220 ಮೊಬೈಲ್‌ ಆಪ್‌ಗಳ ಮಾಹಿಗೆ ಕನ್ನ ಹಾಕಿರುವ ಏಲಿಯನ್‌ ಎಂಬ ಮಾಲ್‌ವೇರ್‌

ಸಂಪೂರ್ಣ ಇಂಟರ್ನೆಟ್‌ ಅವಲಂಬಿತವಾಗಿರುವ ಈ ಕಾಲ ಅನೇಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಿಕೊಟ್ಟಿದೆ. ಅದರಲ್ಲಿ ಮಾಹಿತಿ ಕಳ್ಳರೂ ಇದ್ದಾರೆ. ಏಲಿಯನ್‌ ಎಂಬ ಮಾಲ್‌ವೇರ್‌ ಹರಿಬಿಡಲಾಗಿದ್ದು, ಅದೀಗ ಮಾಹಿತಿಗೆ ಕನ್ನ ಹಾಕುತ್ತಿದೆ!!

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ನಾವು ಇಂಟರ್ನೆಟ್‌ ಅವಲಂಬನೆ ಹೆಚ್ಚಾಗಿದೆ. ಖರೀದಿ, ಮಾಹಿತಿ ವಿನಿಮಯ, ಸಂವಹನೆಲ್ಲವೂ ಆಪ್‌ಗಳ ಮೂಲಕವೇ ನಡೆಯುತ್ತಿದೆ.

ಹಲವು ಕಾರಣಗಳಿಗೆ ಟೆಕ್‌ಗಳಿಗೆ ಇದೊಂದು ಸದಾವಕಾಶ. ಹಾಗೆಯೇ ಕನ್ನ ಹಾಕುವವರಿಗೂ ಇದು ಅವಕಾಶ.

ಥ್ರೆಟ್‌ಫ್ಯಾಬ್ರಿಕ್‌ ಎಂಬ ಸಂಸ್ಥೆಯ ಸಂಶೋಧಕರು ಅಂತಹದ್ದೇ ಒಂದು ಬೆಳವಣಿಗೆಯನ್ನು ಗುರುತಿಸಿದ್ದಾರೆ. ಏಲಿಯನ್‌ ಹೆಸರಿನ ಟ್ರೋಜಲ್‌ ಮಾಲ್‌ವೇರ್‌ವೊಂದನ್ನು ಮಾಹಿತಿ ಕಳ್ಳರು ಹರಿಯಬಿಟ್ಟಿದ್ದಾರೆ ಎಂದು ಅದು ಗುರುತಿಸಿದೆ.

ಜಿಮೇಲ್‌, ಫೇಸ್‌ಬುಕ್‌,ಟ್ವಿಟರ್‌, ವಾಟ್ಸ್‌ಆಪ್‌, ಸ್ನ್ಯಾಪ್‌ಚಾಟ್‌, ಅಷ್ಟೇ ಏಕೆಯ ಅತ್ಯಂತ ಗೌಪ್ಯ ಎನ್ನಲಾದ ಟೆಲಿಗ್ರಾಮ್‌ ಸೇರಿದಂತೆ 220 ಮೊಬೈಲ್‌ ಅಪ್ಲಿಕೇಷನ್‌ಗಳ ಬಳಕೆದಾರರ ಮಾಹಿತಿಯನ್ನು ಇದು ಕದಿಯುತ್ತಿದೆಯಂತೆ.

ಬ್ಯಾಂಕಿಂಗ್‌ ಆಪ್‌ಗಳೇ ಮುಖ್ಯ ಗುರಿಯಾಗಿದ್ದು, ಸೋಷಿಯಲ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಫಿಶಿಂಗ್‌ ಉದ್ದೇಶದ ಸುಳ್ಳು ಪೇಜ್‌ಗಳನ್ನು ಪ್ರದರ್ಶಿಸಿ, ಬಳಕೆದಾರರನ್ನು ಹಾದಿ ತಪ್ಪಿಸುವೆ ಎಂದು ಥ್ರೆಟ್‌ ಫ್ಯಾಬ್ರಿಕ್‌ ಎಚ್ಚರಿಸಿದೆ.

ನಮ್ಮ ಎಸ್ಸೆಮ್ಮೆಸ್‌ಗಳನ್ನು, ಕಾಂಟ್ಯಾಕ್ಟ್‌ ಲಿಸ್ಟನ್ನು ಇದು ನಕಲು ಮಾಡಿಕೊಳ್ಳಲು ಸಮರ್ಥವಾಗಿದ್ದು, ಅತಿ ಹೆಚ್ಚು ಹಾನಿ ಉಂಟು ಮಾಡುವ ಶಕ್ತಿಯನ್ನು ಈ ಏಲಿಯನ್‌ ಎಂಬ ಮಾಲ್‌ವೇರ್‌ ಹೊಂದಿರುವುದಾಗಿ ತಿಳಿಸಿದೆ.

ಇದನ್ನೂ ಓದಿ | ದಿ ಸೋಷಿಯಲ್‌ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್‌ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ

the social dilemma
https://techkannada.in/the-social-dilemma-unvails-the-wicked-side-of-social-media/

ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಲ್‌ವೇರ್‌ಗಳ ದಾಳಿ ನಡೆಯಬಹುದು ಎಂದೂ ಥ್ರೆಟ್‌ ಫ್ಯಾಬ್ರಿಕ್‌ ಸಂಶೋಧನೆ ಹೇಳಿದೆ.

Subscribe to our newsletter!

ಟೆಕ್‌ಕನ್ನಡ ಫೇಸ್‌ಬುಕ್‌ ಲೈಕ್‌ ಮಾಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.