ಗ್ರಾಹಕರಿಗೆ ಆನ್‍ಲೈನ್ ಪಯಣವನ್ನು ಹೆಚ್ಚು ಸುರಕ್ಷಿತವಾಗಿಸಲು ಕ್ಯಾಸ್ಪರ್‍ಸ್ಕೈ ಜತೆ ಕೈಜೋಡಿಸಿದ  ಏರ್‌ಟೆಲ್

ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್‍ಸ್ಕೈ ಭಾರತದ ಅಂತರ್ಜಾಲ ಬಳಕೆದಾರರಿಗೆ ತ್ವರಿತ ಭದ್ರತೆ ಒದಗಿಸುವ ಸಲುವಾಗಿ ಭಾರತದ ಪ್ರಮುಖ ಸಂವಹನ ಪರಿಹಾರ ಪೂರೈಕೆದಾರ ಕಂಪನಿಯಾದ ಭಾರ್ತಿ ಏರ್‌ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಎರಡು ಕಂಪನಿಗಳ ನಡುವಿನ ಸಹಯೋಗವು ಏರ್‌ಟೆಲ್ ಗ್ರಾಹಕರಿಗೆ ಕ್ಯಾಸ್ಪರ್‍ಸ್ಕೈನ ಒಟ್ಟು ಭದ್ರತಾ ಪರಿಹಾರವನ್ನು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‍ನಿಂದ ನೇರವಾಗಿ ಕೆಲವು ಕ್ಲಿಕ್‍ಗಳಲ್ಲಿ ಖರೀದಿಸಲು ಅನುವು ಮಾಡಿಕೊಡುತ್ತದೆ. ಭಾರತೀಯ ಅಂತರ್ಜಾಲ ಬಳಕೆದಾರರಲ್ಲಿ ಸೈಬರ್ ಸುರಕ್ಷತೆಯ ಅರಿವನ್ನು ಹೆಚ್ಚಿಸುವ ಮತ್ತು ಸೈಬರ್ ಬೆದರಿಕೆಗಳ ಹಿನ್ನೆಲೆಯಲ್ಲಿ ಸೈಬರ್ ಸುರಕ್ಷತೆಯನ್ನು ಅಭ್ಯಾಸ ಮಾಡಲು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ಒಕ್ಕೂಟವನ್ನು ರಚಿಸಲಾಗಿದೆ.

ಸೈಬರ್ ಬೆದರಿಕೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಕಳೆದ 2 ವರ್ಷಗಳಲ್ಲಿ ಸೈಬರ್ ಅಪರಾಧಿಗಳು ಭಾರತದಲ್ಲಿ ಇಂಟರ್ನೆಟ್ ಬಳಕೆದಾರರನ್ನು ಸಕ್ರಿಯವಾಗಿ ಗುರಿಯಾಗಿಸಿಕೊಂಡಿದ್ದಾರೆ. 2021 ರ ಮೊದಲ ತ್ರೈಮಾಸಿPದಲ್ಲಿ ಕ್ಯಾಸ್ಪರ್‍ಸ್ಕೈ ಉತ್ಪನ್ನಗಳು 37,650,472 ವಿವಿಧ ಅಂತರ್ಜಾಲದಿಂದ ಹರಡುವ ಸೈಬರ್ ಬೆದರಿಕೆಗಳನ್ನು ಪತ್ತೆ ಮಾಡಿವೆ. ಮೊಬೈಲ್ ಬಳಕೆದಾರರು ಕೂಡ ಅಪಾಯದಲ್ಲಿದ್ದಾರೆ, ಏಕೆಂದರೆ ಸೈಬರ್ ಅಪರಾಧಿಗಳು ನಿರಂತರವಾಗಿ ಹಣಕಾಸಿನ ಲಾಭಕ್ಕಾಗಿ ಮತ್ತು ಪ್ರಮುಖ ಖಾಸಗಿ ಡೇಟಾವನ್ನು ಪಡೆಯಲು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಭಾರತದಲ್ಲಿ ಮೊಬೈಲ್ ಬೆದರಿಕೆಗಳು 2019 ರಿಂದ ತೀವ್ರವಾಗಿ ಹೆಚ್ಚಾಗಿದೆ ಮತ್ತು ಈ ಬಗೆಯ ಗುರಿ ಹೆಚ್ಚು ಅತ್ಯಾಧುನಿಕ ಸ್ವರೂಪದ್ದಾಗುತ್ತಿದೆ. 2020 ರಲ್ಲಿ ಮೊಬೈಲ್ ಬೆದರಿಕೆಗಳಿಂದ ದಾಳಿಗೊಳಗಾದ ದೇಶಗಳಲ್ಲಿ ಭಾರತ 7ನೇ ಸ್ಥಾನದಲ್ಲಿದೆ.

ಜಾಗತಿಕವಾಗಿ ಸ್ಮಾರ್ಟ್ ಫೋನ್ ಬಳಕೆದಾರರನ್ನು ಪ್ರಮುಖ ಮೊಬೈಲ್ ಬೆದರಿಕೆಗಳು ಗುರಿ ಮಾಡಿದ್ದು, ಆ್ಯಡ್‍ವೇರ್ 57% (3,254,387 ಪತ್ತೆ) ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತರ ಅಪಾಯಗಳ ಬಗ್ಗೆ ಮಾತನಾಡುತ್ತಾ, ಬ್ಯಾಕ್‍ಡೋರ್ಸ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2019ರಲ್ಲಿ 28,889 ಇದ್ದುದು 2020 ರಲ್ಲಿ 84,495 ಕ್ಕೆ ಹೆಚ್ಚಿದೆ.

ಪತ್ತೆಯಾದ ಆಂಡ್ರಾಯ್ಡ್ ಶೋಷಣೆಗಳ ಸಂಖ್ಯೆ ಹದಿನೇಳು ಪಟ್ಟು ಹೆಚ್ಚಾಗಿದೆ ಮತ್ತು ಟ್ರೋಜನ್-ಪ್ರಾಕ್ಸಿ ಬೆದರಿಕೆಗಳ ಸಂಖ್ಯೆ ಹನ್ನೆರಡು ಪಟ್ಟು ಹೆಚ್ಚಾಗಿದೆ. ಕ್ಯಾಸ್ಪರ್‍ಸ್ಕೈ ಪರಿಹಾರಗಳು 2020 ರಲ್ಲಿ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್‍ಗಳಿಗಾಗಿ 156,710 ಇನ್‍ಸ್ಟಾಲೇಶನ್ ಪ್ಯಾಕೇಜ್‍ಗಳನ್ನು ಪತ್ತೆ ಮಾಡಿವೆ, ಇದು 2019 ರಲ್ಲಿ ಪತ್ತೆಯಾದ ದಾಳಿಗಳ ಎರಡು ಪಟ್ಟು ಅಧಿಕ. ಆದಾಗ್ಯೂ, 2020 ರಲ್ಲಿ ರ್ಯಾನ್ಸಮ್‍ವೇರ್ ಟ್ರೋಜನ್‍ಗಳಿಗಾಗಿ 20,708 ಇನ್‍ಸ್ಟಾಲೇಶನ್ ಪ್ಯಾಕೇಜ್‍ಗಳನ್ನು ನಾವು ಕಂಡುಕೊಂಡಿದ್ದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ ರ್ಯಾನ್ಸಮ್‍ವೇರ್ ಟ್ರೋಜನ್‍ಗಳು 3.5 ಪಟ್ಟು ಕುಸಿತ ಕಂಡಿವೆ.

ಕ್ಯಾಸ್ಪರ್‍ಸ್ಕೈ ಸಿಇಒ ಯುಜೀನ್ ಕಾಸ್ಪರ್‍ಸ್ಕೈ ಈ ಬಗ್ಗೆ ಮಾತನಾಡಿ, “ತಮ್ಮ ಗ್ರಾಹಕರಿಗೆ ಸುರಕ್ಷೆ ಒದಗಿಸುವ ಸಲುವಾಗಿ ಪ್ರಮುಖ ಜಾಗತಿಕ ದೂರಸಂಪರ್ಕ ಕಂಪನಿ ಮತ್ತು ಅತಿದೊಡ್ಡ ಮೊಬೈಲ್ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರ್ತಿ ಏರ್‌ಟೆಲ್ ಜತೆಗೆ ಹೆಚ್ಚು ಸುರಕ್ಷಿತ ಇಂಟರ್ನೆಟ್ ಅನ್ನು ಸೃಷ್ಟಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ, ಮತ್ತು ಕ್ಯಾಸಪರ್‍ಸ್ಕೈಯೊಂದಿಗೆ ಸುರಕ್ಷಿತ ಡಿಜಿಟಲ್ ಜಗತ್ತನ್ನು ನಿರ್ಮಿಸುವ ಮೂಲಕ ಈ ಪಾಲುದಾರಿಕೆಯು ಏರ್‌ಟೆಲ್ ಅನ್ನು ಹೊಸತನದ ಪ್ರವರ್ತಕ ಮತ್ತು ಅದರ ಉದ್ಯಮದಲ್ಲಿ ನಾಯಕನಾಗಿ ಸ್ಥಾಪಿಸಲು ಮತ್ತಷ್ಟು ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

ಭಾರ್ತಿ ಏರ್‌ಟೆಲ್ ಸಿಇಓ ಪ್ರದೀಪ್ ಕಪೂರ್ ಮಾತನಾಡಿ, “ಗ್ರಾಹಕರ ಜೀವನ ಶೈಲಿಯು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳೊಂದಿಗೆ ಹೆಚ್ಚು ಸಂಯೋಜಿತವಾಗುತ್ತಿದ್ದಂತೆ, ಈ ಪಯಣವನ್ನು ಸರಿಯಾದ ಪರಿಹಾರಗಳೊಂದಿಗೆ ಭದ್ರಪಡಿಸುವುದು ನಮಗೆಲ್ಲರಿಗೂ ಅತಿಮುಖ್ಯವಾಗಿದೆ. ಏರ್‌ಟೆಲ್ ಜಾಗತಿಕ ಮಟ್ಟದ ಮೂಲಸೌಕರ್ಯ ಮತ್ತು ಪಾಲುದಾರಿಕೆಗಳ ಮೂಲಕ ಸುರಕ್ಷಿತ ನೆಟ್‍ವರ್ಕ್ ಅನುಭವವನ್ನು ನೀಡಲು ಹಗಲಿರುಳೂ ಕೆಲಸ ಮಾಡುತ್ತಿದೆ. ಕ್ಯಾಸ್ಪರ್‍ಸ್ಕೈಯೊಂದಿಗೆ ಪಾಲುದಾರಿಕೆ ಹೊಂದಲು ಮತ್ತು ಅವರ ಪರಿಹಾರಗಳನ್ನು ಏರ್‌ಟೆಲ್ ಗ್ರಾಹಕರಿಗೆ ಸುಲಭವಾಗಿ ತಲುಪುವಂತೆ ಮಾಡಲು ನಾವು ಸಂತೋಷಪಡುತ್ತೇವೆ, ಅವರು ಇದನ್ನು ಕೆಲವೇ ನಿಮಿಷಗಳಲ್ಲಿ ಖರೀದಿಸಬಹುದು ಮತ್ತು ಸ್ಥಾಪಿಸಬಹುದು ಮತ್ತು ಸಂಪೂರ್ಣ ಮನಸ್ಸಿನ ಶಾಂತಿಯನ್ನು ಆನಂದಿಸಬಹುದು” ಎಂದು ಬಣ್ಣಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.