ಟೆಕ್‌ಲೋಕದಲ್ಲಿ ಪ್ರತಿ ದಿನ ನಡೆಯುವ ಬೆಳವಣಿಗೆಗಳನ್ನು ಆಯ್ದು ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗುತ್ತದೆ

1. ಹುವಾಯಿ ಸಿಇಒ ಎನ್‌ಝೆಂಗ್‌ಫೀ ಆಪಲ್ ವಿರುದ್ಧ ಚೀನಾ ತಿರುಗಿ ಬಿದ್ದಿರುವುದನ್ನು ವಿರೋಧಿಸಿದ್ದಾರೆ. ಅಮೆರಿಕ ನಿಷೇಧದ ಹಿನ್ನೆಲೆಯಲ್ಲಿ ಚರ್ಚೆಯಲ್ಲಿರುವ ಹುವಾಯಿ ಮತ್ತು ರೆನ್ ಝೆಂಗ್‌ಫಿ, ಚೀನಾ ನಡೆಯನ್ನು ಟೀಕಿಸುತ್ತಾ ಆಪಲ್ ಕಂಪನಿಯನ್ನು ತನ್ನ ಗುರುವೆಂದು, ತಾನು ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದು, ಅದರ ಬೆಳವಣಿಗೆಯನ್ನು ನಾನು ಹೇಗೆ ತಾನೇ ವಿರೋಧಿಸಲು ಸಾಧ್ಯ ಎಂದು ಕೇಳಿದ್ದಾರೆ.

2. ಬ್ಯಾನ್ ಆಗಿ, ಮರಳಿ ಸಕ್ರಿಯವಾಗಿರುವ ಟಿಕ್‌ಟಾಕ್, ಈಗ ಹೊಸತೊಂದು ಸುದ್ದಿ ನೀಡಿದೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ ಬೈಟ್‌ಡಾನ್ಸ್ ತಮ್ಮದೇ ಆದ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆ ಪರಿಚಯಿಸುವ ಆಲೋಚನೆಯಲ್ಲಿದ್ದಾರೆ. ಫೈನಾನ್ಷಿಯಲ್ ಟೈಮ್ಸ್ ಈ ಕುರಿತು ವರದಿ ಮಾಡಿದೆ.

3. ಯುರೋಪಿನಲ್ಲಿ ಮಾಹಿತಿ ಖಾಸಗಿತನದ ಕಾನೂನು ಜಾರಿಯಾದ ಒಂದು ವರ್ಷದಲ್ಲಿ ಫೇಸ್‌ಬುಕ್ ಹಲವು ತನಿಖೆಗಳನ್ನು ಎದುರಿಸುತ್ತಿದೆ. ಸದ್ಯದಲ್ಲಿ ಜಾರಿಯಲ್ಲಿರುವ 19 ತನಿಖೆಗಳಲ್ಲಿ 11 ಫೇಸ್‌ಬುಕ್‌ಗೆ ಸಂಬಂಧಸಿದ್ದಾಗಿವೆ.

4. ಟಿಕ್‌ಟ್ಯಾಕ್ ಹಾದಿ ಹಿಡಿದ ಸ್ನ್ಯಾಪ್ ಚಾಟ್. ಇನ್ನು ಮುಂದೆ ತನ್ನ ಯೂಸರ್ ಟಿಕ್‌ಟ್ಯಾಕ್‌ನಂತೆ ಮ್ಯೂಸಿಕ್ ಕೂಡ ಪೋಸ್ಟ್ ಮಾಡುವ ಅವಕಾಶವನ್ನು ಸ್ನ್ಯಾಪ್ ಚಾಟ್ ಕಲ್ಪಿಸಿಕೊಡುತ್ತಿದೆ. ಅದಕ್ಕಾಗಿ ಮ್ಯೂಸಿಕ್ ಲೈಸೆನ್ಸ್‌ಗಾಗಿ ಪ್ರಕ್ರಿಯೆ ಆರಂಭಿಸಿದೆ.

5. ಚೀನಾದಲ್ಲಿ ಸೆನ್ಸಾರ್‌ಶಿಪ್ ಸದ್ದು ಮಾಡುತ್ತಿದೆ. ಟಿಯನ್‌ಮೆನ್ ಸ್ಕ್ವೇರ್ ಪ್ರತಿಭಟನೆ ನಡೆದು ವರ್ಷವಾಗಿದ್ದು, ಈಗ ಮತ್ತೆ ಈ ಕುರಿತು ಚರ್ಚೆ, ಪ್ರತಿಭಟನೆಯ ಸಾಧ್ಯತೆಗಳ ಸುಳಿವು ಹಿಡಿದ ಚೀನಾ ಸರ್ಕಾರ ಸಾಮಾಜಿಕ ವಾಯ್ಸ್ ರೆಕಗ್ನಿಷನ್ ಸಾಫ್ಟ್‌ವೇರ್ ಮುಂತಾದವನ್ನು ಬಳಸಿ ಆನ್‌ಲೈನ್ ಸೆನ್ಸಾರ್ ಮಾಡಲು ಹೊರಟಿದೆ.
