ದಿನಕ್ಕೊಂದು ಆ್ಯಪ್‌ | ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳಿಗೂ ಒಂದು ಸೋಷಿಯಲ್‌ ಮೀಡಿಯಾ ತಾಣ!

ಬೆಂಗಳೂರು ಮೂಲದ ಯುವಕರಿಬ್ಬರು ಅಭಿವೃದ್ಧಿ ಪಡಿಸಿದ ಈ ಆ್ಯಪ್‌ ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳಿಗೆಂದೇ ಇದೆ. ಅದರ ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಇದು ವೇದಿಕೆ

ಚಿತ್ರ ಕೃಪೆ: ಇಂಟರ್ನೆಟ್‌

ಮನುಷ್ಯರಾದ ನಮಗೆ ಆನ್‌ಲೈನ್‌ನಲ್ಲಿ ಬದುಕಿನ ಸಂಗತಿಗಳನ್ನು, ಮನೋಲಹರಿಯನ್ನು ಹಂಚಿಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳಿವೆ. ಆದರೆ ಪ್ರಾಣಿಗಳಿಗೆ? ಆಶ್ಚಯವಾಗುತ್ತಿದೆಯೇ? ಅಂತಹದ್ದೊಂದು ತಾಣವಿದೆ, ಅದರ ಹೆಸರು ‘ಪೆಟ್ಸ್‌ ಹೆವನ್‌’.

ಇದರಲ್ಲಿ ನಿಮ್ಮ ಹಾಗೂ ನಿಮ್ಮ ಸಾಕು ಪ್ರಾಣಿಯ ಜಂಟಿ ಖಾತೆಯನ್ನು ತೆರೆಯಬೇಕು. ಅದರಲ್ಲಿ ನಿಮ್ಮ ಸಾಕು ಪ್ರಾಣಿಗೆ ಸಂಬಂಧಿಸಿದಂತೆ ಫೋಟೋ ರೂಪದಲ್ಲಿ, ಪಠ್ಯ ರೂಪದಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸಬಹುದು.

ಪ್ರಾಣಿಪ್ರಿಯರನ್ನು ಬೆಸೆಯುವ ಈ ತಾಣದಲ್ಲಿ ಸಮಾನ ಆಸಕ್ತರು, ಸ್ನೇಹಿತರಾಗಬಹುದು. ತಮ್ಮ ಸಾಕು ಪ್ರಾಣಿಗಳ ದಿನಚರಿ, ಗುಣ ಸ್ವಭಾವಗಳ ಬಗ್ಗೆ ಚರ್ಚೆ ಮಾಡಬಹುದು. ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು.

ಅಷ್ಟೇ ಅಲ್ಲ, ಸಾಕು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸುತ್ತದೆ. ನಿಮ್ಮ ಸಮೀಪದಲ್ಲಿ ದತ್ತು ತೆಗೆದುಕೊಳ್ಳುವುದಕ್ಕೆ ಅವಕಾಶವಿರುವ ಪ್ರಾಣಿ, ವಿಳಾಸದ ವಿವರಗಳು ಇದರಲ್ಲಿ ಲಭ್ಯವಿದೆ.

ತುಷಾರ್‌ ಯಾದವ್‌ ಮತ್ತು ಸುಬ್ರಮಣ್ಯ ಅವರು ಅಭಿವೃದ್ಧಪಡಿಸಿರುವ ಈ ಆಪ್‌ನಲ್ಲಿ
ಸಣ್ಣ ಪುಟ್ಟ ಲೋಪಗಳಿದ್ದರೂ ಸಾಕು ಪ್ರಾಣಿಗಳಿಗೆಂದೇ ಇರುವ ವಿಶೇಷ ಇದು. ಮತ್ತಷ್ಟು ಸುಧಾರಣೆಗಳನ್ನು ತಂದಲ್ಲಿ ಹೆಚ್ಚು ಜನರನ್ನು ಸೆಳೆಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ನಿಮಗೆ ಆಸಕ್ತಿ ಇದ್ದರೆ ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.