ಹತ್ತು ವರ್ಷಗಳ ಬಳಿಕ ಹೊಸ ವಿನ್ಯಾಸದಲ್ಲಿ ಬರಲಿದೆ ವಿಕಿಪಿಡೀಯಾ

ಮುಕ್ತ ಮಾಹಿತಿಯ ಆಶಯದೊಂದಿಗೆ ರೂಪುಗೊಂಡ ವಿಕಿಪೀಡಿಯಾ ಬಳಕೆದಾರರಿಂದಲೇ ಶ್ರೀಮಂತಗೊಂಡ ಆನ್‌ಲೈನ್‌ ವಿಶ್ವಕೋಶ. ಇಪ್ಪತ್ತು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಹೊಸ ವಿನ್ಯಾಸದಲ್ಲಿ 2021ರ ಅಂತ್ಯಕ್ಕೆ ಅನಾವರಣಗೊಳ್ಳುತ್ತಿದೆ

ಒಂದು ಕಾಲವಿತ್ತು ಜಗತ್ತಿನ ಯಾವುದೇ ಮಾಹಿತಿ ಬೇಕಾದರೆ ಬ್ರಿಟಾನಿಕಾ ಅಥವಾ ಅಮೆರಿಕನ್‌ ವಿಶ್ವಕೋಶಗಳನ್ನು ತಡಕಾಡಲಾಗುತ್ತಿತ್ತು. ಆದರೆ ಅವುಗಳನ್ನು ಕೊಳ್ಳುವುದು ಮತ್ತು ಸಂಗ್ರಹಿಸಿಟ್ಟುಕೊಳ್ಳುವುದು ಎರಡೂ ಸವಾಲಿನ ಕೆಲಸವಾಗಿತ್ತು.

ಇಂಟರ್ನೆಟ್‌ ಮಾಹಿತಿ ವಿನಿಮಯದ ಆಯಾಮವನ್ನೇ ಬದಲಿಸಿತು. ಇದರಿಂದಾಗಿ ವಿಶ್ವಕೋಶದ ಕಲ್ಪನೆಯೂ ಬದಲಾಯಿತು. ಬಳಕೆದಾರರೇ ತಮ್ಮ ಬಳಿ ಇರುವ ಮಾಹಿತಿಯನ್ನು ಒಂದು ತಾಣದಲ್ಲಿ ಬರೆಯುವ, ಒಂದು ವೇಳೆ ಅದರಲ್ಲಿ ತಪ್ಪಿದ್ದಲ್ಲಿ, ಅದರ ಅದೇ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗಿದ್ದಲ್ಲಿ ಮಾಹಿತಿ ಸೇರಿಸುವ ಕೆಲಸವನ್ನು ಮಾಡುವ ಮುಕ್ತ ವೇದಿಕೆ ಕಲ್ಪಿಸುವ ಕಲ್ಪನೆಯೊಂದು ಮೊಳಕೆಯೊಡೆಯಿತು. ಅದೇ ವಿಕಿಪೀಡಿಯಾ

ಸುಮಾರು ಎರಡು ದಶಕಗಳಿಂದ ಜಗತ್ತಿನ ಕನ್ನಡವೂ ಸೇರಿದಂತೆ ಜಗತ್ತಿನ 300 ಭಾಷೆಗಳಲ್ಲಿ 53 ಕೋಟಿ ಬರಹಗಳನ್ನು ಹೊಂದಿರುವ ಈ ತಾಣ ಜಾಹೀರಾತುಗಳ ಕಿರಿಕಿರಿ ಇಲ್ಲದ ಅತಿ ಹೆಚ್ಚು ಬಳಕೆಯಲ್ಲಿರುವ ತಾಣವಾಗಿ ಜನಪ್ರಿಯವಾಗಿದೆ. ಲಾಭರಹಿತ ಸಂಸ್ಥೆಯಾದ ವಿಕಿಮೀಡಿಯಾ ಪ್ರತಿಷ್ಠಾನದ ಒಂದು ಸೇವೆಯಾಗಿ ಆರಂಭವಾದ ವಿಕಿಪೀಡಿಯಾ ಇಂದು ಹೊಸ ರೂಪದಲ್ಲಿ ಅನಾವರಣಗೊಳ್ಳುವುದಕ್ಕೆ ಸಿದ್ಧವಾಗುತ್ತಿದೆ.

ಬಳಕೆದಾರರ ದೃಷ್ಟಿಯಿಂದ ಇನ್ನಷ್ಟು, ಸರಳವೂ, ಸುಲಭವೂ, ಆಕರ್ಷಕವೂ ಆಗಿ ಹೊಮ್ಮಬೇಕೆಂಬ ಆಶಯದೊಂದಿಗೆ ವಿಕಿಪೀಡಿಯಾ ಮರುವಿನ್ಯಾಸಗೊಳ್ಳುತ್ತಿದೆ.

ಹೆಚ್ಚು ಅಕ್ಷರ ಪ್ರಧಾನವಾದ ಈ ತಾಣ ಅಷ್ಟೇನೂ ಆಕರ್ಷಕವಾಗಿಲ್ಲ ಎಂಬ ದೂರನ್ನಂತು ಕೇಳುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಹೊಸ ಓದುಗರನ್ನು ಸೆಳೆಯುವ ದೃಷ್ಟಿಯಿಂದ, ಹಳೆಯ ಓದುಗರನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಮುಂದಾಗಿದೆ.

ಡೆಸ್ಕ್‌ಟಾಪ್‌ನಲ್ಲಿ ಬಳಸುವವರಿಗೆ ಹೊಂದುವಂತೆ ಅಗತ್ಯ ಬದಲಾವಣೆಗಳನ್ನು ತರಲಾಗಿದ್ದು, ಆನಿಮೇಟೆಡ್‌ ಜಿಫ್‌ಗಳನ್ನು ಪರಿಚಯಿಸಲಾಗುತ್ತಿದೆ. ಜೊತೆಗೆ ಸೈಡ್‌ಬಾರ್‌, ಕಂಟೆಂಟ್‌ ಪೇಜ್‌ಗಳ ಅಳತೆಯಲ್ಲಿ ಬದಲಾವಣೆ ಸೇರಿದಂತೆ ಹಲವು ಮಹತ್ವದ ಸುಧಾರಣೆಗಳು ಕಾಣಿಸಿಕೊಳ್ಳಲಿವೆ.

ಇದನ್ನೂ ಓದಿ | 220 ಮೊಬೈಲ್‌ ಆಪ್‌ಗಳ ಮಾಹಿಗೆ ಕನ್ನ ಹಾಕಿರುವ ಏಲಿಯನ್‌ ಎಂಬ ಮಾಲ್‌ವೇರ್‌

ವಿಕಿಪೀಡಿಯಾ ಕುರಿತ ಸಾಕ್ಷ್ಯಚಿತ್ರ:

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.