ಇಂದಿನಿಂದ ಹಡಲ್‌ ಕೇರಳ|ಟ್ವಿಟರ್‌ ಸಹ ಸಂಸ್ಥಾಪಕ ಬಿಜ್‌ ಸ್ಟೊನೆಟೊ ಉದ್ಘಾಟನಾ ಭಾಷಣ

ವಿಶ್ವಪ್ರಸಿದ್ಧ ಕೋವಲಂ ಬೀಚ್‌ ಪರಿಸರದಲ್ಲಿ ಎರಡು ದಿನಗಳ ಜಾಗತಿಕ ಸ್ಟಾರ್ಟಪ್‌ ಸಮಾವೇಶವನ್ನು ಕೇರಳ ಸರ್ಕಾರ ಹಮ್ಮಿಕೊಂಡಿದೆ. ಇದು ಏಷ್ಯಾ ಅತಿ ದೊಡ್ಡ ಸ್ಟಾರ್ಟಪ್‌ ಸಮಾವೇಶ ಎನ್ನಲಾಗಿದೆ

ಕೇರಳದ ಮಾಹಿತಿ ತಂತ್ರಜ್ಞಾನ ಇಲಾಖೆ, ಕೇರಳ ಸ್ಟಾರ್ಟಪ್‌ ಮಿಷನ್‌ ಮತ್ತು ಇಂಟರ್ನೆಟ್‌ ಅಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಜಂಟಿಯಾಗಿ ಸೆಪ್ಟೆಂಬರ್‌ 27-28ರಂದು ಎರಡು ದಿನಗಳ ‘ಹಡಲ್‌ ಕೇರಳ’ ಹೆಸರಿನ ಸ್ಟಾರ್ಟಪ್‌ ಸಮಾವೇಶವನ್ನು ಹಮ್ಮಿಕೊಂಡಿದೆ.

ಬೀಚ್‌ಗಾಗಿ ಪ್ರಸಿದ್ಧವಾಗಿರುವ ತಿರುವನಂತಪುರಂ ಸಮೀಪ ಕೋವಲಂ ಸಮುದ್ರ ತಟದ ಪರಿಸರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಹೊಟೆಲ್‌ ಲೀಲಾ ರವೀಜ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಟ್ವಿಟರ್‌ನ ಸಹ ಸಂಸ್ಥಾಪಕ ಬಿಜ್‌ ಸ್ಟೊನೆಟೊ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಡಲಿದ್ದಾರೆ.

ಸಮಾವೇಶದ ಚಿಹ್ನೆ

ಸಮಾವೇಶದ ವಿಶೇಷ

ತಂತ್ರಜ್ಞಾನ ಪರಿಣಿತರು, ಮಾರ್ಕೆಟಿಂಗ್‌ ಕ್ಷೇತ್ರದ ಅನುಭವಿಗಳು, ತಂತ್ರಜ್ಞಾನ ಮತ್ತು ಉದ್ಯಮದ ನಾಯಕರುಗಳು ಮುಂದೆ ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಮಾಡಿಕೊಡಲಿದ್ದಾರೆ. 30 ಮಂದಿ ಹೂಡಿಕೆದಾರರು, ಉದ್ಯಮ ಕ್ಷೇತ್ರದ ಗಣ್ಯರು ಮತ್ತು ಭಾಷಣಕಾರರು ಮುಖ್ಯ ಆಕರ್ಷಣೆಯಾಗಿರಲಿದ್ದಾರೆ.

ಈ ಸಮ್ಮೇಳನದ ಮುಖ್ಯ ಗಮನ ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮವನ್ನು ಪ್ರೋತ್ಸಾಹಿಸುವುದಾಗಿದ್ದು, ಸರ್ಕಾರ, ಹೂಡಿಕೆ, ಮಾರ್ಗದರ್ಶಕರು ಮತ್ತು ಉದ್ಯಮವನ್ನು ಒಳಗೊಂಡ ಉದ್ಯಮಶೀಲ ಪರಿಸರವನ್ನು ರೂಪಿಸುವುದಾಗಿದೆ. ಇಲ್ಲಿ ಪಾಲ್ಗೊಳ್ಳುವ ಸ್ಟಾರ್ಟಪ್‌ಗಳಿಗೆ ಕೇರಳ ಸರ್ಕಾರದ ಸಹಭಾಗಿತ್ವವನ್ನು ಪಡೆಯುವ ಅವಕಾಶವೂ ಇದೆ.

ಬ್ಲಾಕ್‌ ಚೈನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಬಿಗ್‌ ಡಾಟಾ, ಡಿಜಿಟಲ್‌ ಎಂಟರ್‌ಟೈನ್‌ಮೆಂಟ್‌, ಆಗ್ಮೆಂಟೆಂಡ್‌ ರಿಯಾಲಿಟಿ, ವರ್ಚ್ಯುವಲ್‌ ರಿಯಾಲಿಟಿ, ಡ್ರೋನ್‌ ಟೆಕ್ನಾಲಜಿಸಿ, ಇ-ಗವರ್ನೆನ್ಸ್‌, ಎಂ-ಗವರ್ನೆನ್ಸ್‌ ವಿಷಯಗಳು ಸಮ್ಮೇಳನ ಕೇಂದ್ರ ವಿಷಯಗಳಾಗಿರುತ್ತವೆ.

ಭಾಷಣಕಾರರಲ್ಲಿ ಪ್ರಮುಖವಾಗಿ, ಫೇಸ್‌ಬುಕ್‌ ಭಾರತ ಕಚೇರಿಯಗೆ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌, ಯೂನಿಕಾರ್ನ್‌ ಇಂಡಿಯಾ ವೆಂಚರ್ಸ್‌ನ ಸಂಸ್ಥಾಪಕ ಅನಿಲ್‌ ಜೋಶಿ, ಗೋಫ್ರೂಗಲ್‌ನ ಸಂಸ್ಥಾಪಕ, ಸಿಇಒ ಕುಮಾರ್‌ ವೆಂಬು, ಬೆಂಗಳೂರಿನ ಟಿಐಇಯ ಕಾರ್ಯನಿರ್ವಾಹಕ ನಿರ್ದೇಶಕ ವಿಜೇತ ಶಾಸ್ತ್ರಿ ಸೇರಿದಂತೆ ಇನ್ನು ಹಲವು ಭಾಗವಹಿಸಲಿದ್ದಾರೆ.

1500 ಕ್ಕೂ ಹೆಚ್ಚು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ, 2000 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸಮಾವೇಶದ ಭಾಗವಾಗಿ ಹ್ಯಾಕಾಥನ್‌ ಕೂಡ ಆಯೋಜಿಸಲಾಗಿದೆ.

ಹೊಸ ತಂತ್ರಜ್ಞಾನ ಮತ್ತು ಉತ್ಪನ್ನಗಳ ಈ ಸಮಾವೇಶದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಕೇರಳ ಸ್ಟಾರ್ಟಪ್‌ ಮಿಷನ್‌ ಹೇಳಿಕೆ ತಿಳಿಸಿದೆ.