ದಿನಕ್ಕೊಂದು ಆ್ಯಪ್‌ | ಕೇಳುವ ವ್ಯಸನಿಗಳಿಗೆ ಆನಂದ ನೀಡುವ ಪಾಡ್‌ಕಾಸ್ಟ್‌ ಅಡಿಕ್ಟ್‌ !

ಪ್ರಸ್ತುತ ವಿಡಿಯೋ ನೋಡುವ ಪ್ರಮಾಣ ಅತ್ಯಧಿಕವಾಗಿದೆ. ಆದರೆ ಅದೇ ಸಮಯಕ್ಕೆ ಕೇಳುವ ಪ್ರೀತಿಯೂ ಹೆಚ್ಚುತ್ತಿದೆ. ಪಾಡ್‌ಕಾಸ್ಟ್‌ ಆಪ್ತವೆನಿಸುವ, ಗಂಭೀರವಾದ ಶ್ರವ್ಯ ಮಾಧ್ಯಮ ಈ ವ್ಯಾಪಕವಾಗಿ ಬೆಳೆಯುತ್ತಿದೆ. ಪಾಡ್‌ಕಾಸ್ಟ್‌ಗಳನ್ನು ಅಷ್ಟು ಪ್ರೀತಿಯಿಂದ ಕೇಳುವ ಮಂದಿಗೆ ಈ ಆ್ಯಪ್‌ ಮೆಚ್ಚುಗೆಯಾಗುವುದು ಖಚಿತ

ಪಾಡ್‌ಕಾಸ್ಟ್‌ ಇಂದು ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಮಾಧ್ಯಮ. ನಿರ್ದಿಷ್ಟ ವಸ್ತು-ವಿಷಯವನ್ನು ಆಧರಿಸಿ, ಧ್ವನಿ ಸರಣಿಯ ರೂಪದಲ್ಲಿ ನಿರ್ಮಿಸಿ, ನೀಡಲಾಗುವುದೇ ಈ ಪಾಡ್‌ಕಾಸ್ಟ್‌ನ ವಿಶೇಷ. ಲಕ್ಷಾಂತರ ಪಾಡ್‌ಕಾಸ್ಟ್‌ಗಳು ಜಗತ್ತಿನಲ್ಲಿ ದಿನವೂ ಹೊರಬರುತ್ತಿವೆ. ಇಂಥ ಪಾಡ್‌ಕಾಸ್ಟ್‌ಗಳು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡುವುದೇ ಪಾಡ್‌ಕಾಸ್ಟ್‌ ಅಡಿಕ್ಟ್‌ ಆ್ಯಪ್‌ನ ವಿಶೇಷ.

7.5 ಲಕ್ಷ ಪಾಡ್‌ಕಾಸ್ಟ್‌ಗಳು, 1 ಕೋಟಿ ಕಂತುಗಳನ್ನು ಹೊಂದಿರುವ ಈ ಆ್ಯಪ್‌ನಲ್ಲಿ ಎನ್‌ಪಿಆರ್‌, ಗಿಮ್ಲೆಟ್‌, ಬಿಬಿಸಿ, ಸೀರಿಯಲ್‌, ಟೆಡ್‌ ಟಾಕ್ಸ್‌, ಸೇರಿದಂತೆ ನೂರಾರು ಪ್ರತಿಷ್ಠಿತ ಸಂಸ್ಥೆಗಳ ಬಾಡ್‌ಕಾಸ್ಟ್‌ಗಳು ಇದರಲ್ಲಿವೆ. ಎಸ್‌ಡಿ ಕಾರ್ಡ್‌ನಲ್ಲಿ ಸೇವ್‌ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

ಬಿಬಿಸಿ, ಸಿಬಿಎಸ್‌ ರೇಡಿಯೋ ನ್ಯೂಸ್‌, ಸಿಎನ್‌ಎನ್‌, ದಿ ಗಾರ್ಡಿಯನ್‌, ದಿ ಅಮೆರಿಕನ್‌ ಲೈಫ್‌, ನರ್ಡಿಸ್ಟ್‌, ಎನ್‌ಪಿಆರ್‌, ನಾಸಾ, ಲಾಯಲ್‌ ಬುಕ್ಸ್‌, ಗಿಮ್ಲೆಟ್, ಪೋಡಿಯೋ ಬುಕ್ಸ್‌ ಹೀಗೆ ಹಲವು ಪ್ರತಿಷ್ಠಿತ ಸುದ್ದಿ ಸಂಸ್ಥೆ, ರೇಡಿಯೋ ಕೇಂದ್ರಗಳ ಪಾಡ್‌ಕಾಸ್ಟ್‌ಗಳನ್ನು ಕೇಳಿಸಿಕೊಳ್ಳಬಹುದು. ರಾಜಕೀಯ, ವಿಜ್ಞಾನ, ಕ್ರೀಡೆ, ವಿಜ್ಞಾನ-ತಂತ್ರಜ್ಞಾನ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಜನಪ್ರಿಯ ಸರಣಿಗಳಿವೆ.

ಚೀನಾ, ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಇಟಾಲಿಯನ್‌ ಭಾಷೆಗಳಲ್ಲಿ ಪಾಡ್‌ಕಾಸ್ಟ್‌ ಲಭ್ಯ ಇವೆ. ಇವುಗಳ ಜೊತೆಗೆ ಆಡಿಯೋ ಬುಕ್‌, ರೇಡಿಯೋಗಳನ್ನು ಕೇಳುವುದಕ್ಕೆ ಅವಕಾಶವಿದೆ.

4.7 ರೇಟಿಂಗ್‌ ಪಡೆದಿರುವ ಪಾಡ್‌ಕಾಸ್ಟ್‌ ಅಡಿಕ್ಟ್‌ ಕೇವಲ ಆಂಡ್ರಾಯ್ಡ್‌ ಫೋನ್‌ಗಳಿಗೆ ಲಭ್ಯವಿದೆ. ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಬಹುದು ಮತ್ತು ಕೇಳುವ ವ್ಯಸನಕ್ಕೆ ಬೀಳಬಹುದು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.