ಚೀನಾ ಆಪ್‌ಗಳು ಇಲ್ಲ ಅಂತ ಬೇಜಾರು ಬೇಡ: ಇಲ್ಲಿದೆ ನೋಡಿ ಸುರಕ್ಷಿತ ಆಪ್‌ಗಳು

ಗಡಿಯಲ್ಲಿ ದೇಶದ ವಿರುದ್ಧ ಚೀನಾ ಗಲಾಟೆ ಮಾಡುತ್ತಿರುವ ಹಿನ್ನಲೆಯಲ್ಲಿ, ಭಾರತ ಸರ್ಕಾರ ಚೀನಾ ಮೂಲದ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಆದರೆ ಈಗಾಗಲೇ ಕೋಟ್ಯಾಂತರ ಮಂದಿ ಭಾರತೀಯರು ಈ 59 ಆಪ್‌ ಗಳಲ್ಲಿ ಹಲವು ಆಪ್ ಗಳನ್ನು ತಮ್ಮ ಫೋನ್‌ ನಲ್ಲಿ ಬಳಕೆ ಮಾಡುತ್ತಿದ್ದು, ಹಲವರು ಈ ನಿಷೇಧಕ್ಕೆ ಒಳಗಾದ ಹಲವು ಆಪ್ ಗಳಿಗೆ ಆಡಿಕ್ಟ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಪ್ರಮುಖ ಚೀನಾ ಆಪ್ ಗಳ ಬದಲಿಗೆ ಸದ್ಯ ಲಭ್ಯವಿರುವ ಆಪ್ ಗಳ ಕುರಿತ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.  ಇಲ್ಲಿ ನೀವು ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ವಿವಿಧ ಆಪ್‌ಗಳಿಗೆ ಪರ್ಯಾಯ ಆಪ್ ಗಳು ಯಾವುದು ಎಂದು ತಿಳಿಯಬಹುದಾಗಿದೆ.

ಉದಾಹರಣೆಗೆ ಟಿಕ್ ಟಾಕ್, ದೇಶದಲ್ಲಿ ಸುಮಾರು 10 ಕೋಟಿಗೂ ಅಧಿಕ ಮಂದಿ ಈ ಆಪ್ ಬಳಕೆ ಮಾಡುತ್ತಿದ್ದು, ಅದರಲ್ಲಿ ಹಲವರು ವಿಡಿಯೋ ಮಾಡುವ ಮೂಲಕವೇ ಕೀರ್ತಿ ಮತ್ತು ಹಣವನ್ನು ಗಳಿಗೆ ಮಾಡುತ್ತಿದ್ದಾರೆ. ಅವರಿಗೆಲ್ಲ ಈಗ ತಮ್ಮ ನೆಚ್ಚಿನ ಆಪ್‌ಗಳು ಇಲ್ಲ ಎಂದರೆ ಆಘಾತವಾಗುವ ಸಾಧ್ಯತೆಯೂ ಇದೆ. ಅಲ್ಲದೇ ಹಲವು ಮಂದಿ ಈಗಾಗಲೇ ಟಿಕ್ ಟಾಕ್ ನಿಷೇಧವಾಗಿದೆ ಎಂದು ತಿಳಿದು ಕಣ್ಣಿರಿಡುತ್ತಿರುವುದು ಗಮನಕ್ಕೆ ಬಂದಿದೆ.

ಟಿಕ್ ಟಾಕ್ ಬದಲಿ ಯಾವುದು ಅಂದ್ರಾ?

ಚೀನಾದ ಟಿಕ್ ಟಾಕ್ ಬದಲಿಗೆ ಭಾರತೀಯ ಮೂಲದ ಹಲವು ಕಂಪನಿಗಳು ದೇಶಿಯ ಆಪ್‌ಗಳನ್ನು ಅಭಿವೃದ್ಧಿಪಡಿಸಿವೆ, ಅವುಗಳಲ್ಲಿ ಪ್ರಮುಖವಾದವು ಎಂದರೆ ಮಿಟ್ರಾನ್ ಮತ್ತು ಚಿಂಗಾರಿ. ಆದರೆ ಈ ಎರಡು ಆಪ್‌ ಗಳು ಎಷ್ಟೊಂದು ಉತ್ತಮವಾಗಿಲ್ಲ ಮತ್ತು ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡುವುದಿಲ್ಲ. ಹಾಗಾಗಿ ಟಿಕ್ ಟಾಕ್ ಬಳಕೆದಾರರಿಗೆ ಉತ್ತಮ ಆಯ್ಕೆ ಎಂದರೆ ಫೇಸ್‌ಬುಕ್ ಮಾಲೀಕತ್ವದ ಇನ್ಸ್ಟಾಗ್ರಾಮ್. ಟಿಕ್ ಟಾಕ್ ಬದಲಾಗಿ ನೀವು ಇನ್ಸ್ಟಾಗ್ರಾಮ್ ಬಳಕೆ ಮಾಡಬಹುದು ಇದರಲ್ಲಿಯೂ ಎಲ್ಲಾ ಆಯ್ಕೆಗಳು ಲಭ್ಯವಿದೆ.  ಈ ಆಪ್ ಐಓಎಸ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಸುಲಭವಾಗಿ ದೊರೆಯಲಿದೆ.  ಹಲೋ, ಲೈಕ್, ಕ್ವಾಯ್, ಬಿಗೊ ಲೈವ್, ವಿಗೊ ವಿಡಿಯೋ ಬದಲಿಗೆ ಇನ್ಸ್ಟಾಗ್ರಾಮ್ ಬಳಸಿದರೆ ತೊಂದರೆ ಇಲ್ಲ.

ಯೂಸಿ ಬ್ರೌಸರ್ ಬದಲಿಗೂ ಇದೇ ಸ್ವಾಮಿ:

ದೇಶದಲ್ಲಿ ಯೂಸಿ ಬ್ರೌಸರ್ ಸಹ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಈ ಆಪ್ ಬದಲಿಗೆ ಆಂಡ್ರಾಯ್ಡ್ ಬಳಕೆದಾರರು ಫ್ರೀ ಇನ್ಟಾಲ್ ಆಗಿರುವ ಗೂಗಲ್ ಕ್ರೋಮ್ ಬ್ರೌಸರ್ ಬಳಕೆ ಮಾಡಬಹುದಾಗಿದೆ. ಇದಕ್ಕಿಂತಲೂ ಉತ್ತಮ ಎಂದರೇ ಮೋಜ್ಹಿಲಾ ಫೈರ್‌ ಫಾಕ್ಸ್‌ ಬ್ರೌಸರ್ ಬಳಕೆ ಮಾಡಬಹುದಾಗಿದೆ. ಇದರಲ್ಲಿಯೂ ಉತ್ತಮ ಆಯ್ಕೆಗಳಿದ್ದು, ಸೆಕ್ಯೂರಿಟಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಆಪ್ ಐಓಎಸ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಸುಲಭವಾಗಿ ಲಭ್ಯವಿದೆ.

ಶೇರ್‌ ಇಟ್‌ಗೂ ಇದೇ ಬದಲಿ ವ್ಯವಸ್ಥೆ, ಚಿಂತೆ ಬೇಡ:

ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ಫೋನ್‌ಗೆ ಫೈಲ್‌ಗಳನ್ನು ಕಳುಹಿಸಲು ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿದ್ದ ಆಪ್ ಎಂದರೇ ಶೇರ್ ಇಟ್. ಈ ಹಿನ್ನಲೆಯಲ್ಲಿ ಹಲವು ಮಂದಿ ಶೇರ್ ಇಟ್ ಇಲ್ಲವಾದರೆ ಮುಂದೆ ಹೇಗೆ ನಾವು ಫೈಲ್‌ಗಳನ್ನು ಕಳುಹಿಸುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಆದರೆ ಅದನ್ನು ಬಿಟ್ಟು ಬಿಡಿ. ಈಗಾಗಲೇ ಮಾರುಕಟ್ಟೆಯಲ್ಲಿ ಇದಕ್ಕಿಂತ ಉತ್ತಮವಾದ, ಸರಳವಾದ ಮತ್ತು ಸುರಕ್ಷಿತ ಆಪ್ ಲಭ್ಯವಿದೆ. ಗೂಗಲ್ ತನ್ನ ಬಳಕೆದಾರರಿಗೆ ಫೈಲ್ಸ್‌ ಗೋ ಎನ್ನುವ ಆಪ್ ಬಿಡುಗಡೆ ಮಾಡಿದೆ, ಇದೆ ಮಾದರಿಯಲ್ಲಿ ಆಪಲ್ ಬಳಕೆದಾರರು ಏರ್‌ಡ್ರಾಪ್ ಸೇವೆಯನ್ನು ಇದಕ್ಕೆ ಪರ್ಯಾಯವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನು ನೋಡಿ: ಹೀಗೆ ಮಾಡಿದರೆ ಜಾಹೀರಾತುಗಳ ಕಿರಿಕಿರಿ ಇಲ್ಲದೆ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು!!

ಕ್ಯಾಮ್ ಸ್ಕ್ಯಾನರ್ ಗಿಂತಲೂ ಸುಂದರ ಈ ಆಪ್:

ಮೊಬೈಲ್‌ನಲ್ಲಿಯೇ ಸ್ಕ್ಯಾನ್ ಮಾಡುವ ಅವಕಾಶವನ್ನು ಮಾಡಿಕೊಟ್ಟ ಕ್ಯಾಮ್ ಸ್ಕ್ಯಾನರ್ ಹಲವು ಮಂದಿಯ ನೆಚ್ಚಿನ ಆಪ್. ಸದ್ಯ ಇದು ನಿಷೇಧಕ್ಕೆ ಗುರಿಯಾಗಿರುವ ಕಾರಣದಿಂದಾಗಿ ನೀವು ಮೈಕ್ರೋಸ್ಟಾಫ್ಟ್ ಲೈನ್ಸ್ ಇಲ್ಲವೇ ಆಡೋಬಿ ಸ್ಕ್ಯಾನ್ ಆಪ್ ಅನ್ನು ಬಳಸಬಹುದಾಗಿದ್ದು, ಈ ಆಪ್ ಗಳ ಬಳಕೆಯು ಸುಲಭ ಮತ್ತು ಸುರಕ್ಷಿತವಾಗಿವೆ.

ಬಟ್ಟೆಗಾಗಿ ಶೈನ್ ಬಿಡಿ, ನಮ್ಮದೇ ಇದೇ ನೋಡಿ:

ಮಹಿಳೆಯ ಫ್ಯಾಷನ್‌ಗೆ ಹೇಳಿ ಮಾಡಿಸಿದ ಆಪ್ ಆಗಿದ್ದ ಶೈನ್ ಸಹ ಬ್ಯಾನ್ ಆಗಿದೆ. ಈ ಹಿನ್ನಲೆಯಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿರುವರಿಗೆ ಇಲ್ಲಿದೇ ನೋಡಿ ಬೆಸ್ಟ್ ಆಯ್ಕೆ ಮಿಂತ್ರಾ. ಭಾರತದೇ ಆದ ಈ ಆಪ್ ನಲ್ಲಿ ನೀವು ಸುಲಭವಾಗಿ ಶಾಪಿಂಗ್ ಮಾಡಬಹುದಾಗಿದೆ. ಅಲ್ಲದೇ ಉತ್ತಮ ಆಫರ್ ಗಳು ಇಲ್ಲಿ ದೊರೆಯಲಿದೆ. ಇದಲ್ಲದೇ ಜಿಯೋ ಮಾಲೀಕತ್ವದ ಆಜಿಯೋ ಸಹ ಉತ್ತಮ ಬಟ್ಟೆಗಳನ್ನು ಮಾರಾಟ ಮಾಡುತ್ತಿದೆ.

ಇನ್ನು ಇದೆ:

ವಿವಾ ವಿಡಿಯೋ ಆಪ್ ಬಳಕೆ ಮಾಡುತ್ತಿದ್ದವರು ಕೈನ್ ಮಾಸ್ಟರ್ ಆಪ್ ಬಳಕೆ ಮಾಡಬಹುದು, ಎಂಐ ವಿಡಿಯೋ ಕಾಲ್ ಆಪ್ ಬಳಕೆ ಮಾಡುತ್ತಿದ್ದವರು ಗೂಗಲ್ ಡ್ಯುಯೊ ಆಯ್ಕೆ ಮಾಡಿಕೊಳ್ಳಬಹುದು. ಹ್ಯಾಗೊ ಆಪ್ ನವರು ಲುಡೋಕಿಂಗ್ ಬಳಸಲು ಶುರು ಮಾಡಿ. ವಿಚಾಟ್ ಬಳಕೆ ಮಾಡುತ್ತಿದ್ದ ಮಂದಿಗೆ ಬೆಸ್ಟ್ ಆಯ್ಕೆ ವಾಟ್ಸ್‌ಆಪ್. ಹೀಗೆ ಹಲವು ಆಯ್ಕೆಗಳು ನಿಮಗೆ ಲಭ್ಯವಿದೆ ಚಿಂತೆ ಬೇಡ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.