7 ಲಕ್ಷಕ್ಕೂ ಅಧಿಕ ಹೊಸ ವಾಹನ ಶೋರೂಮುಗಳಲ್ಲಿ ಲಾಕ್ ಡೌನ್

ಮಾರ್ಚ್‌ 41ರಂದು ಬಿಎಸ್‌ 4 ವಾಹನಗಳ ನೋಂದಣಿಗೆ ಕೊನೆಯ ದಿನ. 21 ದಿನಗಳ ಕಾಲ ದೇಶಾದ್ಯಂತ ಕರೋನಾದಿಂದಾಗಿ ಲಾಕ್‌ಡೌನ್‌ ಘೋಷಿಸಿರುವ ಕಾರಣ ಇವು ಗಡುವಿನ ಒಳಗೆ ಬಿಕರಿಯಾಗುವುದು ಅಸಾಧ್ಯ

ಮಾರ್ಚ್‌ 41ರಂದು ಬಿಎಸ್‌ 4 ವಾಹನಗಳ ನೋಂದಣಿಗೆ ಕೊನೆಯ ದಿನ. ಆದರೆ ಪ್ರಸ್ತುತ 7 ಲಕ್ಷ ದ್ವಿಚಕ್ರ ವಾಹನಗಳು, 12000 ಕಾರುಗಳು ಹಾಗೂ 8000 ವಾಣಿಜ್ಯ ವಾಹನಗಳು ಡೀಲರ್‌ಗಳ ಬಳಿ ಉಳಿದಿವೆ. 21 ದಿನಗಳ ಕಾಲ ದೇಶಾದ್ಯಂತ ಕೊರೋನಾದಿಂದಾಗಿ ಲಾಕ್‌ಡೌನ್‌ ಘೋಷಿಸಿರುವ ಕಾರಣ ಇವು ಗಡುವಿನ ಒಳಗೆ ಬಿಕರಿಯಾಗುವುದು ಅಸಾಧ್ಯ.

ಈ ಸಂಬಂಧ ಬಿಎಸ್‌4 ಗಡುವನ್ನು ಮೇ ಕೊನೆಯ ವರೆಗೆ ವಿಸ್ತರಿಸಬೇಕು ಎಂದು ಕೋರಿ ವಾಹನ ಡೀಲರ್‌ಗಳ ಒಕ್ಕೂಟ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಇದೊಂದು ಭಿನ್ನ ಸನ್ನಿವೇಶ. ಡೀಲರ್‌ಗಳು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲ ಎಂದು ಒಕ್ಕೂಟದ ಅಧ್ಯಕ್ಷ ಆಶಿಶ್‌ ಕಾಳೆ ತಿಳಿಸಿದ್ದಾರೆ. ಈ ಕುರಿತ ವಿಚಾರಣೆ ಮಾ. 27ಕ್ಕೆ ನ್ಯಾಯಪೀಠದ ಮುಂದೆ ಬರಲಿದೆ. ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಅಕಸ್ಮಾತ್‌ ನ್ಯಾಯಾಲಯದ ಮೂಲಕ ಗಡುವು ವಿಸ್ತರಣೆ ಆಗದೇ ಇದ್ದ ಪಕ್ಷದಲ್ಲಿ ಡೀಲರ್‌ಶಿಪ್‌ಗಳು ತಯಾರಕರಿಗೆ ವಾಹನ ಮರಳಿಸುವ ಕುರಿತು ಚಿಂತನೆ ನಡೆಸಲು ಒಕ್ಕೂಟ ತೀರ್ಮಾನಿಸಿದೆ.

ಕೋವಿಡ್‌-19ರಿಂದಾಗಿ ಪ್ರಸ್ತುತ ಉಂಟಾಗಿರುವ ಆರ್ಥಿಕ ಕುಸಿತದ ಪರಿಣಾಮ ವಾಹನೋದ್ಯಮ ನಿತ್ಯ 1500 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.