ಕರೋನಾ ಕಳವಳ | 15 ನಿಮಿಷಗಳಲ್ಲಿ ಫಲಿತಾಂಶ; ಕ್ಷಿಪ್ರ ಕೋವಿಡ್‌-19 ಪರೀಕ್ಷಾ ಸಾಧನ ಸಿದ್ಧಪಡಿಸಿದ ಬ್ರೆಜಿಲ್‌ನ ಸ್ಟಾರ್ಟಪ್‌

ಸದ್ಯ ಕೋವಿಡ್‌-19 ಸೋಂಕನ್ನು ಪರೀಕ್ಷೆ ನಡೆಸುವುದಕ್ಕೆ ಒಂದರಿಂದ ಮೂರು ದಿನಗಳ ಅವಧಿ ತಗುಲುತ್ತಿದೆ. ಸೋಂಕು ಖಚಿತಪಡಿಸಿಕೊಂಡು ಕ್ರಮ ತೆಗೆದುಕೊಳ್ಳುವುದರೊಳಗೆ ವೈರಸ್‌ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್‌ನ ಸ್ಟಾರ್ಟಪ್‌ಒಂದು ಮಹತ್ವದ ಕೆಲಸ ಮಾಡಿದೆ

ಕರೋನಾ ವೈರಸ್‌ ಸೋಂಕನ್ನು ಖಚಿತಪಡಿಸಿಕೊಳ್ಳುವುದಕ್ಕೆ ಪರೀಕ್ಷೆಯ ಕಿಟ್‌ಗಳಿದ್ದರೂ ಫಲಿತಾಂಶ ಲಭ್ಯವಾಗುವುದಕ್ಕೆ ಒಂದರಿಂದ ಮೂರು ದಿನಗಳ ಕಾಲ ತೆಗೆದುಕೊಳ್ಳುತ್ತಿದೆ. ಎಷ್ಟು ಬೇಗ ಫಲಿತಾಂಶ ಲಭ್ಯವಾಗುತ್ತದೊ, ಸೋಂಕು ತಡೆಯುವುದಕ್ಕೆ, ಚಿಕಿತ್ಸೆ ನೀಡುವುದಕ್ಕೆ ಅಷ್ಟು ಅನುಕೂಲ. ವೇಗವಾಗಿ ಹರಡುತ್ತಿರುವ ಕೋವಿಡ್‌-19 ಅನ್ನು ತಡೆಯಲು ನಿಟ್ಟಿನಲ್ಲಿ ಬ್ರೆಜಿಲ್‌ ಸ್ಟಾರ್ಟಪ್‌ ಹೈ ಟೆಕ್ನಾಲಜಿಸ್‌ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಇದು ಹದಿನೈದು ನಿಮಿಷಗಳಲ್ಲಿ ಫಲಿತಾಂಶವನ್ನು ನೀಡುತ್ತದೆ.
ಈ ಸಾಧನ ರೋಗಿಯ ರಕ್ತವನ್ನು ವಿಶ್ಲೇಷಿಸಿ ಫಲಿತಾಂಶ ನೀಡುತ್ತದೆ.

ರೋಗಿ ರಕ್ತವನ್ನು ಇಮ್ಯುನಿಕ್ರೊಮೊಟೊಗ್ರಫಿ ಮತ್ತು ಕಲರಿಮೆಟ್ರಿ ವಿಧಾನಗಳ ಮೂಲಕ ಪರೀಕ್ಷಿಸುತ್ತದೆ. ಅಲ್ಲದೆ ಮೈಕ್ರೋಸಾಫ್ಟ್‌, ಇಂಟೆಲ್‌ ಅವರ ಸಹಭಾಗಿತ್ವದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಅನ್ನು ಬಳಸುವ 10ರಿಂದ 15 ನಿಮಿಷಗಳಲ್ಲಿ ಫಲಿತಾಂಶ ನೀಡುತ್ತದೆ.

ಈ ಕಂಪನಿಯು ಸಾಮೂಹಿಕ ಉತ್ಪಾದನೆಗೆ ಮುಂದಾಗಿದ್ದು, ಇದಕ್ಕಾಗಿ 130 ಮಂದಿ ಸಿಬ್ಬಂದಿಯನ್ನು ತೊಡಗಿಸಿದ್ದು ಏಪ್ರಿಲ್‌ 2ನೇ ವಾರದೊಳಗೆ ಪರೀಕ್ಷಾ ಸಾಧನಗಳು ಸಿದ್ಧವಾಗಲಿವೆ. ಈ ಕಿಟ್‌ಗಳನ್ನು ಮೊದಲು ಅತಿ ಹೆಚ್ಚು ಕೋವಿಡ್‌-19 ಹರಡಿರುವ ಸಾವೋಪಾಲೊಗೆ ಪೂರೈಸಲಿದ್ದು, ನಂತರದಲ್ಲಿ ಕ್ಯೂರಿಟಿಬಾ, ಪರಾನಾದ ದಕ್ಷಿಣ ಭಾಗಕ್ಕೆ ವಿತರಿಸುವುದಾಗಿ ಕಂಪನಿ ತಿಳಿಸಿದೆ.

2004ರಲ್ಲಿ ಅಸ್ತಿತ್ವಕ್ಕೆ ಬಂದ ಹೈ ಟೆಕ್ನಾಲಜಿಸ್‌, ಬ್ರೆಜಿಲ್‌ನ ಅತಿ ದೊಡ್ಡ ಟೆಕ್‌ ಕಂಪನಿ ಪೊಸಿಟಿವೊ ಟೆಕ್ನಾಲಜಿಯಾದ ಭಾಗವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.