ಕಂದನ ಅಳುವಿಗೆ ಕಾರಣ ಹೇಳಲಿದೆಯಂತೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌!!

ಇನ್ನೂ ಮಾತು ಬಾರದ ಮಗು ಅಳಲು ಆರಂಭಿಸಿದರೆ, ತಂದೆ-ತಾಯಿಗಳು ಕಂಗಲಾಗುತ್ತಾರೆ. ಕಾರಣ ತಿಳಿಯಲು ಸಾಧ್ಯವೇ ಆಗದಿದ್ದರೆ ಆತಂಕ ಇನ್ನು ಹೆಚ್ಚುತ್ತದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಈ ಸಮಸ್ಯೆಗೆ ಪರಿಹಾರ ನೀಡಲು ಹೊರಟಿದೆ

ಮಗು ಸಾಮಾನ್ಯವಾಗಿ ಹಸಿವಾದಾಗ ಅಳುತ್ತದೆ. ಪೆಟ್ಟಾದಗಲೂ ಅಳುತ್ತದೆ. ಅಥವಾ ಸಣ್ಣ ಪುಟ್ಟ ಕಿರಿಕಿರಿಯಾದಾಗ ಅಳುತ್ತದೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅದರ ಅಳುವಿಗೆ ಕಾರಣ ಏನು ಎಂಬುದು ಅರ್ಥ ಮಾಡಿಕೊಳ್ಳುವುದು ಅದರ ತಂದೆ ತಾಯಿಗಳಿಗೇ ಕಷ್ಟವಾಗುತ್ತದೆ.

ಐಇಇಇ/ಸಿಎಎ ಅಟೋಮೆಟಿಕಾ ಸಿನಿಕಾ ಪತ್ರಿಕೆಯ ವರದಿಯೊಂದು ವಿಶೇಷ ಬೆಳವಣಿಗೆಯನ್ನು ವರದಿ ಮಾಡಿದೆ. ಇದರ ಪ್ರಕಾರ, ಅಮೆರಿಕದ ತಂಡವೊಂದು ಮಗುವಿನ ಅಳುವಿನ ಹಿಂದಿರುವ ಕಾರಣವನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ತಿಳಿಯುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರತಿ ಮಗು ಅಳುವ ರೀತಿ ಭಿನ್ನವಾಗಿರುತ್ತದೆ. ಇದನ್ನು ಗುರುತಿಸಲು ವಿಶೇಷ ಆಲ್ಗರಿದಂ ರೂಪಿಸಲಾಗಿದೆ. ಸ್ಪೀಚ್‌ ರೆಕಗ್ನಿಷನ್‌ ತಂತ್ರಜ್ಞಾನದ ಮೂಲಕ ಮಗುವಿನ ಅಳು ಮತ್ತು ಅದರ ವಿನ್ಯಾಸವನ್ನು ಅರಿಯಲಾಗುತ್ತದೆ. ಈ ರೀತಿಯಾಗಿ ಮಗುವಿನ ಅಳುವಿನ ಭಿನ್ನತೆಯನ್ನು ಗ್ರಹಿಸಿ, ಅದರ ತೀವ್ರತೆಯ ಮೇಲೆ ಕಾರಣವನ್ನು ವಿಶ್ಲೇಷಿಸುವಂತೆ ಎಐ ರೂಪಿಸಲಾಗುತ್ತದೆ ಎಂದು ಲೇಖಕ ಲಿಚೌನ್‌ ತಮ್ಮ ಈ ಪತ್ರಿಕಾ ವರದಿಯಲ್ಲಿ ವಿವರಿಸಿದ್ದಾರೆ.

ವಯಸ್ಕರಿಗೆ ಮಗುವಿನ ಅಳು ಕೇವಲ ಸದ್ದು ಎಂದೆನಿಸುತ್ತದೆ. ಈ ಸದ್ದಿನಲ್ಲಿರು ವ್ಯತ್ಯಾಸಗಳು ಅನೇಕ ಮಾತುಗಳನ್ನು ಹೇಳುತ್ತಿರುತ್ತವೆ. ಅದನ್ನು ಗುರುತಿಸಲು ಎಐ ನೆರವಾಗಲಿದೆ’ ಎಂದು ಲೇಖನ ಹೇಳುತ್ತದೆ.