ಏರ್‌ ಇಂಡಿಯಾದ 10 ವರ್ಷಗಳ ಡಾಟಾಕ್ಕೆ ಕನ್ನ; ಕ್ರೆಡಿಟ್ ಕಾರ್ಡ್, ಪಾಸ್​ಪೋರ್ಟ್​ ಮಾಹಿತಿ, ಫೋನ್ ನಂಬರ್​ ಸೋರಿಕೆ

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾ ಮೇಲೆ ಸೈಭರ್‌ ದಾಳಿ ನಡೆದಿದ್ದು ಹತ್ತು ವರ್ಷಗಳ ಮಾಹಿತಿಗೆ ಕನ್ನ ಹಾಕಲಾಗಿದೆ. ಈ ದಾಳಿಯಲ್ಲಿ 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್​ಪೋರ್ಟ್​ ಮಾಹಿತಿ, ಫೋನ್ ನಂಬರ್​ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಾದ ಏರ್‌ ಇಂಡಿಯಾ ಮೇಲೆ ಸೈಭರ್‌ ದಾಳಿ ನಡೆದಿದ್ದು ಹತ್ತು ವರ್ಷಗಳ ಮಾಹಿತಿಗೆ ಕನ್ನ ಹಾಕಲಾಗಿದೆ. ಈ ದಾಳಿಯಲ್ಲಿ 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್​ಪೋರ್ಟ್​ ಮಾಹಿತಿ, ಫೋನ್ ನಂಬರ್​ಗಳು ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.

2011ರ ಆಗಸ್ಟ್​ 26ರಿಂದ 2021ರ ಫೆಬ್ರವರಿ 3ರವರೆಗಿನ ಅವಧಿಯಲ್ಲಿ ಈ ಡೇಟಾ ಮಾಹಿತಿ ಸೋರಿಕೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಈ ಅವಧಿಯಲ್ಲಿ ಏರ್ ಇಂಡಿಯಾದಲ್ಲಿ ಟಿಕೆಟ್ ಬುಕ್ ಮಾಡಿದವರ ಮಾಹಿತಿಗಳನ್ನು ಸಂಗ್ರಹಿಸಿಡಲಾಗಿತ್ತು. ಕ್ರೆಡಿಟ್ ಕಾರ್ಡ್​ ಹೊಂದಿದ್ದ ಪ್ರಯಾಣಿಕರ ಸಿವಿವಿ/ ಸಿವಿಸಿ ಸಂಖ್ಯೆಗಳನ್ನು ನಾವು ಸಂಗ್ರಹಿಸಿಟ್ಟಿರಲಿಲ್ಲ. ಹೀಗಾಗಿ, ಆ ಮಾಹಿತಿ ಸೋರಿಕೆಯಾಗಿಲ್ಲ. ಏರ್ ಇಂಡಿಯಾದ ಡೇಟಾ ಪ್ರೋಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗಿದೆ ಎಂದು ಏರ್ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿದೆ.

ಸುಮಾರು 45,00,000 ಪ್ರಯಾಣಿಕರ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಪ್ರಯಾಣಿಕರ ಡೇಟಾ, ಕ್ರೆಡಿಟ್ ಕಾರ್ಡ್‌ಗಳ ಮಾಹಿತಿಯನ್ನು ಈ ಸರ್ವರ್‌ಗಳಲ್ಲಿತ್ತು. ಭದ್ರತಾ ಲೋಪಕ್ಕೆ ಕಾರಣವೇನೆಂಬ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ.

ನಮಗೆ ಫೆಬ್ರವರಿಯಲ್ಲೇ ಡೇಟಾ ಸೋರಿಕೆಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಏರ್ ಇಂಡಿಯಾದ ಯಾವ ಡೇಟಾ ಹ್ಯಾಕ್ ಆಗಿದೆ ಎಂಬುದು ಖಚಿತವಾಗಿರಲಿಲ್ಲ. ಏರ್ ಇಂಡಿಯಾ ಆ್ಯಪ್​/ ವೆಬ್​ಸೈಟ್​ಗೆ ಲಾಗಿನ್ ಆದವರು ತಮ್ಮ ಪಾಸ್​ವರ್ಡ್​ ಬದಲಿಸುವಂತೆ ಏರ್ ಇಂಡಿಯಾ ತನ್ನ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.