ಆಲ್ಬರ್ಟ್‌ ಐನ್‌ಸ್ಟೀನ್‌ ಜನ್ಮದಿನ | ಈ ಅಪೂರ್ವ ಮೇಧಾವಿಯ ಮಿದುಳು ಹೇಗಿತ್ತು ಗೊತ್ತಾ?

ಅಗಾಧ ಬೌದ್ಧಿಕ ಸಾಮರ್ಥ್ಯವಿದ್ದ ಅಪರೂಪದ ವ್ಯಕ್ತಿ, ವಿಜ್ಞಾನಿ ಎಂದು ನಾವು ಐನ್‌ಸ್ಟೀನ್‌ರನ್ನು ಇಂದಿಗೂ ಕೊಂಡಾಡುತ್ತೇವೆ. ಅವರ ಮಿದುಳು ಬಹಳ ಭಿನ್ನವಾಗಿದ್ದುದು ಅವರ ಈ ಸಾಮರ್ಥ್ಯಕ್ಕೆ ಕಾರಣ. ಅವರ ಮಿದುಳಿನ ರಚನೆ ಹೇಗಿತ್ತು ಈ ಚಿತ್ರ ಸರಣಿ ನೋಡಿ

ಆಲ್ಬರ್ಟ್‌ ಐನ್‌ಸ್ಟೀನ್‌ 1955ರ ಏಪ್ರಿಲ್‌ 18ರಂದು ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ನಲ್ಲಿ ತೀರಿಕೊಂಡರು. ಆಗ ಅವರಿಗೆ 76 ವರ್ಷ. ಈ ಅವಧಿಯಲ್ಲಿ ಪ್ರಪಂಚವನ್ನು ಬೆರಗಾಗಿಸುವ, ಬೆಚ್ಚಿಬೀಳಿಸುವ ಸಂಶೋಧನೆಗಳನ್ನು ನೀಡಿದ್ದರು. ಅವರ ಬೌದ್ಧಿಕ ಸಾಮರ್ಥ್ಯವೇ ಒಂದು ವಿಸ್ಮಯವಾಗಿತ್ತು. ಸಾವಿನ ನಂತರ ಸಹಜವಾಗಿಯೇ ನಡೆಸುವ ಶವಪರೀಕ್ಷೆಯ ವೇಳೆ ವೈದ್ಯರು ಅವರ ಮಿದುಳನ್ನು ವಿಶೇಷವಾಗಿ ಗಮನಿಸಿದ್ದರು.

ಶವಪರೀಕ್ಷೆಯಲ್ಲಿ ಪಾಲ್ಗೊಂಡ ವೈದ್ಯರಲ್ಲಿ ಒಬ್ಬರು ಥಾಮಸ್‌ ಹಾರ್ವೆ. ಅವರು ಐನ್‌ಸ್ಟೀನ್‌ ಅವರ ಮಿದುಳನ್ನು ತಮ್ಮ ಬಳಿಯೇ ಉಳಿಸಿಕೊಂಡರು! ನಂತರ ಮಿದುಳಿನ ಕೋಶಗಳನ್ನು ಹಲವು ಪದರಗಳಲ್ಲಿ ಕತ್ತರಿಸಿ ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ನಡೆಸಿದರು.

ಅಸಾಧಾರಣ ಬೂದು ದ್ರವ್ಯ

ನರಮಂಡಲದಲ್ಲಿ ಗ್ರೇಮ್ಯಾಟರ್‌ ಅಂದರೆ ಬೂದುಬಣ್ಣದ ದ್ರವ್ಯಕ್ಕೆ ವಿಶೇಷ ಸ್ಥಾನವಿದೆ. ಇದು ನ್ಯೂರೊನಾಲ್‌ ಕೋಶಗಳನ್ನು ಹೊಂದಿರುತ್ತವೆ. ಈ ಕೋಶಗಳು ದೇಹದ ಸ್ನಾಯುಗಳ ನಿಯಂತ್ರಣ, ಸಂವೇದನೆಗಳ ಗ್ರಹಿಕೆ- ಅಂದರೆ ನೋಡುವುದು ಮತ್ತು ಕೇಳುವುದು, ಸ್ಮರಣೆ, ಭಾವನೆಗಳು, ಮಾತು, ಸ್ವ ನಿಗ್ರಹ. ಇತ್ಯಾದಿ. ಇಂಥ ಬೂದು ಬಣ್ಣದ ದ್ರವ್ಯ ಐನ್‌ಸ್ಟೀನ್‌ ಅವರ ಮಿದುಳಿನಲ್ಲಿ ಸಾಮಾನ್ಯ ಮನುಷ್ಯನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿತ್ತು ಎಂಬುದನ್ನು ಹಾರ್ವೆ ಗುರುತಿಸಿದರು. ಈ ಅಧ್ಯಯನ ನಡೆಸುವ ವೇಳೆ ಅವರ ತೆಗೆದ ಹದಿನಾಲ್ಕು ಚಿತ್ರಗಳು ಈಗ ಸಾರ್ವಜನಿಕವಾಗಿ ಲಭ್ಯ ಇವೆ.

ಹೆಚ್ಚು ಮಡಿಕೆಗಳು, ಅತಿ ಕ್ರಿಯಾಶೀಲ ಮಿದುಳು

ಮೇಲೆ ಉಲ್ಲೇಖಿಸಿದ ಫೋಟೋಗಳನ್ನು ಆಧರಿಸಿ ನಡೆದ ಅಧ್ಯಯನದಿಂದ ಕಂಡು ಬಂದ ಮತ್ತೊಂದು ಸಂಗತಿಯೆಂದರೆ ಐನ್‌ಸ್ಟೀನ್‌ ಅವರ ಮಿದುಳಿನ ಸೆರೆಬ್ರಲ್‌ ಕಾರ್ಟೆಕ್ಸ್‌ ಅಸಹಜವಾದ, ಅಂದರೆ ಅಸಾಧಾರಣವಾದ ಮಡಿಕೆಗಳು ಇರುವುದನ್ನು ಗುರುತಿಸಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಈ ಮಡಿಕೆಗಳು ಐನ್‌ಸ್ಟೀನ್‌ ಅವರ ಮಿದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸಿದ್ದವು ಎಂದು ತಜ್ಞರು ವಿಶ್ಲೇಷಿಸಿದರು.

ಅಸಮ, ಆದರೆ ಸುಂದರ!

ಐನ್‌ಸ್ಟೀನ್‌ ಮಿದುಳಿನ ಹಿಂಭಾಗದಲ್ಲಿ ಹಾಲೆಗಳು (ಲೋಬ್ಸ್‌) ಅಸಮ ಪ್ರಮಾಣದಲ್ಲಿ ಹಂಚಿಕೆಯಾಗಿದ್ದವು. ಇದು ಅವರ ಗ್ರಹಿಕೆಯ ಸಾಮರ್ಥ್ಯ ಹೆಚ್ಚುವುದಕ್ಕೆ ನೆರವಾಯಿತು. 199ರಲ್ಲಿ ಲಾನ್ಸೆಟ್‌ನಲ್ಲಿ ನಡೆದ ಒಂದು ಅಧ್ಯಯನ ಐನ್‌ಸ್ಟೀನ್‌ ಅವರ ಮಿದುಳಿನಲ್ಲಿ ಒಂದು ಭಾಗ ಸಂಪೂರ್ಣವಾಗಿ ಇರಲೇ ಇಲ್ಲ ಎಂದು ಗುರುತಿಸಿತು. ಈ ಸ್ಥಳವನ್ನು ಹಿಂಭಾಗದ ಲೋಬ್ಸ್‌ಗಳಿಗೆ ಹೆಚ್ಚು ಸ್ಥಳ ನೀಡಿದ್ದು ಐನ್‌ಸ್ಟೀನ್‌ ಬೌದ್ಧಿಕ ಸಾಮರ್ಥ್ಯಕ್ಕೆ ಬಲ ನೀಡಿತು.

ಸಹಜ ಬುದ್ಧಿವಂತ

ಐನ್‌ಸ್ಟೀನ್‌ ಮಿದುಳಿನ ಮುಂಭಾಗದ ಲೋಬ್‌ ಹೆಚ್ಚಿನ ಮಡಿಕೆಯನ್ನು ಹೊಂದಿತ್ತು. ಇದು ಅಸಂಗತವಾದ ಚಿಂತನೆ ಮತ್ತು ಮುಂದಾಗುವುದನ್ನು ಗ್ರಹಿಸುವ ಸಾಮರ್ಥ್ಯವನ್ನು ನೀಡುವ ಅಂಶವಿದು. ಸಾಮಾನ್ಯ ಮನುಷ್ಯನಲ್ಲಿ ಕಾಣುವುದಕ್ಕೆ ಒಂದು ಹೆಚ್ಚಿನ ಮಡಿಕೆ ಐನ್‌ಸ್ಟೀನ್‌ ಅವರ ಮಿದುಳಿನಲ್ಲಿ ಇತ್ತು.

ಹಲವು ಭಿನ್ನತೆಗಳನ್ನು ಹೊಂದಿದ್ದ ಐನ್‌ಸ್ಟೀನ್‌ ಅವರ ಮಿದುಳು, ಅಹಜವಾಗಿತ್ತಾದರೂ, ವಿಜ್ಞಾನ ಲೋಕಕ್ಕೆ ಮತ್ತು ಮನುಕುಲಕ್ಕೆ ಅಗಾಧ ಕೊಡುಗೆಯನ್ನೇ ನೀಡಲು ಕಾರಣವಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.