ದಿನಕ್ಕೊಂದು ಆ್ಯಪ್‌ | ಲೀಗಲ್‌ ಕಾರ್ಟ್‌, ವಕೀಲರಿಗೊಬ್ಬ ಒಳ್ಳೆಯ ಡಿಜಿಟಲ್‌ ಅಸಿಸ್ಟಂಟ್‌

ವಕೀಲರು ತಮ್ಮ ಕಕ್ಷಿದಾರರು, ಕೇಸುಗಳು ಎಲ್ಲವನ್ನೂ ಒಂದೆಡೆ ನಿರ್ವಹಿಸುವುದಕ್ಕೆ ಈ ಮೊಬೈಲ್‌ ಅಪ್ಲಿಕೇಷನ್‌ ಅದ್ಭುತವಾಗಿ ನೆರವಾಗುತ್ತದೆ. ಕಕ್ಷಿದಾರರು ಮತ್ತು ವಕೀಲರ ನಡುವೆ ಸತತ ಸಂಪರ್ಕವನ್ನು ಸಾಧ್ಯವಾಗಿಸಿ, ಕಲಾಪದ ಚಟುವಟಿಕೆಗಳ ನಿರ್ವಹಣೆಯನ್ನು ಸುಲಭವಾಗಿಸಿದೆ

ಚಿತ್ರ ಕೃಪೆ: ಮಿಂಟ್‌

ಭಾರತೀಯ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಕಾಲಿರಿಸಿದ್ದರೂ ಕಾನೂನು ವ್ಯವಹಾರಗಳ ಕ್ಷೇತ್ರ ಪೆನ್ನು, ಪೇಪರ್‌, ಮೇಜುಗಳಿಗೆ ಅಂಟಿಕೊಂಡಿದೆ. ಈ ಕಾರ್ಯವಿಧಾನವನ್ನು ಸುಧಾರಿಸಲು ತಂತ್ರಜ್ಞಾನ, ಅಂದರೆ ಡಿಜಿಟಲ್‌ ಸ್ಪರ್ಶ ಬೇಕಿತ್ತು. ಎಸ್ಸೆಲ್‌ ಗ್ರೂಪ್‌ ಉಪಾಧ್ಯಕ್ಷರಾಗಿದ್ದ ಅರವಿಂದ ಸಿಂಘಾಟಿಯಾ ಲೀಟಲ್‌ ಟೆಕ್‌ ಸ್ಟಾರ್ಟಪ್‌ ಒಂದನ್ನು ಆರಂಭಿಸಿದರು. ಈ ಸ್ಟಾರ್ಟಪ್‌ ಮೂಲಕ ಅಭಿವೃದ್ಧಿಪಡಿಸಿದ ದೇಶದ ಮೊದಲ ಕಾನೂನು ಸಂಬಂಧಿ ಆ್ಯಪ್‌, ಲೀಗಲ್‌ ಕಾರ್ಟ್‌.

ಸಂಪೂರ್ಣವಾಗಿ ಉಚಿತವಾಗಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಫೋನ್‌ಗಳಿಗೆ ಲಭ್ಯವಿರುವ ಲೀಗಲ್‌ ಕಾರ್ಟ್‌ನಲ್ಲಿ ಕೇಸುಗಳ ಮಾಹಿತಿಯನ್ನು ಅಪ್‌ಡೇಟ್‌ ಮಾಡಬಹುದು. ಇದು ಅವರ ಕಕ್ಷಿದಾರರಿಗೆ ಸುಲಭವಾಗಿ ಸಂಬಂಧಪಟ್ಟ ಕೇಸ್‌ ಯಾವ ಕೋರ್ಟ್‌ ನಲ್ಲಿದೆ, ವಿಚಾರಣೆ ಎಷ್ಟು ಹೊತ್ತಿಗೆ ಇತ್ಯಾದಿ ವಿವರಗಳನ್ನು ನೀಡುತ್ತದೆ. ಅಲ್ಲದೇ ಕಲಾಪದ ನೇರ ಅಪ್‌ಡೇಟ್‌ಗಳನ್ನು ನೀಡುವುದಕ್ಕೆ ಆ್ಯಪ್‌ ಅವಕಾಶ ಮಾಡಿಕೊಡುತ್ತದೆ.

ಕೇಸು ನಿರ್ವಹಣೆಯ ಶುಲ್ಕವನ್ನು ಆ್ಯಪ್‌ ಮೂಲಕವೇ ಕಕ್ಷಿದಾರರನಿಗೆ ರವಾನಿಸಬಹುದಾಗಿದ್ದು, ದೊಡ್ಡ ವಕೀಲ ಸಂಸ್ಥೆ ತಮ್ಮ ತಂಡವನ್ನು ನಿರ್ವಹಿಸುವುದಕ್ಕೂ ಇದನ್ನು ಬಳಸಬಹುದು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನ ಮಾಡುವುದು ಒಂದು ದೊಡ್ಡ ಸವಾಲು. ಎಲ್ಲ ದಾಖಲೆಗಳನ್ನು ಲೀಗಲ್‌ ಕಾರ್ಟ್‌ ಸಂಗ್ರಹಿಸಿಟ್ಟುಕೊಳ್ಳಬಹುದು ಮತ್ತು 256 ಬಿಟ್‌ ಸೆಕ್ಯುರಿಟಿ ಹೊಂದಿದ್ದು, ಇಲ್ಲಿರುವ ಯಾವುದೇ ಮಾಹಿತಿ ಸುರಕ್ಷಿತವಾಗಿ ಮತ್ತು ಭದ್ರವಾಗಿರುತ್ತದೆ.

ಭಾರತದ 100 ನಗರಗಳ 2500 ವಕೀಲರು ಈ ಆ್ಯಪ್‌ ಬಳಸುತ್ತಿದ್ದು, ಅವರ ದೈನಂದಿನ ಕಾರ್ಯಕಲಾಪಗಳನ್ನು ಸಲೀಸಾಗಿಸಿದೆ.

4.3 ರೇಟಿಂಗ್‌ ಪಡೆದಿಕೊಂಡಿರುವ ಲೀಗಲ್‌ ಕಾರ್ಟ್‌ ಅನ್ನು ನೀವು ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಂಡ್ರಾಯ್ಡ್‌ | ಐಒಎಸ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.