ಭಾರತದ ಟಿಕ್‌ಟಾಕ್ ಆದ ಬೆಂಗಳೂರಿನ ‘ಚಿಂಗಾರಿ’: ಮೂರ್ನಾಲ್ಕು ದಿನದಲ್ಲೇ ಕೋಟಿ ಬಳಕೆದಾರರು

ಭಾರತ ಸರ್ಕಾರ ಚೀನಾ ಮೂಲದ 59 ಆಪ್‌ಗಳನ್ನು ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ಹಲವರು ಭಾರತೀಯ ಮೂಲದ ಆಪ್‌ಗಳನ್ನು ಹುಡುಕಿ ಡೌನ್‌ಲೋಡ್ ಮಾಡಲು ಶುರು ಮಾಡಿದರು. ಅದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಟಿಕ್‌ಟಾಕ್‌ ಮಾದರಿಯ ಭಾರತದ ಆಪ್‌ಗಳನ್ನು ಹುಡುಕುವುದರಲ್ಲಿ ನಿರತರಾದರು. ಅದರಲ್ಲಿ ಹೆಚ್ಚಿನವರ ಕಣ್ಣಿಗೆ ಬಿದ್ದಿದ್ದು ಬೆಂಗಳೂರು ಮೂಲದ ಚಿಂಗಾರಿ ಆಪ್‌.

ಟಿಕ್ ಟಾಕ್ ಮಾದರಿಯಲ್ಲಿ ಶಾರ್ಟ್‌ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ಅವಕಾಶವನ್ನು ನೀಡುತ್ತಿರುವ ಚಿಂಗಾರಿ ಆಪ್ ಕಳೆದ ಒಂದು ವಾರದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ. ಪ್ರಸ್ತುತ ದಿನವೊಂದಕ್ಕೆ ಚಿಂಗಾರಿ ಆಪ್ ಅನ್ನು 20 ರಿಂದ 30 ಲಕ್ಷ ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ತಮ್ಮ ಆಪ್ ಕುರಿತು ಮಾತನಾಡಿದ ಸಹ ಸಂಸ್ಥಾಪಕ ಸುಮಿತ್ ಘೋಷ್,  ‘ಸಾವಿರಾರು ಪ್ರತಿಭಾವಂತ ಕ್ರಿಯೇಟರ್ಸ್‌ಗೆ ಸಹಾಯ ಮಾಡುವುದು ಮತ್ತು ಅವರಿಗೆ ಮುಕ್ತವಾಗಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ನೀಡುವುದು ನಮ್ಮ ಉದ್ದೇಶ’ ಎಂದಿದ್ದಾರೆ.

ಮಾತನ್ನು ಮುಂದುವರೆಸಿದ ಅವರು, ಪ್ರಸ್ತುತ ನಮ್ಮ ಗಮನವು ಆಪ್ ಗುಣಮಟ್ಟವನ್ನು ಹೆಚ್ಚಿಸುವುದು, ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಕಂಟೆಂಟ್ ಕ್ರಿಯೇಟರ್ಸ್‌ ಹಣ ಗಳಿಸಲಿದ್ದಾರೆ, ಇದಕ್ಕಾಗಿಯೇ ನಾವು ಜಾಹೀರಾತನ್ನು ಹೊಂದಿದ್ದೇವೆ ಮತ್ತು ಮಾರ್ಕೆಟಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ ಎಂದಿದ್ದಾರೆ.

ಚೀನಾ ಆಪ್‌ಗಳನ್ನು ಬಾನ್ ಮಾಡಿದ ಸುದ್ದಿ ಹೊರ ಬಂದ ನಂತರದಲ್ಲಿ ಚಿಂಗಾರಿ ಆಪ್ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆಯೂ ಭಾರೀ ಗತಿಯಲ್ಲಿ ಏರಿಕೆಯಾಗಿದ್ದು, ಚಿಂಗಾರಿ ಕಂಪನಿ ಸಂಸ್ಥಾಪಕರು ಒಂದು ವಾರದಿಂದ ಸರಿಯಾಗಿ ನಿದ್ದೆ ಮಾಡದೇ ಆಪ್‌ ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಸರಿಯಾದ ವ್ಯವಸ್ಥೆಯನ್ನು ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ: ಚೀನಾ ಆಪ್‌ಗಳು ಇಲ್ಲ ಅಂತ ಬೇಜಾರು ಬೇಡ: ಇಲ್ಲಿದೆ ನೋಡಿ ಸುರಕ್ಷಿತ ಆಪ್‌ಗಳು

ಕನ್ನಡ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಯಲ್ಲಿ ಕಾರ್ಯನಿರ್ವಹಿಸಲಿರುವ ಚಿಂಗಾರಿ ಆಪ್ ಆರಂಭಿಕ ಹಂತದಲ್ಲಿದ್ದು, ಇದಕ್ಕೆ ಇದ್ದ ಹಾಗೆ ಬಳಕೆದಾರರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಉತ್ತಮ ರೀತಿಯಲ್ಲಿ ಆಪ್‌ ಅನ್ನು ನಿರ್ವಹಿಸಲು ಶ್ರಮಿಸುತ್ತಿದ್ದಾರೆ. ಅಲ್ಲದೇ ಆಪ್ ನಲ್ಲಿ ಬರುವ ಕ್ರಿಯೇಟರ್ಸ್‌ಗೆ ಉತ್ತಮ ವೇದಿಕೆಯನ್ನು ನಿರ್ಮಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.

ಟಿಕ್ ಟಾಕ್ ಮಾದರಿಯಲ್ಲಿಯೇ ಇದ್ದರು ಸಹ ತನ್ನದೇ ವಿಶೇಷತೆಯನ್ನು ಹೊಂದಿರುವ ಚಿಂಗಾರಿ ಆಪ್, ಜನರಿಗೆ ಮನರಂಜನೆಯೊಂದಿಗೆ ಸುದ್ದಿಗಳನ್ನು ಸಹ ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಇಲ್ಲಿ ನೀವು ವಿಡಿಯೋ ನೋಡುವುದರೊಂದಿಗೆ ನಿಮ್ಮ ಸುತ್ತಮುತ್ತಾ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಇದಲ್ಲದೇ ಈ ಆಪ್‌ ಅನ್ನು ಮಹೀಂದ್ರ ಕಂಪನಿಯ ಮಾಲೀಕರಾದ ಆನಂದ್ ಮಹೀಂದ್ರ ಸಹ ಬಳಕೆ ಮಾಡಲು ಶುರು ಮಾಡಿದ್ದು, ಅವರೇ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿಯ ಹಂಚಿಕೊಂಡಿದ್ದು, ನಾನು ಟಿಕ್ ಟಾಕ್ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರಲಿಲ್ಲ, ಆದರೆ ಚಿಂಗಾರಿ ಯನ್ನು ಈಗ ತಾನೇ ಡೌನ್‌ಲೋಡ್ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.