ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ; ಭಾರತದಲ್ಲಿ ಸ್ಟಾರ್ಲಿಂಕ್ ಗೆ ಪೈಪೋಟಿ ನೀಡಲಿರುವ ಅಮೆಜಾನ್

ಅಮೇಜಾನ್ ಶೀಘ್ರದಲ್ಲೇ ಭಾರತ ಸರ್ಕಾರದೊಂದಿಗೆ ಸಭೆ ನಡೆಸಲಿದ್ದು, ಯೋಜನೆಗೆ ಸಂಬಂಧಪಟ್ಟ ಪರವಾನಗಿ, ಹಕ್ಕುಗಳು, ಸ್ಯಾಟಲೈಟ್ ಬ್ಯಾಂಡ್’ವಿಡ್ತ್ ಗುತ್ತಿಗೆ ವೆಚ್ಚ ಸೇರಿದಂತೆ ಇತರ ವಿಚಾರಗಳ ಕುರಿತು ಚರ್ಚೆ ನಡೆಸಲಿದೆ

ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ತಂತ್ರಜ್ಞಾನ ಕ್ಷೇತ್ರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದು. ಈವರೆಗೆ ಭಾರತದಲ್ಲಿ SpaceX Starlink ಮತ್ತು OneWeb ಈ ಸೇವೆಯನ್ನು ನೀಡುವತ್ತ ಗಮನ ಹರಿಸಿದ್ದರು. ಆದರೆ, ಈಗ ಈ ಆಟದ ಅಂಕಣಕ್ಕೆ ಮತ್ತೊಂದು ತಂಡದ ಆಗಮನವಾಗಿದೆ. ಇದು ಉಳಿದೆರಡು ತಂಡಗಳಿಗೂ ಪ್ರಬಲ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ.

ಭಾರತದಲ್ಲಿ ಉಪಗ್ರಹ ಆಧಾರಿತ ಅತೀ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಅಮೇಜಾನ್ ಮುಂದಾಗಿದೆ ಎಂಬ ಕುರಿತು ವರದಿಗಳು ಪ್ರಕಟವಾಗಿವೆ. ಅಮೇಜಾನ್ ಶೀಘ್ರದಲ್ಲೇ ಭಾರತ ಸರ್ಕಾರದೊಂದಿಗೆ ಸಭೆ ನಡೆಸಲಿದ್ದು, ಯೋಜನೆಗೆ ಸಂಬಂಧಪಟ್ಟ ಪರವಾನಗಿ, ಹಕ್ಕುಗಳು, ಸ್ಯಾಟಲೈಟ್ ಬ್ಯಾಂಡ್’ವಿಡ್ತ್ ಗುತ್ತಿಗೆ ವೆಚ್ಚ ಸೇರಿದಂತೆ ಇತರ ವಿಚಾರಗಳ ಕುರಿತು ಚರ್ಚೆ ನಡೆಸಲಿದೆ.

ಈಗಾಗಲೇ ಅಮೇಜಾನ್ ಈ ಯೋಜನೆಯ ಮೇಲೆ ಸುಮಾರು ಹತ್ತು ಬಿಲಿಯನ್ ಡಾಲರ್ (ಅಂದಾಜು ರೂ. 72,500 ಕೋಟಿ)ಗೂ ಅಧಿಕ ಮೊತ್ತದ ಹಣವನ್ನು ಹೂಡಿಕೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲು, ಭೂಮಿಯ ಕಕ್ಷೆಗೆ ಅತೀ ಹತ್ತಿರದಲ್ಲಿರುವ 3236 ಉಪಗ್ರಹಗಳ ನಕ್ಷತ್ರಪುಂಜವನ್ನು ಸೃಷ್ಟಿಸಲು ಹಣವನ್ನು ವ್ಯಯಿಸುತ್ತಿದೆ.

ಅಂತರಾಷ್ಟ್ರೀಯ ಉಪಗ್ರಹಗಳಿಗೆ ಭಾರತದಲ್ಲಿ ಡೌನ್ಲೋಡ್ ಲಿಂಕ್ ಸಿಗ್ನಲ್’ಗಳನ್ನು ಪಡೆಯಲು ಬಾಹ್ಯಾಕಾಶ ಇಲಾಖೆಯ ಅನುಮತಿ ಅಗತ್ಯವಿದೆ. ಈ ಕಾರಣಕ್ಕಾಗಿ ತನ್ನ Kuiper Constellation ಯೋಜನೆಗೆ ಬಾಹ್ಯಾಕಾಶ ಇಲಾಖೆ ಹಾಗೂ ಟೆಲಿಕಾಂ ಇಲಾಖೆಯ ಅನುಮತಿ ಪಡೆಯಲು ಅಮೆಜಾನ್ ಸಭೆ ನಡೆಸಲಿದೆ.

ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಲು ಅಮೇಜಾನ್ ನಿರಾಕರಿಸಿದೆ. ಆದರೆ, ಅತೀ ವೇಗದಲ್ಲಿ ಬೆಳೆಯುತ್ತಿರುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯ ಮಾರುಕಟ್ಟೆಯನ್ನು ನಿರ್ಲಕ್ಷಿಸುವುದಿಲ್ಲ ಎಂದು ಹೇಳಿದೆ.

ಇದರೊಂದಿಗೆ, ಭಾರತದ ಶೇ.75ರಷ್ಟು ಜನರಿಗಗೆ ಸೆಲ್ಉಲಾರ್ ಅಥವಾ ಫೈಬರ್ ಕೇಬಲ್ ಮುಖಾಂತರ ಇಂಟನರ್ನೆಟ್ ತಲುಪಲು ಸಾಧ್ಯವಾಗುತ್ತಿಲ್ಲ. ಇಂತಹ ಜನರನ್ನು ತಲುಪಲು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅಮೆಜಾನ್ ಹೇಳಿದೆ.

ಈಗಾಗಲೇ ಭಾರ್ತಿ ಬೆಂಬಲದ ವನ್ ವೆಬ್ ಹಾಗೂ ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್ ಯೋಜನೆ ಭಾರತದಲ್ಲಿ ಈ ಸೇವೆಯನ್ನು ನೀಡಲು ಸಂಪೂರ್ಣವಾಗಿ ಸಜ್ಜಾಗಿದ್ದವು. ವನ್ ವೆಬ್ ಹಾಗೂ ಸ್ಟಾರ್ ಲಿಂಕ್ ಮುಂದಿನ ವರ್ಷವೇ ಭಾರತದಲ್ಲಿ ತಮ್ಮ ಯೋಜನೆಯನ್ನು ಅನುಷ್ಟಾನಗೊಳಿಸಲಿವೆ. ಅಮೆಜಾನ್ ಕೂಡಾ ಅದೇ ಮಾರುಕಟ್ಟೆಯ ಮೇಲೆ ದೃಷ್ಟಿ ನೆಟ್ಟ ಬಳಿಕ, ತೀವ್ರವಾದ ಪೈಪೋಟಿ ಎದುರಾಗಿದೆ.ಅಮೆಜಾನ್ ಎಂಟ್ರಿ ನೀಡಿರುವುದರಿಂದ ವನ್ ವೆಬ್ ಹಾಗೂ ಸ್ಟಾರ್ ಲಿಂಕ್ ತಮ್ಮ ಸೇವೆಗಳನ್ನು ಅಗ್ಗದ ದರದಲ್ಲಿ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ಕೇವಲ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡುವ ಕಂಪನಿಗಳಿಗೆ ಮಾತ್ರವಲ್ಲದೇ, ಸೆಲ್ಯುಲಾರ್ ಸೇವೆ ನೀಡುವಂತಹ ಕಂಪನಿಗಳಿಗೂ ಪೈಪೋಟಿ ಎದುರಾಗಲಿದೆ. ಜಿಯೋ, ವಿಐ, ಏರ್’ಟೆಲ್ ಕಂಪನಿಗಳ ಇಂಟರ್ನೆಟ್ ಸೇವೆಗಳ ಮೇಲೆಯೂ ಇದು ಪರಿಣಾಮ ಬೀಳಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.