಆಪ್ ದಿನವನ್ನು ಆರಂಭಿಸುವಲ್ಲಿ ಬೇಕಾದ ಎಲ್ಲ ಪ್ರಮುಖ ಮಾಹಿತಿಯನ್ನು ಅಲಾರ್ಮ್ ಮೊಳಗಿದ ತಕ್ಷಣ ನೀಡುತ್ತದೆ. ತಕ್ಷಣ ನಿಮ್ಮ ಇಂದಿನ ಕಾರ್ಯಕ್ರಮ ಪಟ್ಟಿ ಚೆಕ್ ಮಾಡಬಹುದು, ಇಂದಿನ ಹವಾಮಾನ, ನ್ಯೂಸ್ ಹೈಡ್ ಲೈನ್ ಓದಬಹುದು, ಜಗತ್ತಿನ ಎಲ್ಲೇ ಇದ್ದರೂ ಆ ಪ್ರದೇಶದ ಟೈಂ ನೋಡಬಹುದು. ನೀವಿರುವ ಜಾಗದ ದುಡ್ಡಿನ ಎಕ್‌ಸ್‌ಚೇಂಜ್ ರೇಟ್ ಪರೀಕ್ಷಿಸಬಹುದು. ಆಹ್ಲಾದಕತೆ ನೀಡುವ ಸ್ಫೂರ್ತಿದಾಯಕ ಕ್ವೋಟೇಬಲ್ ಕ್ವೋಟ್‌ಸ್ ಓದಬಹುದು, ವಿವಿಧೆಡೆ ಸದಾ ಪ್ರಯಾಣದಲ್ಲಿರುವವರಿಗೆ, ಶಿಸ್ತುಬದ್ಧ ಬದುಕು ರೂಢಿಸುವವರಿಗೆ ಈ ಸುಪ್ರಭಾತದ ಆಪ್ ಸಹಕಾರಿ.