ಶಿಯೋಮಿ ರೆಡ್ಮಿ-7| ಅದ್ಭುತವಾದ ಗೈಟುಕುವ ದರದ ಆಂಡ್ರಾಯ್ಡ್ ಫೋನ್

ಆಂಡ್ರಾಯ್ಡ್‌ ಬಳಕೆದಾರರ ಅತ್ಯಂತ ಜನಪ್ರಿಯವೇದಿಕೆಯಾದ ಆಂಡ್ರಾಯ್ಡ್‌ ಆಥಾರಿಟಿ ಹೇಳುವಂತೆ, ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್‌ಮಿ 7 ಅತ್ಯುತ್ತಮವಾದ ಡೀಲ್‌ . ತನ್ನ ಉತ್ತಮವಾದ ಅಂದ, ಕರ್ವ ಇರುವ ಹಿಂಬದಿಯು ಕೈಯಲ್ಲಿ ಹಿಡಿಯಲು ಮತ್ತು ಒಂದೇ ಕೈಯಲ್ಲಿ ಬಳಸಲು ಅನುಕೂಲಕರವಾಗಿದೆ

ರೆಡ್‌ಮಿ 7 ಹೊಸ ಕೈಗೆಟುಕುವ ದರದ ಭಾರತದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ನ ಶಿಯೋಮಿಯವರದ್ದಾಗಿದೆ. 7,999 ರೂ.ಗಳಿಗೆ ಲಭ್ಯವಿರುವ ಈ ಪೋನ್‌ 6.2 ಇಂಚ್‌ ಎಚ್‌ಡಿ+  ಡಾಟ್‌ ನಾಚ್‌ ಡಿಸ್‌ಪ್ಲೇ ಹೊಂದಿದ್ದು 720×1520 ಪಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ. ಅಲ್ಲದೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5ನ ರಕ್ಷಣೆಯಿದ್ದು, ದೀರ್ಘಕಾಲದ ಬಾಳಿಕೆಗಾಗಿ ಪಿ೨ಐ ಸ್ಪ್ಲಾಶ್‌ ರೆಸಿಸ್ಟನ್ಸ್‌ ಕೂಡ ಇದೆ. ಒಟ್ಟಾರೆಯಾಗಿ ಈ ಫೋನಿನ ವೈಶಿಷ್ಟ್ಯಗಳನ್ನು ಗಮನಿಸಿದರೆ, 8ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊರತಾಗಿ ರೆಡ್‌ಮಿ 7 ಮತ್ತು ರೆಡ್‌ ಮಿ ವೈ3 ಸಾಮ್ಯತೆಗಳಿವೆ. ಇಷ್ಟಾಗಿಯೂ ಈ ಫೋನ್‌ನನ್ನು ಕೈಗೆಟುಕುವ ದರದ ಫೋನ್‌ಗಳಲ್ಲಿ ವಿಜೇತನನ್ನಾಗಿಸಿರುವುದು ಅದರ ವೈಭವದ ವಿನ್ಯಾಸ. ಶಿಯೋಮಿಯ ಬಜೆಟ್‌ ಫೋನ್‌ಗಳ ಶ್ರೇಯ ಪಡೆದಿರುವ ಶಿಯೋಮಿಯ ಈ ಮಾಡೆಲ್‌ ನಿಜಕ್ಕೂ ಬಳಕೆದಾರರ ಗಮನಕ್ಕೆ ಬರಲು ಅರ್ಹವಾದ ಫೋನ್‌ ಎಂದು ಮಿಸ್ಟರ್‌ ಫೋನ್‌ ಹೇಳುತ್ತದೆ.

ತನ್ನ ಉತ್ತಮವಾದ ಅಂದ, ಕರ್ವ ಇರುವ ಹಿಂಬದಿಯು ಕೈಯಲ್ಲಿ ಹಿಡಿಯಲು ಮತ್ತು ಒಂದೇ ಕೈಯಲ್ಲಿ ಬಳಸಲು ಅನುಕೂಲಕರವಾಗಿದ್ದು, ರೆಡ್‌ಮಿ 7, ಈ ದರ ಶ್ರೇಣಿಯಲ್ಲಿ ಅತಿ ಸುಧಾರಿತ ಫೋನ್‌ ಆಗಿದೆ. ಆಂಡ್ರಾಯ್ಡ್‌ ಬಳಕೆದಾರರ ಅತ್ಯಂತ ಜನಪ್ರಿಯವೇದಿಕೆಯಾದ ಆಂಡ್ರಾಯ್ಡ್‌ ಆಥಾರಿಟಿ ಹೇಳುವಂತೆ, ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್‌ಮಿ 7 ಅತ್ಯುತ್ತಮವಾದ ಡೀಲ್‌ ಆಗಿದೆ. ಎಲ್ಲ ಪ್ರಾಥಮಿಕ ಅಗತ್ಯಗಳನ್ನು ನಿಭಾಯಿಸಲು ಸಮರ್ಥವಾಗಿದ್ದು, ಅಷ್ಟೇ ಆತ್ಮವಿಶ್ವಾಸವನ್ನು ಹೊಂದಿದೆ. ಸೂಕ್ತ ದರ, ಅದ್ಭುತವಾದ ಬಣ್ಣದ ಶ್ರೇಣಿ ಮತ್ತು ಅಮೋಘವಾದ ವಿನ್ಯಾಸವಿರುವ ಈ ಫೋನ್‌ ಬಳಕೆದಾರರನ್ನು ಸೆಳೆಯಲಿದೆ. ಅದೃಷ್ಟದ ಸಂಗತಿಯೆಂದರೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಜೊತೆಗೆ ಬಳಕೆದಾರರ ಅನುಭವವನ್ನು ಉತ್ತಮಗೊಳಿಸುತ್ತದೆ.

ಶಿಯೋಮಿಯು, ರೆಡ್‌ಮಿ 7 ಮೂಲಕ ಬದಲಾವಣೆಯನ್ನು ತಂದಿದ್ದು, ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲಿದೆ. ಚೆಂದದ ಹೊರತಾಗಿ ರೆಡ್‌ಮಿ 7 ಈ ವಿಭಾಗದಲ್ಲಿ ಎಂಥ ಸವಾಲನ್ನು ಒಡ್ಡಬಹುದು? ನ್ಯೂಸ್‌ 18 ಅವರ ಸುದ್ದಿಯ ಶೀರ್ಷಿಕೆಯಲ್ಲೇ ನಮಗೆ ಉತ್ತರ ಸಿಗುತ್ತದೆ, “ಸ್ಯಾಮ್‌ಸಂಗ್‌ ಗ್ಯಾಲೆಕ್ಸ್‌ ಎಂ10 ಮತ್ತು ರಿಯಲ್‌ ಮಿ3ಗಳಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುವ ಫೋನ್‌’’. ಈ ಜನಪ್ರಿಯ ಸುದ್ದಿ ತಾಣವು, ವಿವರಣೆಯನ್ನು ನೀಡುತ್ತಾ, ರೆಡ್‌ಮಿ 7 ಬಜೆಟ್‌ಫೋನ್‌, ಸಾಮಾನ್ಯವಾಗಿರುವ ವೈಶಿಷ್ಟ್ಯಗಳ ಜೊತೆಗೆ, ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 600ಸರಣಿಯ ಪ್ರೊಸೆಸರ್‌ 10,000 ರೂ. ವಿಭಾಗದ ಫೋನ್‌ಗಳಿಗೆ ನೀಡುತ್ತಿದ್ದು, ಹೆಚ್ಚುವರಿ ವೈಶಿಷ್ಟ್ಯವಾಗಿದೆ. ಜೊತೆಗೆ ಪೋಟ್ರೇಟ್‌ಗಳು, ಸೆಲ್ಫಿಗಳು ಮತ್ತು ಕಡಿಮೆ ಬೆಳಕಿನ ಫೋಟೋಗ್ರಫಿಗೆ ಅವಕಾಶವಿದ್ದು, ಇದು ಇತರೆ ಬಜೆಟ್ ಫೋನ್‌ಗಳ ಕ್ಯಾಮೆರಾಗಳನ್ನು ಹಿಂದಿಕ್ಕುತ್ತದೆ. ಸರಳವಾಗಿ ಹೇಳುವುದಾದರೆ, ಉಳಿದೆಲ್ಲಾ ಆಯ್ಕೆಗಳ ನಡುವೆ ನೀವು ರೆಡ್‌ ಮಿ 7 ಆಯ್ಕೆ ಮಾಡಿಕೊಳ್ಳಬಹುದು, ಒಟ್ಟಾರಿಯಾಗಿ ಒಳ್ಳೆಯ ಆಯ್ಕೆಯಾಗಲಿದೆ ಎಂದು ನ್ಯೂಸ್‌18 ವಿವರಿಸಿದೆ.

ನಮ್ಮ ತೀರ್ಪು

ಜನಪ್ರಿಯವಾದ ಸ್ಥಾನ, ದೊಡ್ಡ ಸ್ಕ್ರೀನ್‌, ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಮತ್ತು ಫೇಸ್‌ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್‌ ಬಗ್ಗೆ ಗ್ಯಾಜೆಟ್ಸ್‌ನೌ ಹೇಳುವ ಮಾತನ್ನು ನಾವು ನಂಬುತ್ತೇವೆ. ರೆಡ್‌ಮಿ 7 ಪರಿಪೂರ್ಣ ಆಂಡ್ರಾಯ್ಡ್‌ ಫೋನ್‌ ಎನಿಸಿಕೊಳ್ಳುವ ಎಲ್ಲ ಸಾಮಗ್ರಿಗಳನ್ನು ಒಳಗೊಂಡಿವೆ’’

ಶಿಯೋಮಿಯ ಹೊಸ ಕೊಡುಗೆ ಭರವಸೆ ಮೂಡಿಸುವಂತಿದ್ದು ಮತ್ತು ಕೈಗೆಟುಕುವ ದರ ಫೋನ್‌ಗಳನ್ನು ಸೂಕ್ತ ಆಯ್ಕೆಯಾಗಿ ಕಾಣಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.