ಲಾಕ್‌ಡೌನ್‌ನಲ್ಲಿ ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಇಲ್ಲಿವೆ 5 ಉಚಿತ ಯೋಗ ಆ್ಯಪ್‌ಗಳು

ಲಾಕ್ ಡೌನ್ ಸಮದರ್ಭದಲ್ಲಿ ಯಾರು ಯೊಗ ಕಲಿಸುತ್ತಾರೆ? ಇದನ್ನು ಮನೆಯಲ್ಲಿಯೇ ಕಲಿಯಬಹುದೇ? ಯೋಗ ತರಗತಿಗಳಿಗೆ ತಗುಲುವ ಖರ್ಚು ಎಷ್ಟು? ಉಚಿತ ತರಗತಿಗಳು ಸಿಗಲಾರವೇ? ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉಂಟಾಗದೇ ಇರಲಾರವು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ

ಕೊರೋನಾ ಸಾಂಕ್ರಾಮಿಕ ರೋಗದಿಂದ ಹೇರಲ್ಪಟ್ಟ ಲಾಕ್ ಡೌನ್ ನಿಜಕ್ಕೂ ನಿಮ್ಮಲ್ಲಿ ದೈಹಿಕ ಮತ್ತು ಮಾನಸಿಕ ಅಸಮತೋಲನವನ್ನು ಸೃಷ್ಟಿಸಬಲ್ಲದು. ಇಂತಹ ಸಂದರ್ಭದಲ್ಲಿ ದೇಹದ ಆರೊಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅತ್ಯಗತ್ಯ. ಮನೆಯಲ್ಲಿಯೇ ಕುಳಿತು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವಂತಹ ಅತ್ಯುತ್ತಮ ದಾರಿ ಎಂದರೆ ಅದು ಯೋಗ. ಲಾಕ್ ಡೌನ್ ಸಂದರ್ಭದಲ್ಲಿ ಯಾರು ಯೊಗ ಕಲಿಸುತ್ತಾರೆ? ಇದನ್ನು ಮನೆಯಲ್ಲಿಯೇ ಕಲಿಯಬಹುದೇ? ಯೋಗ ತರಗತಿಗಳಿಗೆ ತಗುಲುವ ಖರ್ಚು ಎಷ್ಟು? ಉಚಿತ ತರಗತಿಗಳು ಸಿಗಲಾರವೇ? ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉಂಟಾಗದೇ ಇರಲಾರವು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ. 

ಈಗ ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಒಂದು ಇದ್ದರೆ ಸಾಕು, ಸುಲಭದಲ್ಲಿ ಯೋಗ ಕಲಿಯಬಹುದು. ಯಾವುದೇ ಖರ್ಚಿಲ್ಲದೇ, ಉಚಿತವಾಗಿ ಮನೆಯಲ್ಲಿಯೇ ಕುಳಿತು ಯೋಗ ಕಲಿಯಬಹುದಾದ ಉತ್ತಮ ಐದು ಆ್ಯಪ್’ಗಳ ಪಟ್ಟಿ ಇಲ್ಲಿದೆ. Google Play Storeನಲ್ಲಿ ಈ ಆ್ಯಪ್ ಗಳು ಲಭ್ಯವಿದ್ದು, ಯಾರು ಬೇಕಾದರೂ ಇವುಗಳಿಂದ ಯೋಗ ಕಲಿಯಬಹುದು. 

1. Yoga for Beginners Mind + Body 

ಈ ಆ್ಯಪ್ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಲಭ್ಯವಿದೆ. ಸಾಮಾನ್ಯವಾಗಿ ಯೋಗದ ಆಸನಗಳನ್ನು ಮಾತ್ರ ಹೇಳುವ ಆ್ಯಪ್ ಗಿಂತ ಇದು ಭಿನ್ನವಾಗಿದ್ದು, ನೀವು ಯೋಗ ಕಲಿಯುವವರಾಗಿದ್ದರೆ, ಯಾವ ಆಸನವನ್ನು ಯಾವಾಗ ಮತ್ತು ಹೇಗೆ ಪ್ರಯೋಗ ಮಾಡಬೇಕೆಂಬುದರ ಬಗ್ಗೆ ವಿಸ್ತೃತವಾದ ಮಾಹಿತಿ ನೀಡುತ್ತದೆ. ಉದಾಹರಣೆಗೆ, ಮುಂಜಾನೆ ಹೊತ್ತಲ್ಲಿ ಮಾಡುವ ಯೋಗಗಳ ಪಟ್ಟಿ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಪರಿಣಾಮಕಾರಿಯಾಗಬಲ್ಲ ಆಸನಗಳ ಪಟ್ಟಿ ಇಲ್ಲಿ ಲಭ್ಯವಿದೆ. ಯೋಗದ ಆರಂಭಿಕ ತರಗತಿಗಳನ್ನು ನೀವು ಯಶಸ್ವಿಯಾಗಿ ಪೂರೈಸಿದ್ದಲ್ಲಿ, ಮುಂದಿನ ಹಂತದ ಆಸನಗಳನ್ನು ಕಲಿಯಲು ಕೂಡಾ ನಿಮಗೆ ಅವಕಾಶವಿದೆ. 

ನೀವು ಐಫೋನ್ ಅಥವಾ ಆಪಲ್ ಕಂಪೆನಿಯ ಇತರೆ ಗ್ಯಾಡ್ಜೆಟ್ ಗಳನ್ನು ಬಳಸುವವರಾಗಿದ್ದರೆ, ಈ ಆ್ಯಪ್ ಅನ್ನು ಆ್ಯಪಲ್ ಹೆಲ್ತ್ ಆ್ಯಪ್ ಜೊತೆಗೆ ಇಂಟಿಗ್ರೇಟ್ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ತೂಕ ಇಳಿಕೆ, ಕ್ಯಾಲೋರಿ ಲೆಕ್ಕಾಚಾರ, ಆಸನಗಳು ಇತ್ಯಾದಿ ದತ್ತಾಂಶಗಳ ಕುರಿತು ಗಮನಹರಿಸಬಹುದಾಗಿದೆ. 

ನೀವು ಕಸ್ಟಮೈಸ್ಡ್ ಆಸನಗಳ ಆಯ್ಕೆಯನ್ನು ಬಳಸಿಕೊಂಡು ನಿಮಗೆ ಬೇಕಾದಂತಹ ಆಸನಗಳನ್ನು ಮಾತ್ರ ಕಲಿಯುವ ಅವಕಾಶವೂ ಇದೆ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ, ಈ ಆ್ಯಪ್ ನೂರಕ್ಕೆ ನೂರು ಶೇಕಡಾ ಉಚಿತ. ಇದೇ ಕಾರಣಕ್ಕಾಗಿ 70 ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್ ಗೆ 5 ಸ್ಟಾರ್ ರೇಟಿಂಗ್ ನೀಡಿದ್ದಾರೆ. 

2. Simply Yoga

ಯೋಗಕ್ಕೆ ಸಂಬಂಧಪಟ್ಟ ಆ್ಯಪ್ ಗಳಲ್ಲಿ ಸಿಂಪ್ಲಿ ಯೋಗ ಅತ್ಯಂತ ಜನಪ್ರಿಯ. ಯೋಗ ಕಲಿಯಲು ಆಸಕ್ತಿ ಹೊಂದಿರುವವರಿಗೆ ಈ ಆ್ಯಪ್ ಪರಿಣಾಮಕಾರಿಯಾಗಿ ಸಹಾಯ ಮಾಡಬಲ್ಲದು. ದಿನನಿತ್ಯ ಮಾಡಲೇಬೇಕಾದ ಆಸನಗಳ ಆರು ಕೆಟಗರಿಗಳು ಇಲ್ಲಿ ಲಭ್ಯ. ಇಪ್ಪತ್ತು ನಿಮಿಷದಿಂದ ಅರವತ್ತು ನಿಮಿಷಗಳ ವರೆಗಿನ ಯೋಗ ತಭೇತಿ ಇಲ್ಲಿ ದೊರೆಯುತ್ತದೆ. 

ಇದು ಕೇವಲ ಯೋಗವನ್ನು ಆರಂಭಿಸುವವರಿಗಾಗಿ ಮಾತ್ರವಲ್ಲ. ಈಗಾಗಲೇ ಯೋಗ ಕಲಿತು ಪರಿಣತರಾದವರೂ ಈ ಆ್ಯಪ್ ಬಳಸಬಹುದು. ಅವರಿಗಾಗಿಯೂ ಅತ್ಯುತ್ತಮ ಮಾಹಿತಿ ಇಲ್ಲಿ ಲಭ್ಯವಿದೆ. ವಿಶ್ವದಾದ್ಯಂತ ಪ್ರಸಾರಗೊಂಡ ಯೋಗ ತರಬೇತಿ ವೀಡಿಯೊಗಳು ಕೂಡಾ ಇಲ್ಲಿ ಲಭ್ಯವಿದೆ. ಇದೊಂದು ಉಚಿತ ಆ್ಯಪ್ ಆಗಿದ್ದರೂ, ಇಲ್ಲಿ ತರಬೇತಿ ನೀಡುವ ತರಬೇತಿದಾರರು ವೃತ್ತಿಪರ ಯೊಗಪಟುಗಳು. ಹಾಗಾಗಿ, ಯೋಗದ ಗುಣಮಟ್ಟದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ. 

3. Grokker 

ದೈನಂದಿನ ಜೀವನದಲ್ಲಿ ಯೊಗ ಅಳವಡಿಸಿಕೊಂಡು, ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಯೋಚಿಸುವವರಿಗೆ Grokker ಉತ್ತಮ ಆಯ್ಕೆ. ರಚನಾತ್ಮಕವಾದ ದಿನಚರಿಗೆ ಈ ಆ್ಯಪ್ ಸಹಕಾರಿ. 

ಹಲವು ಯೋಗಾಸನಗಳು ನಮಗೆ ಅರಿವಾಗುವುದೇ ಇಲ್ಲ. ಇಂತಹ ಆಸನಗಳನ್ನು ಕಲಿಯಲು ವೈಯಕ್ತಿಕ ಯೋಗ ತರಭೇತುದಾರರ ಅವಶ್ಯಕತೆಯಿದೆ ಎಂದು ಅನ್ನಿಸುವವರಿಗೆ ಈ ಆ್ಯಪ್ ಪರಿಣಾಮಕಾರಿಯಾಗಬಲ್ಲದು. ಸಾವಿರಕ್ಕೂ ಅಧಿಕ ವೀಡಿಯೊಗಳು ನಿಮಗೆ ಯೋಗ ಕಲಿಕೆಯ ಅತ್ಯುತ್ತಮ ಅನುಭವವನ್ನು ನೀಡಲಿವೆ. ಇಲ್ಲಿ ಕೇವಲ ಯೋಗ ಮಾತ್ರವಲ್ಲದೇ, ಆರೋಗ್ಯಕ್ಕೆ ಸಂಬಂಧಿಸಿದ ಇತರ ಸಲಹೆಗಳು, ಆರೋಗ್ಯಕರ ಆಹಾರ ಪದ್ದತಿಯ ಕುರಿತಾಗಿ ಕೂಡ ಮಾಹಿತಿ ಲಭ್ಯವಿದೆ. 

ಮೊದಲೇ ನಿಗದಿಪಡಿಸಿದ ವ್ಯಾಯಾಮಗಳು ಈ ಆ್ಯಪ್ ಅನ್ನು ಮತ್ತಷ್ಟು ಉತ್ತಮವಾಗಿಸುತ್ತವೆ. ಉದಾಹರಣೆಗೆ, ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿಲಿರುವ ಕ್ರೀಡಾಪಟುಗಳಿಗೆ 21 ದಿನದ ವ್ಯಾಯಾಮ ತರಬೇತಿಯನ್ನು ಈ ಆ್ಯಪ್ ನೀಡುತ್ತದೆ. ಕೇವಲ ವ್ಯಾಯಾಮವಷ್ಟೇ ಅಲ್ಲ, ಯಾವ ರೀತಿಯ ಆಹಾರ ಪದ್ದತಿ ಅನುಸರಿಸಬೇಕು, ಎಷ್ಟು ತೂಕ ಇಳಿಸಬೇಕು, ಮಾಂಸ ಖಂಡಗಳನ್ನು ಯಾವ ರೀತಿ ಬೆಳೆಸಬೇಕು ಎಂಬುದರ ಕುರಿತು ಸಮಗ್ರವಾದ ಮಾಹಿತಿಯನ್ನು ನಿಡುತ್ತದೆ. 

ನಿಮಗೆ ಇಷ್ಟವಾದ ವೀಡಿಯೋಗಳು, ಆಸನಗಳನ್ನು ಸೇವ್ ಮಾಡಿಕೊಳ್ಳುವುದು ಕೂಡಾ ಸುಲಭ. ರಚನಾತ್ಮಕವಾಗಿ ಯೊಗ ಕಲಿಯಲು ಈ ಆ್ಯಪ್ ನಿಜಕ್ಕೂ ಸಹಕಾರಿಯಾಗಬಲ್ಲದು. 

4. Underbelly

ಯೊಗ ನನಗೆ ತಕ್ಕುದಾದ ವ್ಯಾಯಾಮ ಮಾದರಿಯಲ್ಲ ಎಂಬ ಪೂರ್ವಾಗ್ರಹ ಪೀಡಿತ ಆಲೋಚನೆ ಉಳ್ಳವರ ಯೋಚನಾ ಲಹರಿಯನ್ನು ಬದಲಾಯಿಸುವಂತಹ ಆ್ಯಪ್ ಇದು. ಯಾವುದೇ ವಯಸ್ಸಿನ, ಯಾವುದೇ ಹಂತದ ಫಿಟ್ನೆಸ್ ಹೊಂದಿರುವವರು ಯೋಗ ಮಾಡಬಹುದು ಎಂಬುದನ್ನು ಈ ಆ್ಯಪ್ ನಿರೂಪಿಸುತ್ತದೆ. 

ತಮ್ಮ ದೇಹವನ್ನು ಅರ್ಥೈಸಿಕೊಂಡು ಅದಕ್ಕೆ ಗೌರವ ನಿಡುವ ಕಲೆಯನ್ನು ಈ ಆ್ಯಪ್ ಕಲಿಸುತ್ತದೆ. ಅತ್ಯಂತ ಆರಾಮದಾಯಕ ಹಾಗೂ ಮೋಜಿನಿಂದ ಕೂಡಿದ ಯೋಗ ತರಬೇತಿ ಇಲ್ಲಿ ಸಿಗಲಿದೆ. ಪ್ರತಿ ಸೆಷನ್ ನಂತರ ನಿಮ್ಮ ದೇಹದಲ್ಲಿ ಧನಾತ್ಮಕವಾದ ಬದಲಾವಣೆಯನ್ನು ಗಮನಿಸಲು ಸಾಧ್ಯ ಎಂದು ಈ ಆ್ಯಪ್ ಬಳಕೆದಾರರು ಹೇಳುತ್ತಾರೆ. ದೇಹದ ರಚನಾತ್ಮಕ ಬೆಳವಣಿಗೆಗೆ ಈ ಆ್ಯಪ್ ಅತ್ಯಂತ ಸಹಕಾರಿ. 

5. 5 Minute Yoga

ನಮ್ಮ ಪಟ್ಟಿಯ ಕೊನೇಯ ಸಲಹೆ ಫೈವ್ ಮಿನಿಟ್ ಯೋಗ. ಎಲ್ಲರಿಗೂ ಪ್ರತಿದಿನ ಅರ್ಧ ಗಂಟೆ, ಒಂದು ಗಂಟೆ ಯೋಗ ಮಾಡುವಷ್ಟು ಸಮಯವಿರುವುದಿಲ್ಲ, ಅಥವಾ ಅಷ್ಟು ಸಮಯ ವ್ಯಯಿಸಲು ಇಚ್ಚೆಯಿರುವುದಿಲ್ಲ. ಅಂತಹವರಿಗಾಗಿ ತಯಾರಾದ ಆ್ಯಪ್ ಇದು. ಜನರು ತಮ್ಮ ಕೆಲಸದ ನಡುವೆಯೂ ಪ್ರತಿದಿನ ಮಾಡಬಹುದಾದ ಸಾಮಾನ್ಯ ಯೋಗ ಮಾದರಿಗಳನ್ನು ಇಲ್ಲಿ ಕಲಿಯಬಹುದಾಗಿದೆ. ಈ ಆ್ಯಪ್ ನ ವಿಶೇಷತೆಯೆಂದರೆ ಎಲ್ಲಾ ಯೋಗಾಸನಗಳು ಐದು ನಿಮಿಷದ ಒಳಗಾಗಿ ಮುಗಿಯುತ್ತದೆ! 

ಯೋಗ ಕಲಿಯಲು ಆರಂಭಿಸಿದವರಿಗೆ ಇದೊಂದು ಅತ್ಯುತ್ತಮ ಆ್ಯಪ್ ಎಂದು ಹೇಳಬಹುದು. ಹೆಚ್ಚಿನ ಸಮಯ ವ್ಯಯಿಸದೇ, ಸುಲಭದಲ್ಲಿ ಯೋಗ ಕಲಿಯಲು ಈ ಆ್ಯಪ್ ಸಹಕಾರಿ. ತಮ್ಮ ದಿನ ಆರಂಭಿಸಲು ಹಾಗೂ ದಿನವನ್ನು ಕೊನೆಗೊಳಿಸಲು ಈ ಆ್ಯಪ್ ಬಳಸಬಹುದು. ಕೆಲಸದ ಬಿಡುವಿನ ವೇಳೆಯಲ್ಲಿ ಮನಸ್ಸನ್ನು ಸಂತೋಷವಾಗಿರಿಸಲು ಇಲ್ಲಿನ ವ್ಯಾಯಾಮಗಳು ನಿಮಗೆ ಸಹಾಯ ಮಾಡಬಲ್ಲವು. 

ರಚನಾತ್ಮಕವಾದ ಯೋಗಾಸನಗಳ ಕಲಿಕೆ ಎಂತಹವರನ್ನು ಕೂಡಾ ಯೋಗದೆಡೆಗೆ ಸೆಳೆಯುವ ಕ್ಷಮತೆಯನ್ನು ಹೊಂದಿದೆ. ಆಸನಗಳ ಕೂಲಂಕುಷ ವಿವರಣೆ ಹೊಸ ಯೊಗಾಸಕ್ತರಿಗೆ ಉತ್ತಮ ಅನುಭವ ನಿಡುತ್ತದೆ. 

ಈ ಐದು ಯೋಗ ಆ್ಯಪ್ ಗಳು ಈ ಬಾರಿಯ ಲಾಕ್ ಡೌನ್’ನಲ್ಲಿ ನಿಮಗೆ ನಿಮ್ಮ ಮನಸ್ಸನ್ನು ಉಲ್ಲಾಸದಿಂದ ಇರಿಸಿಕೊಳ್ಳಲು ಸಹಾಕಾರಿಯಾಗುವುದರಲ್ಲಿ ಸಂಶಯವಿಲ್ಲ. ದುಬಾರಿ ಯೊಗ ಸ್ಟುಡಿಯೋಗಳ ಜಂಜಾಟದಿಂದ ದೂರ ಉಳಿದು ಮನೆಯಿಂದಲೇ ಯೋಗ ಕಲಿಯಲು ಈ ಆ್ಯಪ್ ಗಳು ನಿಮಗೆ ದಾರಿ ತೋರಲಿವೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.