ನಿಮ್ಮ ಮೊಬೈಲ್‌ನಲ್ಲಿ ಇರಲೇಬೇಕಾದ 15 ಕನ್ನಡ ಆ್ಯಪ್‌ಗಳಿವು!

ಡಿಜಿಟಲ್‌ ಲೋಕದಲ್ಲಿ ನಮ್ಮದೇ ಭಾಷೆಯಲ್ಲಿ ಏನೇ ಸಿಕ್ಕರೂ ಸಂತೋಷವಾಗುತ್ತದೆ. ಸುದ್ದಿ, ಸಾಹಿತ್ಯ, ವಿವಿಧ ಮಾಹಿತಿಗಳು ಕನ್ನಡದಲ್ಲೇ ಓದಲು ಸಿಕ್ಕರೇ ಎಷ್ಟು ಚೆನ್ನ ಎಂದೇ ಹುಡುಕುತ್ತೇವೆ. ನಮ್ಮ ದಿನ ನಿತ್ಯದ ಜೀವನದಲ್ಲಿ ಹಾಗೇ ಬೇಕಾಗುವ, ಉಪಯೋಗವಾಗುವ 15 ಕನ್ನಡದ ಮೊಬೈಲ್‌ ಅಪ್ಲಿಕೇಷನ್‌ಗಳು ಇಲ್ಲಿವೆ

1. ಕನ್ನಡ ನಿಘಂಟು

ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನಗಳ ಇತಿಹಾಸವಿದೆ. ಇದೇ ಮೊದಲ ಬಾರಿಗೆ ತಂತ್ರಜ್ಞಾನವನ್ನು ಆಧರಿಸಿದ ಪ್ರಕಟಣೆಯೊಂದನ್ನು ಹೊರತಂದಿದೆ. ಅದೇ ಕನ್ನಡ ನಿಘಂಟು. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡ ಕನ್ನಡ ನಿಘಂಟನ್ನು ಡಿಜಿಟಲೈಸ್ ಮಾಡಿ ಮೊಬೈಲ್ ಆ್ಯಪ್‌ ರೂಪದಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಲಿಂಕ್:  https://goo.gl/ivVJtw

2.ಲಿಪಿಕಾರ್

ಇಂಗ್ಲಿಷ್’ನಲ್ಲಿ ಹೇಳಿದ್ದನ್ನು ಕೇಳಿಸಿಕೊಂಡು ಅಕ್ಷರ ರೂಪದಲ್ಲಿ ಮುದ್ರಿಸಿಕೊಂಡು ಆ್ಯಪ್‌’ಗಳಿವೆ. ಆದರೆ ಕನ್ನಡದಲ್ಲಿ ಇಲ್ಲಿಯವರೆಗೆ ಅಂಥದ್ದೊಂದು ಆ್ಯಪ್‌ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಿರಲಿಲ್ಲ. ಈಗ ಲಿಪಿಕಾರ್ ಇದನ್ನು ಸಾಧ್ಯವಾಗಿಸಿದೆ. ಲಿಪಿಕಾರ್ ಕನ್ನಡ ಆ್ಯಪ್‌’ಗೆ ಧ್ವನಿಯ ಮೂಲಕ ವಿಷಯವನ್ನು ದಾಖಲಿಸಿದಾಗ, ಅದನ್ನು ಗ್ರಹಿಸಿ ಅಕ್ಷರಗಳ ರೂಪದಲ್ಲಿ ನೀಡುತ್ತದೆ. ಪ್ರಸ್ತುತ ೧೪ ಸೆಕೆಂಡ್’ಗಳ ಅವಧಿಯ ಸಂದೇಶವನ್ನು ಸ್ವೀಕರಿಸಿ ಅಕ್ಷರಗಳಲ್ಲಿ ನೀಡುತ್ತದೆ. ಮೊಬೈಲ್’ನಲ್ಲಿ ಕನ್ನಡ ಟೈಪಿಸಲಾಗದವರು ಈ ಆ್ಯಪ್‌ ಬಳಸಿ ಸಂದೇಶಗಳನ್ನು ರವಾನಿಸಬಹುದು. ಕನ್ನಡದಲ್ಲಿ ಮೇಲ್ ಮಾಡಲು, ಸಂದೇಶ, ವಾಟ್ಸ್ಯಾಪ್ ಸಂದೇಶಗಳನ್ನು ಸುಲಭವಾಗಿ ಕಳಿಸಿಕೊಡಬಹುದು.

ಲಿಂಕ್ : https://goo.gl/ueyuzN

3. ಕನ್ನಡ ಡಿಂಡಿಮ

ಇದೊಂದು ಕನ್ನಡದ ವಿಶಿಷ್ಟ ಆ್ಯಪ್‌. ವಿವಿಧ ಮಾಧ್ಯಮಗಳಲ್ಲಿ ಬಂದ ಉಪಯುಕ್ತವಾದ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತದೆ. ಸಿನಿಮಾ, ಸಾಹಿತ್ಯ, ಸಂಗೀತ, ಮಾಧ್ಯಮಗಳಲ್ಲಿ ಬಂದ ಬರಹಗಳನ್ನು, ವಿಶೇಷವಾಗಿ ಧನಾತ್ಮಕವಾದ, ಸದಭಿರುಚಿಯ ಬರಹಗಳನ್ನು ಸಂಗ್ರಹಿಸಿ ನೀಡುತ್ತದೆ.

ಲಿಂಕ್ : https://goo.gl/biVkwt

4. ಮಂಕುತಿಮ್ಮನ ಕಗ್ಗ

ಕನ್ನಡದ ಭಗವದ್ಗೀತೆ ಎಂದು ಕರೆಸಿಕೊಂಡಿರುವ ಮಂಕುತಿಮ್ಮನ ಕಗ್ಗ ಡಿ ವಿ ಗುಂಡಪ್ಪನವರ ಕೃತಿ. ಬದುಕನ್ನು ಕಾಣುವ ಬಗೆಯನ್ನು ಹೇಳಿಕೊಡುವ ಪದ್ಯಗಳು ಹೇಳುತ್ತವೆ. ನಿತ್ಯದ ಹಲವು ಸಂದರ್ಭದಲ್ಲಿ ಉಲ್ಲೇಖಿಸಲ್ಪಡುವ ಕಗ್ಗದ ಸಾಲುಗಳನ್ನು ಮತ್ತೆ ಮತ್ತೆ ಓದಬಯಸುವವರಿಗೆ ಈ ಆ್ಯಪ್‌ ಸಂಗಾತಿಯ ಹಾಗೆ. ಹಲಗೆ ಬಳಪ ಅಭಿವೃದ್ಧಿಪಡಿಸಿರುವ ಈ ಆ್ಯಪ್‌’ನಲ್ಲಿ ಕಗ್ಗದ 954 ಪದ್ಯಗಳೂ ಇವೆ.

ಲಿಂಕ್: https://goo.gl/VajGX6

5. ಡೈಲಿ ಹಂಟ್

ಸುದ್ದಿಗಳನ್ನು ಈಗ ಪತ್ರಿಕೆಯಲ್ಲಿ ಓದುವುದಕ್ಕಿಂತ ಮೊಬೈಲ್’ನಲ್ಲಿ ಓದುವವರ ಸಂಖ್ಯೆಯೇ ಹೆಚ್ಚು. ಮೊಬೈಲ್ ಮೂಲಕ ಪ್ರಯಾಣ ಮಾಡುತ್ತಾ, ಬಸ್’ಗಾಗಿ ಕಾಯುತ್ತಾ ಸುದ್ದಿಗಳನ್ನು ಓದಿಬಿಡಲು ಸಾಧ್ಯ. ಆದರೆ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಪತ್ರಿಕೆಗಳೂ, ನಿಯತಕಾಲಿಕೆಗಳನ್ನು ಏಕಕಾಲಕ್ಕೆ ಒಂದೇ ಒಂದು ಆ್ಯಪ್‌ ಇದು. ದಿನ ನಿತ್ಯದ ಆಗುಹೋಗುಗಳನ್ನು ತಿಳಿಯಲು ನಿಮಗೆ ಈ ಆ್ಯಪ್‌’ ನೆರವಾಗುತ್ತದೆ.

ಲಿಂಕ್: https://goo.gl/1WxjAQ

6. ಋತುಮಾನ

ಸಾಹಿತ್ಯಕ ಪತ್ರಿಕೆಗಳ ದೊಡ್ಡ ಪರಂಪರೆಯೇ ಕನ್ನಡದಲ್ಲಿದೆ. ಮುದ್ರಣ ಮತ್ತು ಪ್ರಸರಣ ವಿಷಯದಲ್ಲೂ ದೊಡ್ಡ ಸವಾಲು ಎದುರಿಸುತ್ತಿರುವ ಈ ಪತ್ರಿಕೆಗಳು ಡಿಜಿಟಲ್ ಅವತರಣಿಕೆ ಕಂಡಿರಲಿಲ್ಲ. ಋತುಮಾನ ಅಂಥದ್ದೊಂದು ಸಾಹಸಕ್ಕೆ ಮುಂದಾಗಿದೆ. ಈ ಆ್ಯಪ್‌ ಸಾಹಿತ್ಯ ಮತ್ತು ಸಾಂಸ್ಕೃತಿಕ ಚರ್ಚೆಗಳನ್ನು ವಿಭಿನ್ನವಾಗಿ ಕಟ್ಟಿಕೊಡುತ್ತಿದೆ.

ಲಿಂಕ್: https://goo.gl/hgQBGt

7. ಹೊನಲು

ಹೊನಲು, ಕನ್ನಡದಲ್ಲಿ ಸಕ್ರಿಯವಾಗಿರುವ ವೆಬ್ ಮ್ಯಾಗಜೀನ್. ಇದು ಆ್ಯಪ್‌ ರೂಪದಲ್ಲೂ ಲಭ್ಯವಿದೆ.  ಕನ್ನಡ ಭಾಷೆಯನ್ನು ಪ್ರಯೋಗಕ್ಕೆ ಒಡ್ಡಿರುವ ಈ ಬಳಗ, ಭಾಷೆ, ಸಂಸ್ಕೃತಿ, ರಾಜಕೀಯ ವಿಷಯಗಳನ್ನು ಕುರಿತ ಹಾಗೂ ಸೃಜನಶೀಲ ಸಾಹಿತ್ಯವನ್ನು ಪ್ರಕಟಿಸುತ್ತಿದೆ. ತನ್ನದೇ ಆದ ಓದುಗ ಬಳಗವನ್ನೂ ಸೃಷ್ಟಿಸಿಕೊಂಡಿದೆ.

ಲಿಂಕ್: https://goo.gl/811otL

8. ಹಂಸನಾದ

ಇದೊಂದು ಆಪ್ತವಾದ ಮತ್ತು ಮನಸ್ಸಿಗೆ ನೆಮ್ಮದಿ ಕೊಡುವ ವಿಚಾರಗಳನ್ನು ನೀಡುವ ಆ್ಯಪ್‌. ಇದರಲ್ಲಿ ಸುಭಾಷಿತ, ನೀತಿಗಳು, ಸಂಸ್ಕೃತ ಶ್ಲೋಕಗಳು ಇವೆ. ೧೫೦ ಸುಭಾಷಿತಗಳಿದ್ದು, ಅವುಗಳ ಕನ್ನಡಾನುವಾದವೂ ಇವೆ. ರೀತಿ, ನೀತಿ, ಭಕ್ತಿ, ಪ್ರೀತಿ ಮತ್ತು ವ್ಯಾಪ್ತಿ ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಈ ಸುಭಾಷಿತಗಳನ್ನು ನೀಡಲಾಗಿದೆ.

ಲಿಂಕ್: https://goo.gl/KHMHDL

9. ಒಗ್ಗರಣೆ ಡಬ್ಬಿ

ಟಿವಿ ವಾಹಿನಿಯೊಂದರ ಜನಪ್ರಿಯ ಅಡುಗೆ ಕಾರ್ಯಕ್ರಮವಿದು. ಇದರಲ್ಲಿ ಪರಿಚಯಿಸಲಾದ ವಿವಿಧ ರೀತಿಯ ಭಕ್ಷ್ಯಗಳನ್ನು ಆ್ಯಪ್‌ ನಲ್ಲಿ ನೀಡಲಾಗಿದೆ. ೮೦೦ಕ್ಕೂ ಹೆಚ್ಚು ಕಂತುಗಳಲ್ಲಿ ಪರಿಚಯಿಸಲಾದ, ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ ತಿನಿಸು, ಖಾದ್ಯಗಳನ್ನು ಹೇಗೆ ಮಾಡಬೇಕೆಂಬುದನ್ನು ಓದಿ ತಿಳಿಯಬಹುದು ಮತ್ತು ಪ್ರಯತ್ನಿಸಬಹುದು.

ಲಿಂಕ್ : https://goo.gl/2nbwoU

10.ಕನ್ನಡ ಪುಸ್ತಕಗಳು

ನಿಮ್ಮ ಮೊಬೈಲ್‌ನಲ್ಲೇ ಕನ್ನಡದ ಶ್ರೇಷ್ಠ ಕೃತಿಗಳನ್ನು ಉಚಿತವಾಗಿ ಓದುವ ಅವಕಾಶವನ್ನು ಈ ಆ್ಯಪ್‌ ಕಲ್ಪಿಸಿಕೊಡುತ್ತದೆ. ಕುವೆಂಪು, ಬೇಂದ್ರೆ, ಕಾರಂತ, ಗುಂಡಪ್ಪ ಸೇರಿದಂತೆ ಕನ್ನಡ ಹಲವು ಲೇಖಕರ ವಿವಿಧ ಸಾಹಿತ್ಯಕ ಕೃತಿಗಳು ಇಲ್ಲಿವೆ. ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ ಸೇರಿದಂತೆ ವಿವಿಧ ಪ್ರಕಾರಗಳ ಕೃತಿಗಳು ಇದರಲ್ಲಿ ಲಭ್ಯ ಇವೆ. ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಅನುಕೂಲಕರ ಮತ್ತು ಅತ್ಯುಪಯುಕ್ತ ಆ್ಯಪ್‌ .

ಲಿಂಕ್ : https://bit.ly/34obD9H

11.ನಮ್‌ ರೇಡಿಯೋ

ಜಗತ್ತಿನ ಮೊದಲ ಕನ್ನಡ ಡಿಜಿಟಲ್‌ ರೇಡಿಯೋ ಸ್ಟೇಷನ್‌ ಎಂದು ಕರೆಸಿಕೊಂಡಿರುವ ನಮ್‌ ರೇಡಿಯೋ ಆಪ್‌ ಮೂಲಕ, ಭಾರತ, ಅಮೆರಿಕ, ಯುರೋಪ್‌ ಮತ್ತು ಗಲ್ಫ್‌ ರಾಷ್ಟ್ರಗಳ ರೇಡಿಯೋ ಕಾರ್ಯಕ್ರಮಗಳನ್ನು ಕೇಳಬಹುದು. ಯಾಕಂದ್ರೆ, ಕನ್ನಡ ಕೇಳೋ ಮಜಾನೆ ಬೇರೆ ಮುಂತಾದ ಕಾರ್ಯಕ್ರಮಗಳು ಇದರಲ್ಲಿ ಜನಪ್ರಿಯವಾಗಿವೆ. ನೀವೂ ಕೇಳಿ.

ಲಿಂಕ್ : https://bit.ly/2PBtmGh

12. ಭಾರತ ಸಂವಿಧಾನ

ಭಾರತ ಸಂವಿಧಾನದ ಕನಿಷ್ಟ ತಿಳಿವಳಿಕೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಅಗತ್ಯ. ನಮ್ಮ ಹಕ್ಕುಗಳನ್ನು ಅರಿಯಲಾದರೂ ಸಂವಿಧಾನವನ್ನು ಓದಿಕೊಳ್ಳಬೇಕು. ಈ ಆಪ್‌ನಲ್ಲಿ ಸಂವಿಧಾನವು ಕನ್ನಡದಲ್ಲಿ ಲಭ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೂ ಇದು ಹೆಚ್ಚು ಉಪಯುಕ್ತ.

ಲಿಂಕ್ : https://bit.ly/2r20eOq

13. ಆರೋಗ್ಯ ಸಲಹೆಗಳು

ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಲಹೆಗಳನ್ನು, ಮನೆಯಲ್ಲಿಯೇ ಹೇಗೆ ಪರಿಹರಿಸಿಕೊಳ್ಳಬಹುದು ಎಂದು ಈ ಆ್ಯಪ್‌ ಹೇಳುತ್ತದೆ. ಹೃದಯ ಸಮಸ್ಯೆ, ರಕ್ತದೊತ್ತಡ, ಅಸ್ತಮಾ, ಶೀತ ಮತ್ತು ಕೆಮ್ಮು, ತಲೆನೋವು, ಕಣ್ಣಿನ ಸಮಸ್ಯೆ ಮತ್ತು ಆರೈಕೆ, ಕೂದಲು ಉದುರುವುದು, ಹಲ್ಲು ನೋವು, ಬೆನ್ನು ನೋವುಗಳ ಬಗ್ಗೆ ಮಾಹಿತಿ ಮತ್ತು ಅದಕ್ಕೆ ಮನೆ ಮದ್ದುಗಳ ಪಟ್ಟಿಯನ್ನೇ ನೀಡುತ್ತದೆ.

ಲಿಂಕ್: https://goo.gl/VwvmSW

14.ವಚನ ಸಾಹಿತ್ಯ

ಕನ್ನಡದ ಸಾಹಿತ್ಯ ಮಹತ್ವದ ಕೊಡುಗೆ ವಚನ ಸಾಹಿತ್ಯ. ಹನ್ನೆರಡನೆಯ ಶತಮಾನದ ಎಲ್ಲಪ್ರಮುಖ ವಚನಕಾರರ ವಚನಗಳು ಈ ಆ್ಯಪ್‌ನಲ್ಲಿವೆ. ವಚನಕಾರರು ಮತ್ತು ಅಕಾರಾದಿಯಾಗಿ ವಚನಗಳನ್ನು ಜೋಡಿಸಲಾಗಿದ್ದು ಹುಡುಕುವುದೂ ಸುಲಭ. ಅಲ್ಲದೆ ಆಯ್ದ ವಚನಗಳ ಧ್ವನಿರೂಪವೂ ಇದ್ದು ಕೇಳಿಸಿಕೊಳ್ಳಲೂಬಹುದು.

ಲಿಂಕ್ : https://bit.ly/34mplcS

15. ದಾಸ ಸಾಹಿತ್ಯ

ಪುರಂದರದಾಸರು, ಕನಕದಾಸರು ನೀಡಿದ ಕೀರ್ತನೆಗಳು ಕನ್ನಡದ ಭಕ್ತಿ ಪರಂಪರೆಯ ದ್ಯೋತಕ. ಇವರಷ್ಟೇ ಅಲ್ಲದೆ, ದಾಸಪರಂಪರೆಯು ಅನೇಕರು ಮಹತ್ವ ಕೊಡುಗೆ ನೀಡಿದ್ದಾರೆ. ಕಾವ್ಯ, ತತ್ವ ಮತ್ತು ಇತರೆ ವೈವಿಧ್ಯಮಯ ವಿಷಯಗಳನ್ನು ಕುರಿತ ದಾಸ ಪದಗಳು ಈ ಆ್ಯಪ್‌ನಲ್ಲಿ ಲಭ್ಯ ಇವೆ. ಆಯ್ದ ಕೆಲವು ಪದಗಳ ಆಡಿಯೋ ರೂಪವೂ ಇವೆ.

ಲಿಂಕ್ : https://bit.ly/2PygMaO