130 ಗಣ್ಯರ ಖಾತೆಗೆ ಕನ್ನ; ಕ್ಷಮೆ ಕೇಳಿದ ಟ್ವಿಟರ್‌, ನೋಟಿಸ್‌ ಕೊಟ್ಟ ಭಾರತ ಸರ್ಕಾರ

ಬುಧವಾರದಿಂದ ಟ್ವಿಟರ್‌ ಚರ್ಚೆಯ ಕೇಂದ್ರ. ಅಮೆರಿಕದ ಪ್ರತಿಷ್ಠಿತ ವ್ಯಕ್ತಿಗಳ ಖಾತೆಗೆ ಕನ್ನ ಬಿದ್ದಿದ್ದು, ಹ್ಯಾಕರ್‌ಗಳ ಈ ಚಾಲಾಕಿತನಕ್ಕೆ ಟ್ವಿಟರ್‌ ಸಂಸ್ಥೆ ಬೆಚ್ಚಿ ಬಿದ್ದು ಕೂತಿದೆ

Twitter hack

ನಮಗೆ ಮುಜುಗರವಾಗಿದೆ. ಇದು ನಿರಾಶೆ ಉಂಟು ಮಾಡಿದ ಸಂಗತಿ. ಗಣ್ಯರ ಖಾತೆಗಳ ಕನ್ನ ಬಿದ್ದಿದ್ದಕ್ಕೆ ಕ್ಷಮೆ ಕೇಳುತ್ತವೆ.

ಇದು ಶನಿವಾರ ಟ್ವಿಟರ್‌ ಕ್ಷಮೆ ಕೇಳಿದ ರೀತಿ. ಬುಧವಾರ ಬರಾಕ್‌ ಒಬಾಮಾ, ಜೋ ಬೇಡನ್‌, ಎಲಾನ್‌ ಮಸ್ಕ್‌, ಬಿಲ್‌ ಗೇಟ್ಸ್‌ ಸೇರಿದಂತೆ ಒಟ್ಟು ಎಂಟು ಮಂದಿ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳ ಟ್ವಿಟರ್‌ ಖಾತೆಗೆ ಕೆಲವು ಹ್ಯಾಕರ್‌ಗಳು ಕನ್ನ ಹಾಕಿದ ಸುದ್ದಿ ಹೊರಬಿದ್ದಿತ್ತು.

ಪಾಸ್‌ವರ್ಡ್‌ ಅನ್ನು ಬದಲಿಸುವ ಟೂಲ್‌ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಈ ಹ್ಯಾಕರ್‌ ತಂಡ ಗಣ್ಯರ ಖಾತೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿತ್ತು. ಈ ಬೆಳವಣಿಗೆಗೆ ಬಿಟ್‌ ಕಾಯಿನ್‌ ಕರೆನ್ಸಿ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿತ್ತು. ಆದರೆ ಅಮೆರಿಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಗಣ್ಯರ ಖಾತೆ ಕೈ ಹಾಕಿದ ಈ ಬೆಳವಣಿಗೆ ಬೆಚ್ಚಿ ಬೀಳಿಸಿದೆ.

ರಾಜಕೀಯ ಉದ್ದೇಶಕ್ಕಾಗಿ ಕನ್ನ ಹಾಕಿದ್ದರೆ ಅನಾಹುತವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಶನಿವಾರ ಟ್ವಿಟರ್‌ ನೀಡಿರುವ ಹೇಳಿಕೆಯಂತೆ ಹ್ಯಾಕರ್‌ಗಳು 130 ಖಾತೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಈ ಪೈಕಿ 45 ಖಾತೆಗಳ ಪಾಸ್‌ವರ್ಡ್‌ ಬದಲಿಸಿ, ಲಾಗಿನ್‌ ಆಗುವ ಮೂಲಕ ಟ್ವೀಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಯುವರ್‌ ಟ್ವಿಟರ್‌ ಡಾಟಾ ಟೂಲ್‌ ಮೂಲಕ ಖಾತೆದಾರರ ಮಾಹಿತಿಯನ್ನುಡೌನ್‌ಲೋಡ್‌ ಮಾಡಿಕೊಂಡಿದ್ದಾರೆ!

ಈಗ ಟ್ವಿಟರ್‌ನ ಡೈರೆಕ್ಟರ್‌ ಮೆಸೇಜ್‌ನಲ್ಲಿ ಬಳಕೆದಾರರ ಎರಡು ತುದಿಗಳ ನಡುವೆ ಗೌಪ್ಯತೆಗಾಗಿ ಎನ್‌ಕ್ಷಿಪ್ಷನ್‌ ಹೆಚ್ಚು ಪ್ರಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಇದನ್ನೂ ಓದಿ | ಕನ್ನಡಕದ ಮೂಲಕವೇ ವಿಶ್ವದ ಬೆಸ್ಟ್ ಟೆಕ್ ಅನುಭವ ಉಣ ಬಡಿಸಲಿದ್ದಾರೆ ಅಂಬಾನಿ…!

ಕಳೆದ ಅಮೆರಿಕ ಚುನಾವಣೆ ಡೊನಾಲ್ಡ್‌ ಟ್ರಂಪ್‌ ಪರ ನಿರ್ಣಾಯಕವಾಗಿ ಕೆಲಸ ಮಾಡಿದೆ ಎಂಬ ಆರೋಪವನ್ನು ಎದುರಿಸುವ ಟ್ವಿಟರ್‌ ಈ ಬಾರಿ ರಾಜಕೀಯ ಪ್ರಚಾರಗಳಿಂದ ದೂರ ಇರುವ ನಿರ್ಧಾರಕ್ಕೆ ಬಂದಿತ್ತು.

ಆದರೆ ಈ ಬೆಳವಣಿಗೆ ಅಮೆರಿಕದ ನಾಗರಿಕರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಆತಂಕವನ್ನು ಹುಟ್ಟಿಸಿದೆ.

ಟ್ವಿಟರ್‌ಗೆ ಭಾರತ ಸರ್ಕಾರದ ನೋಟೀಸ್

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ಕಾರದ ಸಿಇಆರ್‌ಟಿ ಸಂಸ್ಥೆ ಮಾಹಿತಿ ಕೋರಿ ಟ್ವಿಟರ್‌ಗೆ ನೋಟಿಸ್ ನೀಡಿದೆ.

ಜಾಗತಿಕ ನಾಯಕರು, ಗಣ್ಯರ ಖಾತೆಗಳಿಗೆ ಕನ್ನ ಬಿದ್ದ ಹಿನ್ನೆಲೆಯಲ್ಲಿ ಭಾರತೀಯ ಬಳಕೆದಾರರ ಖಾತೆಯ ಸ್ಥಿತಿಗತಿ ಏನು? ಮಾಲ್‌ವೇರ್ ಇದ್ದ ಲಿಂಕ್‌ ಅಥವಾ ಟ್ವೀಟ್‌ಗಳು ಎಷ್ಟು ಭಾರತೀಯ ಬಳಕೆದಾರರು ನೋಡಿದ್ದಾರೆ ಎಂಬ ಮಾಹಿತಿ ನೀಡುವಂತೆ ಆಗ್ರಹಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.