ಆಸಸ್ ROG ಫೋನ್ 3: ಗೇಮಿಂಗ್‌ಗಾಗಿಯೇ ವಿನ್ಯಾಸಗೊಳಿಸಿದ ಸೂಪರ್ ಫಾಸ್ಟ್‌ ಫೋನ್..!

ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ನಮ್ಮ ಮಾರುಕಟ್ಟೆಯಲ್ಲಿ ಸ್ವದೇಶಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳದಿರುವ ಕಾರಣದಿಂದಾಗಿ ಬೇರೆ ದೇಶದ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತೈವಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಆಸಸ್ ಮತ್ತೊಂದು ಗೇಮಿಂಗ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ.

ಆಸುಸ್ ತನ್ನ ಗೇಮಿಂಗ್ ಸರಣಿಯ ಆಸಸ್ ROG ಫೋನ್ 3 ಅನ್ನು ಲಾಂಚ್ ಮಾಡಿದ್ದು,  ಹೆಚ್ಚಿನ ಸಮಯ ಗೇಮ್ ಆಡುವವರಿಗಾಗಿಯೇ ಈ ಪೋನ್ ತಯಾರಾಗಿದೆ. ವೇಗದ ಪ್ರೋಸೆಸರ್ ಮತ್ತು ಅಷ್ಟೇವೇಗದಲ್ಲಿ ಪ್ರತಿಕ್ರಿಸುವ ಡಿಸ್‌ಪ್ಲೇ ಸಹ ಇದರಲ್ಲಿದೆ.

ಆಸಸ್ ROG ಫೋನ್ 3 ಭಾರತದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865+ SoC ಪ್ರೊಸೆರ್‌ನೊಂದಿಗೆ ಕಾಣಿಸಿಕೊಂಡ ಮೊದಲ ಫೋನ್ ಆಗಿದೆ. ಗೇಮರ್ಸ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿರುವುದರಿಂದ ಪೋನಿನಲ್ಲಿನ ಶಾಖವನ್ನು ಕಡಿಮೆ ಮಾಡುವ ಸಲುವಾಗಿ ಗೇಮ್‌ಕೂಲ್ 3 ವ್ಯವಸ್ಥೆಯನ್ನು ನೀಡಲಾಗಿದೆ. ಇದಕ್ಕಾಗಿ ತಾಮ್ರದ 3 ಡಿ ಆವಿ ಚೇಂಬರ್ ಮತ್ತು ದೊಡ್ಡ ಗ್ರಾಫೈಟ್ ಫಿಲ್ಮ್ ಅನ್ನು ಬಳಕೆ ಮಾಡಲಾಗಿದೆ. ಜೊತೆಗೆ ಅಡ್ರಿನೊ 650 ಜಿಪಿಯು ಸಹ ಇದರಲ್ಲಿದೆ.

ಇದನ್ನು ಓದಿ: ಒನ್‌ಪ್ಲಸ್ ನಾರ್ಡ್ ಲಾಂಚ್: ಬೇಡ ಎನ್ನಲಾಗದ ಚೀನಾ ಫೋನ್

ಗೇಮಿಂಗ್ ಫೋನ್ ಏರ್‌ ಟ್ರಿಗ್ಗರ್ 3 ಅಲ್ಟ್ರಾಸಾನಿಕ್ ಬಟನ್‌ಗಳನ್ನು ಸಹ ಹೊಂದಿದೆ ಮತ್ತು ಡ್ಯುಯಲ್ ಫ್ರಂಟ್-ಫೈರಿಂಗ್ ಸ್ಪೀಕರ್‌ಗಳು ಇದೆ. ROG ಫೋನ್ 3  ಕ್ಲಿಪ್-ಆನ್ ಏರೋ ಆಕ್ಟಿವ್ ಕೂಲರ್ 3 ಆಕ್ಸೆಸ್ಸರಿಯೊಂದಿಗೆ ಬರುತ್ತದೆ, ಇದು ಕಿಕ್‌ಸ್ಟ್ಯಾಂಡ್ ಮತ್ತು ಅಂತರ್ನಿರ್ಮಿತ ಫ್ಯಾನ್ ಅನ್ನು ಹೊಂದಿದ್ದು, ಇದು ಫೋನಿನ ಮೇಲ್ಮೈ ತಾಪಮಾನವನ್ನು 4 ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆ ಮಾಡುತ್ತದೆ.

ಆಸಸ್ ROG ಫೋನ್ 3 ಬೆಲೆ:

ಭಾರತದಲ್ಲಿ ಆಸಸ್ ROG ಫೋನ್ 3 ಎರಡು ಮಾದರಿಯಲ್ಲಿ ಮಾರಾಟವಾಗಲಿದೆ.

  • 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯ ಬೆಲೆ ರೂ. 49,999
  • 12 GB RAM ಮತ್ತು 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯ ಬೆಲೆ ರೂ. 57,999

ಆಸುಸ್ ಸ್ಮಾರ್ಟ್ಫೋನ್ ಆಗಸ್ಟ್ 6ರಂದು 12 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ದೇಶದಲ್ಲಿ ಮಾರಾಟವಾಗಲಿದೆ.

ಎರಡೂ ಮಾದರಿ ಫೋನ್‌ಗಳೊಂದಿಗೆ ಏರೋ ಕೇಸ್ ದೊರೆಯಲಿದೆ. ಅಲ್ಲದೇ ಟಾಪ್-ಎಂಡ್ ರೂಪಾಂತರವು ಏರೋ ಆಕ್ಟಿವ್ ಕೂಲರ್ 3 ಅನ್ನು ಒಳಗೊಂಡಿದೆ.  ಆಸಸ್ ROG ಫೋನ್ 3 ಬಾಕ್ಸ್‌ನಲ್ಲಿ  30 ವ್ಯಾಟ್ ROG ಹೈಪರ್‌ಚಾರ್ಜ್ ಚಾರ್ಜರ್ ಮತ್ತು 3.5 ಎಂಎಂ ಯುಎಸ್‌ಬಿ ಟೈಪ್-ಸಿ ನಿಂದ 3.5 ಎಂಎಂ ಅಡಾಪ್ಟರ್ ಸಹ ಒಳಗೊಂಡಿದೆ. ಇದಲ್ಲದೇ ಹೆಚ್ಚಿನ ಸಮಯ ಫೋನಿನಲ್ಲಿ ಗೇಮ್ ಆಡಲು  6000mAh ಸಾಮಾರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಆಸಸ್ ROG ಫೋನ್ 3 ಪೋನ್ ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರ ಮೇಲೆ ROG UI ಅನ್ನು ನೀಡಲಾಗಿದೆ.  19.5: 9 ಅನುಪಾತ 6.59-ಇಂಚಿನ ಪೂರ್ಣ ಎಚ್‌ಡಿ + (1,080×2,340 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್ಪ್ಲೇ 144 Hz ರಿಫ್ರೆಶ್ ರೇಟ್, 270 Hz  ಟಚ್ ರೇಟ್ ಹೊಂದಿದೆ ಮತ್ತು HDR10 + ಬೆಂಬಲದೊಂದಿಗೆ 2.5 D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆಯೊಂದಿಗೆ ಬರುತ್ತದೆ ಮತ್ತು ಇದು ಟಿಯುವಿ ಲೋ ಬ್ಲೂ ಲೈಟ್ ಸೆಲ್ಯೂಷನ್  ಮತ್ತು ಕಣ್ಣಿನ ಆರಾಮಕ್ಕಾಗಿ ಫ್ಲಿಕರ್ ಕಡಿತ-ಪ್ರಮಾಣೀಕೃತ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೇ ಡ್ಯುಯಲ್-ಸಿಮ್ (ನ್ಯಾನೊ) ಹಾಕಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: