ದಿನಕ್ಕೊಂದು ಆ್ಯಪ್‌ | ನಿಮ್ಮ ಮಗುವಿಗೆ ಆಡುತ, ನಲಿಯುತ ಕಲಿಯಲು ಹೇಳುವ, ಬೊಲೊ

ಮಕ್ಕಳಿಗೂ ಈ ಸ್ಮಾರ್ಟ್‌ಫೋನ್‌ ಒಂದು ಆಕರ್ಷಣೆ. ವಿಡಿಯೋ ನೋಡಲು, ಆಟವಾಡಲು ಅಪ್ಪ-ಅಮ್ಮನ ಫೋನ್‌ ಎತ್ತಿಕೊಳ್ಳುತ್ತಾರೆ. ಆ ಮಕ್ಕಳಿಗೆ ಸೂಕ್ತವಾದ ಆ್ಯಪ್‌ವೊಂದು ಸಿಕ್ಕರೆ, ಆಟವೂ ಪಾಠವೂ ಸಾಧ್ಯವಾಗುತ್ತದೆ. ಗೂಗಲ್‌ ಪರಿಚಯಿಸಿರುವ ಬೊಲೊ ಅಂಥದ್ದೇ ಒಂದು ಆ್ಯಪ್‌

ಮುಟ್ಟಿದರೆ ಸ್ಪಂದಿಸುವ ಟಚ್‌ಸ್ಕ್ರೀನ್‌ ಇರುವ ಸ್ಮಾರ್ಟ್‌ಫೋನ್‌ ಮಕ್ಕಳ ಪಾಲಿಗೆ ವಿಸ್ಮಯ. ಮೂರು ವರ್ಷದ ಮಕ್ಕಳು ಅಪ್ಪನದ್ದೊ, ಅಮ್ಮನದ್ದೊ ಫೋನ್‌ ಎತ್ತಿಕೊಂಡು, ಗೇಮ್‌ಗಳನ್ನು ಆಡುತ್ತಿದ್ದಾರೆ, ಇಲ್ಲವೇ ವಿಡಿಯೋ ನೋಡುತ್ತಿದ್ದಾರೆ. ಮನರಂಜನೆಯ ಮಾಧ್ಯಮವಾಗಿರುವ ಈ ಸ್ಮಾರ್ಟ್‌ಫೋನ್‌ ಅನ್ನು ಕಲಿಕೆಯ ಸಾಧನವನ್ನಾಗಿ ಮಾಡಿಕೊಳ್ಳಬಹುದು.

ಗೂಗಲ್‌ ಅವರ ಬೊಲೊ ಆ್ಯಪ್‌ ಪ್ರಾಥಮಿಕ ಹಂತದ ಮಕ್ಕಳ ಓದಿಗೆ ಪೂರಕವಾಗಿರುವಂತೆ ರೂಪಿಸಲಾಗಿದೆ. ಮುಖ್ಯವಾಗಿ ಸಲೀಸಾಗಿ ಓದುವುದನ್ನು ಇದು ಹೇಳಿಕೊಡುತ್ತದೆ. ಹಲವು ಮಕ್ಕಳಿಗೆ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಸಾಮರ್ಥ್ಯವಿರುತ್ತದೆ. ಆದರೆ ಓದುವ ವಿಷಯದ ಬಂದಾಗ ಸೋಲುತ್ತಾರೆ. ಬೊಲೊ ಅಂಥ ಮಕ್ಕಳಲ್ಲಿ ಧೈರ್ಯ ತುಂಬುತ್ತದೆ, ಓದುವುದನ್ನು ಸರಳವಾಗಿಸುತ್ತದೆ.

ಸದ್ಯ ಬಿಟಾ ರೂಪದಲ್ಲಿರುವ ಈ ಆ್ಯಪ್‌ ಆಯ್ದ ಹಿಂದಿ, ಉರ್ದು, ತೆಲುಗು, ಮರಾಠಿ, ತಮಿಳು, ಬಾಂಗ್ಲಾ, ಸ್ಪ್ಯಾನಿಷ್, ಪೋರ್ಚಗೀಸ್ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಲಭ್ಯವಿದೆ. ಇದರಲ್ಲಿರುವ ದಿಯಾ ಎಂಬ ಹುಡುಗಿಯ ಪಾತ್ರ ಮಕ್ಕಳನ್ನು ಓದುವುದಕ್ಕೆ ಪ್ರೇರೇಪಿಸುತ್ತದೆ. ತಪ್ಪು ಓದಿದಾಗ, ಅದನ್ನು ಗುರುತಿಸಿ ತಿದ್ದುತ್ತದೆ. ಪದಗಳನ್ನು ವಿವರಿಸುತ್ತದೆ.

ಎಸ್‌ಎಸ್‌ಇಆರ್‌ ಕೇಂದ್ರ ಸಹಯೋಗದಲ್ಲಿ ಉತ್ತರ ಪ್ರದೇಶದ 200 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಇದನ್ನು ದೇಶದಾದ್ಯಂತ ಶಾಲೆಗಳಿಗೆ ವಿಸ್ತರಿಸುವ ಆಲೋಚನೆ ಇದೆ ಎನ್ನಲಾಗಿದೆ.
ಕತೆಗಳ ಜೊತೆಗೆ ಪದಗಳ ಆಟಗಳೂ ಇವೆ. ಜಾಹೀರಾತು ಮುಕ್ತವಾಗಿದ್ದು, ಇಂರ್ಟನೆಟ್‌ ಇಲ್ಲದೆಯೂ ಬಳಸಬಹುದು. ಮಕ್ಕಳ ಸುರಕ್ಷತೆಯ ಕ್ರಮಗಳನ್ನು ಅನುಸರಿಸಲಾಗಿದ್ದು, ಧೈರ್ಯವಾಗಿ ಪೋಷಕರು ಮಕ್ಕಳಿಗೆ ಈ ಆ್ಯಪ್‌ ನೀಡಬಹುದು. ಬೊಲೊ ನಿಜಕ್ಕೂ ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುತ್ತದೆ.

ಆಂಡ್ರಾಯ್ಡ್‌ ಫೋನ್‌ಗಳಿಗೆ ಮಾತ್ರ ಬೊಲೊ ಲಭ್ಯವಿದೆ. ಇಲ್ಲಿ ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಿ | ಡೌನ್‌ಲೋಡ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.