530000 ಝೂಮ್‌ ಖಾತೆಗಳ ವಿವರ ಡಾರ್ಕ್‌ವೆಬ್‌ನಲ್ಲಿ ಫ್ರೀಯಾಗಿ ಸಿಗ್ತಿದೆ!

ಕರೋನ್‌ ಲಾಕ್‌ಡೌನ್‌ ಕಾಲದಲ್ಲಿ ವಿಡಿಯೋ ಚಾಟ್‌ ಮಾಡಲು, ಮೀಟಿಂಗ್‌ಗಳನ್ನು ನಡೆಸಲು ನೆರವಾದ ಮೊಬೈಲ್‌ ಅಪ್ಲಿಕೇಷನ್‌ ಝೂಮ್‌. ಕಳೆದ ವಾರ ಸುರಕ್ಷತೆಯ ವಿಷಯದಲ್ಲಿ ಟೀಕೆಗೆ ಗುರಿಯಾದ ಈ ಆ್ಯಪ್‌ ಈಗ ಹ್ಯಾಕರ್‌ ದಾಳಿಗೆ ಗುರಿಯಾಗಿದೆ!

ಯಾವುದೇ ಕಷ್ಟದಲ್ಲಿ, ಯಾರಾದರೂ ಒಬ್ಬ ಲಾಭ ಮಾಡಿಕೊಳ್ಳುತ್ತಾರೆ. ನಾವು ಮೈಮರೆತಾಗ!
ಕರೋನಾ ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿಯಮವನ್ನು ಅನುಸರಿಸಲಾಯಿತು. ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಾರಂಭಿಸಿದರು. ಈ ಸಂದರ್ಭವನ್ನು ಬಳಸಿಕೊಂಡ ಕ್ಯಾಲಿಫೋರ್ನಿಯಾ ಮೂಲದ ಝೂಮ್‌ ವಿಡಿಯೋ ಕಮ್ಯುನಿಕೇಷನ್ಸ್‌ ಎಂಬ ಕಂಪನಿ ಝೂಮ್‌ ಹೆಸರಿನ ವಿಡಿಯೋ ಆ್ಯಪ್‌ ಬಿಡುಗಡೆ ಮಾಡಿತು.

ಲಕ್ಷಾಂತರ ಸಂಖ್ಯೆಯಲ್ಲಿ ಡೌನ್‌ಲೋಡ್‌ ಈ ಆಪ್‌ ಕೆಲವೇ ದಿನಗಳಲ್ಲಿ ಸುರಕ್ಷತೆಯ ವಿಷಯದಲ್ಲಿ ಟೀಕೆಗೆ ಗುರಿಯಾಯಿತು. ಈಗ ಬಂದಿರುವ ಹೊಸ ಸುದ್ದಿಯೇನೆಂದರೆ 5.30 ಲಕ್ಷದಷ್ಟು ಝೂಮ್‌ ಖಾತೆಗಳು ಹ್ಯಾಕ್‌ ಆಗಿದ್ದು, ಡಾರ್ಕ್‌ವೆಬ್‌ನಲ್ಲಿ ಕೆಲವರು ಅತ್ಯಂತ ಅಗ್ಗದ ಬೆಲೆಗೆ, ಇನ್ನು ಕೆಲವರು ಉಚಿತವಾಗಿ ನೀಡುತ್ತಿದ್ದಾರಂತೆ!

ವ್ಯಕ್ತಿಗತ ಖಾತೆಗಳಷ್ಟೇ ಅಲ್ಲದೆ, ಕಾರ್ಪೋರೇಟ್‌ ಕಂಪನಿಗಳು ಖಾತೆಗಳು ಹ್ಯಾಕ್‌ ಆಗಿವೆ. ಈ ಕುರಿತು ಬ್ಲೀಪಿಂಗ್‌ ಕಂಪ್ಯೂಟರ್‌ ವರದಿ ಮಾಡಿದ್ದು, ತನಗೆ ಲಭ್ಯವಾಗಿರುವ ಹ್ಯಾಕ್‌ ಆದ ಖಾತೆಗಳ ವಿವರಗಳನ್ನು, ಖಾತೆಯ ಮಾಲೀಕರೊಂದಿಗೆ ಮಾತನಾಡಿ ಖಚಿತಪಡಿಸಿಕೊಂಡಿದೆ. ಯೂಸರ್‌ ನೇಮ್‌, ಪಾಸ್‌ವರ್ಡ್‌ಗಳು ಎಲ್ಲವೂ ಹೋಲಿಕೆಯಾಗಿರುವುದನ್ನು ಬ್ಲೀಪಿಂಗ್‌ ಕಂಪ್ಯೂಟರ್‌ ವರದಿಯಲ್ಲಿ ಹೇಳಿದೆ.

ಹಳೆಯ ಪಾಸ್‌ವರ್ಡ್‌ಗಳನ್ನೇ ಬಳಸಿರುವುದು ಹ್ಯಾಕರ್‌ಗೆ ಸುಲಭವಾಗಿ ಹ್ಯಾಕ್‌ ಮಾಡುವ ಅವಕಾಶವನ್ನು ಸೃಷ್ಟಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.