ಮೈಕ್ರೋಸಾಫ್ಟ್ ವಿಂಡೋಸ್ 11ರ ಅಂತಿಮ ಆವೃತ್ತಿಯನ್ನು ಸಿದ್ಧಪಡಿಸಿದ್ದು, ಪರೀಕ್ಷೆ ನೀಡಿದೆ. ನೀವೂ ಉಪಯೋಗಿಸಿ ನೋಡಬಹುದು!
ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲು ರಿಲೀಸ್ ಪ್ರಿವ್ಯೂಗಾಗಿ ಬಿಡುಗಡೆ ಮಾಡುತ್ತದೆ. ಅಂದರೆ ಅಂತಿಮವಾಗಿ ಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮನ್ನು ಟೆಸ್ಟರ್‌ಗಳಿಗೆ ಕೊಟ್ಟು ಬಳಕೆಯ ಅಭಿಪ್ರಾಯ ಸಂಗ್ರಹಿಸುತ್ತದೆ. ಇಂದು ವಿಂಡೋಸ್ 11 ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ 5ರಂದು ಅಧಿಕೃತವಾಗಿ ಹೊರಬೀಳಲಿರುವ ವಿಂಡೋಸ್ 11ರ ಅಪ್‌ಗ್ರೇಡ್ ಅನ್ನು ನೀವೂ ಈಗಲೇ ಬಳಸಿ ನೋಡಬಹುದು. ಅದಕ್ಕಾಗಿ ಏನು ಮಾಡಬೇಕು?
* ಮೊದಲು ನಿಮ್ಮ ಕಂಪ್ಯೂಟರ್ ವಿಂಡೋಸ್ 11ಕ್ಕೆ ತಕ್ಕ ಅಗತ್ಯಗಳನ್ನು ಹೊಂದಿದೆ ಪರೀಕ್ಷಿಸಿಕೊಳ್ಳಲಿ. ಅದಕ್ಕಾಗಿ ಮೈಕ್ರೋಸಾಫ್ಟ್ ಪಿಸಿ ಹೆಲ್ತ್ ಆಪ್ ಅನ್ನು ಬಳಸಬಹುದು. ಅದನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
* ನಿಮ್ಮ ಕಂಪ್ಯೂಟರ್ ವಿಂಡೋಸ್ 11ಕ್ಕೆ ಅಪ್‌ಗ್ರೇಡ್ ಮಾಡಲು ಯೋಗ್ಯವಾಗಿದ್ದರೆ ಈ ತಾಣಕ್ಕೆ ಹೋಗಿ ಅಪ್‌ಗ್ರೇಡ್ ಅನ್ನು ಪಡೆದುಕೊಳ್ಳಿ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
*ನಂತರ ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಅಪ್‌ಡೇಟ್ &ಸೆಕ್ಯುರಿಟಿಯಲ್ಲಿ ವಿಂಡೋಸ್ ಇನ್‌ಸೈಡರ್ ಪ್ರೋಗ್ರಾಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಗೆಟ್ ಸ್ಟಾರ್ಟೆಡ್ ಬಟನ್ ಮೇಲೆ ಕ್ಲಿಕ್ ಮಾಡಿ, ಮೈಕ್ರೋಸಾಫ್ಟ್ ಖಾತೆಯ ಮೂಲಕ ಸೈನಪ್ ಮಾಡಿ ವಿಂಡೋಸ್ ಇನ್‌ಸೈಡರ್ ಆಗಿ.
* ನಂತರದಲ್ಲಿ ಇನ್‌ಸೈಡರ್ ಸೆಟ್ಟಿಂಗ್‌ನಲ್ಲಿ ರಿಲೀಸ್ ಪ್ರಿವ್ಯೂ ರಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಿ
* ಮೈಕ್ರೋಸಾಫ್ಟ್ ನಿಯಮ ಮತ್ತು ನಿಬಂಧನೆಗಳಿಗೆ ಸಮ್ಮತಿ ನೀಡಿ ಕಂಪ್ಯೂಟರ್ ಅನ್ನು ರೀಬೂಟ್ ಮಾಡಿ.
* ಕಂಪ್ಯೂಟರ್ ಆನ್ ಆದ ಮೇಲೆ ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ಅಪ್‌ಡೇಟ್ & ಸೆಕ್ಯುರಿಟಿಯಲ್ಲಿ ವಿಂಡೋಸ್11 ಅಪ್‌ಡೇಟ್ ಇರುವುದನ್ನು ಖಚಿತಪಡಿಸಿಕೊಳ್ಳಿ
* ಅದನ್ನು ಕ್ಲಿಕ್ ಮಾಡಿ ಹಾಗೂ ಇನ್‌ಸ್ಟಾಲ್ ಮಾಡಿಕೊಳ್ಳಿ. ವಿಂಡೋಸ್ 11 ಬಳಸಲು ಆರಂಭಿಸಿ.
* ಬಳಸಿಯಾದ ಮೇಲೆ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ವಿಂಡೋಸ್ ಅಪ್‌ಡೇಟ್ ಕ್ಲಿಕ್ ಮಾಡಿ, ಅಲ್ಲಿ ಸ್ಟಾಪ್ ಗೆಟ್ಟಿಂಗ್ ಪ್ರಿವ್ಯೂ ಬಿಲ್ಡ್ಸ್ ಅನ್ನು ಆಯ್ಕೆ ಮಾಡಿ. ಈ ಮೂಲಕ ವಿಂಡೋಸ್ 11ರ ಅಂತಿಮ ಆವೃತ್ತಿಯನ್ನು ಬಳಸುವುದನ್ನು ಮುಂದುವರೆಸಿ.