ಚಂದ್ರಯಾನ-2 |ದಕ್ಷಿಣ ಧ್ರುವದಲ್ಲೇ ವಿಕ್ರಮ್‌ ಇಳಿಯುತ್ತಿರುವುದು ಯಾಕೆ?

45 ದಿನಗಳ ಚಂದ್ರಯಾನ-2 ಪಯಣ ಗುರಿ ಮುಟ್ಟುವ ಕ್ಷಣದ ನಿರೀಕ್ಷೆಯಲ್ಲಿ ಭಾರತವಷ್ಟೇ ಅಲ್ಲ, ಜಗತ್ತೇ ಕಾಯುತ್ತಿದೆ. ರಷ್ಯಾ, ಅಮೆರಿಕ, ಚೀನಾ ನಂತರ ಭಾರತ ಈ ಮಹತ್ವಕಾಂಕ್ಷೆಯ ಹೆಜ್ಜೆ ಇಡುತ್ತಿದ್ದು ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಪ್ರಗ್ಯಾನ್‌ ಯಶಸ್ವಿ ಚಂದ್ರನನ್ನು ಸ್ಪರ್ಶಿಸಿದರೆ ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ದಾಖಲಾಗುತ್ತದೆ

”ಕೇವಲ ಭಾರತೀಯರಷ್ಟೇ ಅಲ್ಲ, ಇಡೀ ಜಗತ್ತೇ ಈ ವಿದ್ಯಮಾನವನ್ನು ಎದುರು ನೋಡುತ್ತಿದೆ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕೆಂದು ಹೇಳಬಯಸುತ್ತೇನೆ. ಚಂದ್ರನ ದಕ್ಷಿಣ ಧ್ರುವದತ್ತ ಹೆಜ್ಜೆ ಇಡುತ್ತಿರುವ ಜಗತ್ತಿನ ಮೊದಲು ದೇಶವಿದು. ಇದು ಚಂದ್ರನ ಕುರಿತ ಜ್ಞಾನವನ್ನು ಹೆಚ್ಚಿಸುತ್ತಿದೆ. ಭಾರತದ ಅಮೆರಿಕದ ಪ್ರತಿನಿಧಿಯಾಗಿ ಈ ಯೋಜನೆಯನ್ನು ಮುಂದೆ ನಡೆಸುತ್ತಿದೆ. ನಾವೂ ಕೂಡ ನರ್ವಸ್‌ ಆಗಿದ್ದೇವೆ, ಯಶಸ್ಸಿನ ವಿಶ್ವಾಸವಿದೆ”

ಇವು ನಾಸಾ ಸಂಸ್ಥೆ ಬಾಹ್ಯಾಕಾಶ ವಿಶ್ಲೇಷಕ ಜೆರ್ರಿ ಲಿನೆನೆಂಗರ್‌ ವೇಸ್‌ ಅವರ ಮಾತುಗಳಿವೆ.
ಜಗತ್ತಿನ ಯಾವುದೇ ಹೆಮ್ಮೆ ಪಡುವಂತೆ ಮಾಡಿರುವ ಚಂದ್ರಯಾನ -2ರ ಯಶಸ್ಸಿಗೆ ಎಲ್ಲೆಡೆಯಿಂದ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಚಂದ್ರನ ಮೇಲೆ ಇದುವರೆಗೆ ಮೂರು ದೇಶಗಳು ಯಶಸ್ವಿಯಾಗಿವೆ ಇಳಿದಿವೆ. ಚೀನಾ ಉತ್ತರ ಭಾಗದಲ್ಲಿ ಇಳಿದಿದ್ದರೆ, ಅಮೆರಿಕದ ಮಧ್ಯಭಾಗದಲ್ಲಿ ಇಳದಿವೆ. ಇದೇ ಮೊದಲ ಬಾರಿಗೆ ಭಾರತ ದಕ್ಷಿಣ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದು ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ ಇಳಿಸಲಿದೆ.

ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಚಂದ್ರನ ದಕ್ಷಿಣ ಭಾಗವು ಬಹುತೇಕ ಮರೆಯಾಗಿಯೇ ಇರುತ್ತದೆ. ಶಾಶ್ವತವಾಗಿ ನೆರಳಿನಲ್ಲೇ ಇರುವ ಈ ಭಾಗದಲ್ಲಿ ನೀರಿನ ಅಂಶ ಇರುವ ಸಾಧ್ಯತೆ ಇರಬಹುದು. ಅಲ್ಲಿ ಅತಿ ಹೆಚ್ಚು ಕುಳಿಗಳಿವೆ, ಇದು ತಂಪನ್ನು ಹಿಡಿದಿಡುವ ಕೆಲಸ ಮಾಡುವ ಸಾಧ್ಯತೆಗಳಿವೆ.ಅಲ್ಲದೆ ಸೌರವ್ಯೂಹದ ಆರಂಭ ಕಾಲದ ಪಳೆಯುಳಿಕೆಗಳಿರುವ ದಾಖಲೆಗಳು ಈ ಭಾಗದಲ್ಲಿ ಕಂಡು ಬಂದಿವೆ ಎಂದು ಈ ಭಾಗದ ಆಯ್ಕೆಗೆ ಕಾರಣಗಳನ್ನು ವಿವರಿಸಿದೆ.

ಹಿಂದೆ ಯಾರೂ ಮಾಡದ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಅಲ್ಲದೇ ಈ ಬಾರಿ ಲ್ಯಾಂಡರ್‌ ಪೂರೈಸಲು ಅಮೆರಿಕ ನಿರಾಕಿರಿಸಿದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳೇ ರೂಪಿಸಿದ್ದು, ಇದು ಹೆಮ್ಮೆ ಮತ್ತು ಆತಂಕಕ್ಕೂ ಕಾರಣವಾಗಿದೆ.

ಇಸ್ರೋದ ಚೇರ್ಮನ್‌ ಕೆ ಸಿವನ್‌ ಸಾಫ್ಟ್‌ ಲ್ಯಾಂಡಿಂಗ್‌ ಅನ್ನು ಹದಿನೈದು ನಿಮಿಷಗಳ ಭಯಾನಕ ಅವಧಿ ಎಂದಿದ್ದಾರೆ. ಈ ಹಿಂದೆ ಇಸ್ರೇಲ್‌ ಈ ಪ್ರಯತ್ನದಲ್ಲಿ ವಿಫಲವಾಗಿರುವುದು ಈ ಆತಂಕಕ್ಕೆ ಕಾರಣವಿರಬಹುದು.

ಚಂದ್ರಯಾನದ ಹಿಂದಿರುವ ತಂಡ

ಮೈಲುಸ್ವಾಮಿ ಅಣ್ಣಾದೊರೈ, ಮುತ್ತಯ್ಯ ವನಿತಾ ಅವರು ಪ್ರಾಜೆಕ್ಟ್‌ ಡೈರೆಕ್ಟರ್‌ಗಳಾಗಿದ್ದರೆ, ರಿತು ಕರಿಧಲ್‌ ಮಿಷನ್ ಡೈರೆಕ್ಟರ್‌ ಆಗಿದ್ದಾರೆ. ಅಮಿತಾಭ್‌ ಸಿಂಘ್‌ ಮತ್ತು ಚಂದ್ರಕಾಂತಕುಮಾರ್‌ ಡೆಪ್ಯುಟಿ ಪ್ರಾಜೆಕ್ಟರ್‌ಗಳಾಗಿ ಶ್ರಮಿಸಿದ್ದಾರೆ.