ಜಸ್ಟ್‌ ಡಯಲ್‌ ಆ್ಯಪ್‌ನಲ್ಲಿ ಬಗ್‌; 15.6 ಕೋಟಿ ಬಳಕೆದಾರರ ಖಾತೆ, ಮಾಹಿತಿ ಅಪಾಯದಲ್ಲಿ?

ಅತಿ ಹೆಚ್ಚು ಬಳಕೆಯಾಗುವ ಆ್ಯಪ್‌, ಜಸ್ಟ್‌ ಡಯಲ್‌ ಮಾಹಿತಿ ಭದ್ರತೆಯ ವಿಷಯದಲ್ಲಿ ಆಪಾಯವನ್ನು ಎದುರಿಸಿದೆ. ಸಂಶೋಧಕರೊಬ್ಬರು ಆ್ಯಪ್‌ನಲ್ಲಿರುವ ಲೋಪವನ್ನು ಎತ್ತಿಹಿಡಿದಿದ್ದು, ಜಸ್ಟ್‌ಡಯಲ್‌ ಸಮಸ್ಯೆ ಪರಿಹರಿಸುವುದಾಗಿ ಹೇಳಿದೆ

ಯಾವುದೇ ಕಚೇರಿ ಇರಲಿ, ಯಾವುದೇ ಸೇವೆ ಇರಲಿ, ಜಸ್ಟ್‌ಡಯಲ್‌ನಲ್ಲಿ ಹುಡುಕಿ ನೋಡುವುದು ಈಗ ಸಾಮಾನ್ಯ. ಎಲ್ಲ ರೀತಿಯ ಮಾಹಿತಿ, ಸಂಪರ್ಕಗಳು ಈ ಆ್ಯಪ್‌ನಲ್ಲಿ ಲಭ್ಯ. ಈ ಆ್ಯಪ್‌ಗೆ ಯಾರು ಬೇಕಾದರೂ ಪ್ರವೇಶಿಸಿ, ಯಾರ ಮಾಹಿತಿಯನ್ನಾದರೂ ಚೆಕ್‌ ಪಡೆದುಕೊಳ್ಳಬಹುದು ಎಂಬ ಆತಂಕಕಾರಿ ಸೆಕ್ಯುರಿಟಿ ರೀಸರ್ಚರ್‌ ಒಬ್ಬರು ಹೊರಹಾಕಿದ್ದಾರೆ.

ಎಹರಾಜ್‌ ಅಹ್ಮದ್‌, ಜಸ್ಟ್‌ ಡಯಲ್‌ ಆ್ಯಪ್‌ನಲ್ಲಿ ಬಗ್‌ ಒಂದು ಇದು, ಬಳಕೆದಾರರ ಹೆಸರು, ಫೋನ್‌ ನಂಬರ್‌, ಈ ಮೇಲ್‌ ವಿಳಾಸಗಳನ್ನು ಯಾರು ಬೇಕಾದರೂ ಕದಿಯುವುದಕ್ಕೆ ಅವಕಾಶವಿದೆ ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ.

ಅಷ್ಟೇ ಅಲ್ಲ ಜಸ್ಟ್‌ ಡಯಲ್‌ ಪೇ ಸೇವೆಯೂ ಇದನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಆ್ಯಪ್‌ನ ಸುರಕ್ಷಾ ವ್ಯವಸ್ಥೆ ಅಷ್ಟು ದುರ್ಬಲವಾಗಿದೆ ಎಂದು ತಾವು ಸಿದ್ಧಪಡಿಸಿರುವ ವಿಡಿಯೋದಲ್ಲಿ ಅಹ್ಮದ್‌ ವಿವರಿಸಿದ್ದಾರೆ.
ಈ ವಿಡಿಯೋದಲ್ಲಿ ಅಹ್ಮದ್‌ ವಿವರಿಸಿರುವಂತೆ ಹ್ಯಾಕರ್‌ಗಳು ಯಾವುದೇ ಒಂದು ಫೋನ್‌ ನಂಬರ್‌ ಅನ್ನು ಯೂಸರ್‌ ನೇಮ್‌ ಆಗಿ ಬಳಸಿ, ಒಂದು ಖಾತೆಗೆ ಪ್ರವೇಶ ಪಡೆಯಬಹುದು. ಅಷ್ಟೇ ಆ್ಯಪ್‌ನಲ್ಲಿರುವ ಬಗ್‌ ಖಾತೆಯ ವಿವರಗಳನ್ನು ಬದಲಿಸುವುದಕ್ಕೂ ಸಾಧ್ಯವಿದೆ. ಜೆಡಿಪೇಯ ವಿವರಗಳನ್ನು ಬದಲಿಸುವುದರಿಂದ ಹಣವನ್ನು ವರ್ಗಾಯಿಸಲು ಸಾಧ್ಯವಾಗಬಹುದು ಎಂದಿದ್ದಾರೆ.

ಈ ಕುರಿತು ಜಸ್ಟ್‌ ಡಯಲ್‌ ಸ್ಪಷ್ಟನೆ ನೀಡಿದ್ದು, ಬಗ್‌ ಇರುವುದನ್ನು ಖಚಿತಪಡಿಸಿದ್ದು, ಸರಿಪಡಿಸಲಾಗಿದೆ. ಯಾವುದೇ ಮಾಹಿತಿ ನಷ್ಟವಾಗಿಲ್ಲ. ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ ಎಂದು ಹೇಳಿದೆ.