
ಭಾರತದ ಅತ್ಯಂತ ಜನಪ್ರಿಯ ದಿನಸಿ ಈ ಕಾರ್ಮಸ್ ತಾಣವಾದ ಬಿಗ್ ಬ್ಯಾಸ್ಕೆಟ್‌ನಿಂದ 2 ಕೋಟಿ ಜನರ ಸೋರಿಕೆಯಾಗಿದೆ. ಬಳಕೆದಾರರ ಫೋನ್ ನಂಬರ್, ಈ ಮೇಲ್ ವಿಳಾಸ, ಮನೆಯ ವಿಳಾಸ, ಜನ್ಮ ದಿನ ಮುಂತಾದ ವಿವರಗಳು ಸೋರಿಕೆಯಾಗಿದೆ ಎನ್ನಲಾಗಿದೆ.
ಇದು ನವೆಂಬರ್ 2020ರಲ್ಲಿ ಕದ್ದ ಮಾಹಿತಿಯಾಗಿದ್ದು, ಈಗ ಶೈನಿ ಹಂಟರ್ಸ್ ಹೆಸರಿನಲ್ಲಿ ಸೈಬರ್‌ಕ್ರೈಮ್ ಫೋರಮ್‌ನಲ್ಲಿ ಪ್ರಕಟವಾಗಿದೆ. ಈ ಹ್ಯಾಕರ್ ಗುಂಪು ಇದುವರೆಗೂ 11 ಕಂಪನಿಗಳಿಂದ ಸುಮಾರು 73 ಕೋಟಿ ಬಳಕೆದಾರರ ಮಾಹಿತಿಯನ್ನು ಕದ್ದು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ಸುಮಾರು 180ಕೋಟಿ ಡಾಲರ್ ಮೌಲ್ಯದ ಸಂಸ್ಥೆಯಾಗಿ ಬೆಳೆದಿರುವ ಬಿಗ್‌ಬ್ಯಾಸ್ಕೆಟ್ ಅನ್ನು ಇತ್ತೀಚೆಗೆ ಟಾಟಾ ಗ್ರೂಪ್ ಖರೀದಿಸುವ ಉದ್ದೇಶವನ್ನು ಬಹಿರಂಗಗೊಳಿಸಿತ್ತು. ಈಗ ಡಾಟಾ ಸೋರಿಕೆಯಿಂದಾಗಿ ಬಿಗ್‌ಬ್ಯಾಸ್ಕೆಟ್ ಮುಜುಗರ ಎದುರಿಸುವಂತಾಗಿದೆ. ಆದರೆ ಈ ವರೆಗೆ ಸೋರಿಕೆಗೆ ಸಂಬಂಧಿಸಿದ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಸೈಬಲ್ ಸಂಸ್ಥೆಯ ಪ್ರಕಾರ ಬಿಗ್ ಬ್ಯಾಸ್ಕೆಟ್‌ನಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಅಕ್ಟೋಬರ್ 14ರಂದು ಮಾಹಿತಿಗೆ ಕನ್ನ ಹಾಕಲಾಗಿದೆ. ಇದು ಅಕ್ಟೋಬರ್ 30ರಂದು ಬಯಲಾಗಿದೆ. ಈಗ ಅದು ಡಾರ್ಕ್‌ವೆಬ್‌ನಲ್ಲಿ ಸುಮಾರು 40 ಸಾವಿರ ಡಾಲರ್‌ಗಳಿಗೆ ಮಾರಾಟಕ್ಕೆ ಇಡಲಾಗಿತ್ತು ಎಂಬ ಅಂಶ ಬಯಲಾಗಿದೆ.
ನಮ್ಮನ್ನು ಕೇವಲ ಹಣ ತರುವ ಗೊಂಬೆಳೆಂದುಕೊಂಡು ನಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ.