ಅಮೆಜಾನ್ ಪ್ರೈಮ್ ಡೇ ಸೇಲ್: ಇಲ್ಲಿದೇ ಲಾಂಚ್ ಆಗುವ ಫೋನ್‌ಗಳ ಲಿಸ್ಟ್

ಅಮೆಜಾನ್ ಪ್ರೈಮ್ ಡೇ ಮಾರಾಟವು ಆಗಸ್ಟ್ 6 ರಿಂದ ಪ್ರಾರಂಭವಾಗಲಿದ್ದು, ಎರಡು ದಿನಗಳ ಮಾರಾಟವು ಆಗಸ್ಟ್ 7 ರಂದು ರಾತ್ರಿ 11:59 ರವರೆಗೆ ನಡೆಯುತ್ತದೆ. ಪ್ರೈಮ್ ಡೇ ಮಾರಾಟವು ಅಮೆಜಾನ್‌ನ ವಾರ್ಷಿಕ ಮಾರಾಟವಾಗಿದ್ದು, ಪ್ರೈಮ್ ಸದಸ್ಯರಿಗಾಗಿ ಮಾತ್ರ ಆಯೋಜನೆ ಮಾಡಲಿದೆ.

ಅಮೆಜಾನ್ ಎರಡು ದಿನಗಳ ಮಾರಾಟದ ಸಮಯದಲ್ಲಿ ಮೊದಲ ಬಾರಿಗೆ ಹಲವು ಗ್ಯಾಜೆಟ್‌ಗಳು ತಮ್ಮ ಮಾರಾಟವನ್ನು ಆರಂಭಿಸಲಿವೆ.  ಈ ಹಿನ್ನಲೆಯಲ್ಲಿ ಈ ಸಂದರ್ಭದಲ್ಲಿ ಮಾರಾಟವಾಗಲಿರುವ ಕೆಲವು ಸಾಧನಗಳ ಪಟ್ಟಿಯನ್ನು ಇಲ್ಲಿ ತಿಳಿಸಲಿದ್ದೇವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M 31s :ರೂ.19,499

64 MP ಕ್ವಾಡ್ ಕ್ಯಾಮೆರಾವನ್ನು ಹೊ೦ದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ M 31s ಪ್ರೈಮ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅಮೋಲ್ಡ್ ಎಫ್‌ಹೆಚ್‌ಡಿ + ಇನ್ಫಿನಿಟಿ-ಒ ಡಿಸ್ಪ್ಲೇ ಹೊಂದಿದೆ. ಇದು 6000mAh ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದೆ.

ಹಾನರ್ 9 A: ರೂ. 11,999

ಹಾನರ್ 9 A ಅನ್ನು ಜುಲೈ 31 ರಂದು ಬಿಡುಗಡೆ ಮಾಡಲಾಗಿದ್ದು, ಸ್ಮಾರ್ಟ್ಫೋನ್ 5000 mAh  ಬ್ಯಾಟರಿಯನ್ನು ಹೊಂದಿದ್ದು 13 MP ಟ್ರಿಪಲ್ ರಿಯರ್ ಕ್ಯಾಮೆರಾವನ್ನು ನೀಡುತ್ತದೆ. ಇದನ್ನು ಅಮೆಜಾನ್‌ನಲ್ಲಿ 11,999 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಒನ್‌ಪ್ಲಸ್ ನಾರ್ಡ್:

ಇತ್ತೀಚೆಗೆ ಬಿಡುಗಡೆಯಾದ ಕೈಗೆಟುಕುವ ದರದ ಒನ್‌ಪ್ಲಸ್ ಫೋನ್, ಒನ್‌ಪ್ಲಸ್ ನಾರ್ಡ್ ಆಗಸ್ಟ್ 6 ರಂದು ತನ್ನ ಮೊದಲ ಮಾರಾಟ ಆರಂಭಿಸಲಿದೆ. ಪ್ರೈಮ್ ಸದಸ್ಯರು ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಒನ್‌ಪ್ಲಸ್ ನಾರ್ಡ್ (12GB ಮಾದರಿ) ಬ್ಲೂ ಮಾರ್ಬಲ್ ರೂಪಾಂತರವನ್ನು ಖರೀದಿಸಬಹುದು.

ಒಪ್ಪೊ A 52 : ರೂ. 18,990

ವಾಟರ್ ಡ್ರಾಪ್ ನಾಚ್ ಹೊಂದಿರುವ ಒಪ್ಪೊ A 52 ಫೋನ್ ಅನ್ನು ರೂ.18,990ಕ್ಕೆ ಖರೀದಿ ಮಾಡಬಹುದಾಗಿದೆ. ಇದು 128GB ಸಂಗ್ರಹದೊಂದಿಗೆ 8GB RAM ಅನ್ನು ಹೊಂದಿದೆ ಮತ್ತು 5000mAh ಬ್ಯಾಟರಿ ಸಹ ಇದರಲ್ಲಿದೆ.

ಶಿಯೋಮಿ ಫೋನ್:

ಅಮೆಜಾನ್ ವಿಶೇಷ ಸಾಧನವಾಗಿ ಆಗಸ್ಟ್ 4 ರಿಂದ ಶಿಯೋಮಿ ರೆಡ್ಮಿ ಬ್ರಾಂಡೆಡ್ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಆದರೆ ಇದು ಇನ್ನು ದೃಢವಾಗಿಲ್ಲ. ರೆಡ್‌ಮಿ 9 ಎ ಅಥವಾ ರೆಡ್‌ಮಿ 9 ಸಿ ಆವೃತ್ತಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: