ಲ್ಯಾಪ್‌ಟಾಪ್ ತಯಾರಿಕಾ ಉದ್ಯಮಕ್ಕೆ ಹೊಡೆತ ನೀಡಿದ ಚಿಪ್ ಕೊರತೆ

ಕೊರೋನಾ ಸೋಂಕು ಜಾಗತಿಕ ಟೆಕ್ ಮಾರುಕಟ್ಟೆಯಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಚಿಪ್’ಗಳ ಕೊರತೆಯಿಂದಾಗಿ ಈ ವರ್ಷ ಉಂಟಾಗುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದು ಕಷ್ಟ ಎಂದು ಲ್ಯಾಪ್ ಟಾಪ್ ತಯಾರಿಕಾ ಕಂಪನಿಗಳಾದ ಡೆಲ್ ಮತ್ತು ಎಚ್‌ಪಿ ಹೇಳಿವೆ

ಕೊರೋನಾ ಸೋಂಕು ಜಾಗತಿಕ ಟೆಕ್ ಮಾರುಕಟ್ಟೆಯಲ್ಲೂ ತನ್ನ ಪ್ರಭಾವ ಬೀರತೊಡಗಿದೆ. ಚಿಪ್’ಗಳ ಕೊರತೆಯಿಂದಾಗಿ ಈ ವರ್ಷ ಉಂಟಾಗುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದು ಕಷ್ಟ ಎಂದು ಲ್ಯಾಪ್ ಟಾಪ್ ತಯಾರಿಕಾ ಕಂಪನಿಗಳಾದ ಡೆಲ್ ಮತ್ತು ಎಚ್‌ಪಿ ಹೇಳಿವೆ. ವಿಶ್ವದಾದ್ಯಂತ ಕೊರೋನಾ ಸಂಬಂಧಿತ ನಿಷೇದಾಜ್ಞೆಗಳು ತೆರೆಯಲ್ಪಟ್ಟ ಕಾರಣ ಪರಿಸ್ಥಿತಿ ಕೊಂಚ ಸುಧಾರಿಸುವಂತೆ ಕಂಡರೂ ಚಿಪ್’ಗಳ ಕೊರತೆ ಲ್ಯಾಪ್ ಟಾಪ್ ಉತ್ಪಾದನೆಯನ್ನು ತೀವ್ರವಾಗಿ ಬಾಧಿಸುವ ಸಂಭವವಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಡೆಲ್ ಮತ್ತು HP ಕಂಪನಿಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಿ ಲಾಭಗಳಿಸಿವೆ. ಟೆಕ್ ಕಂಪನಿಗಳು ವರ್ಕ್ ಫ್ರಮ್ ಹೋಮ್ ಘೋಷಿಸಿದ್ದರಿಂದ ಹಾಗೂ ವಿಶ್ವದಲ್ಲಿ ಶಾಲೆಗಳು ಬಹುತೇಕವಾಗಿ ಆನ್ಲೈನ್ ರೂಪ ತಾಳಿದ್ದರಿಂದ ಪರ್ಸನಲ್ ಕಂಪ್ಯೂಟರ್’ಗಳ ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಇದರಿಂದಾಗಿ ಹೆಚ್ಚಿನ ಲಾಭವನ್ನು ಪಡೆಯಲು ಲ್ಯಾಪ್ ಟಾಪ್ ತಯಾರಿಕಾ ಕಂಪನಿಗಳು ಸಾಧ‌್ಯವಾಗಿದೆ.

ಡೆಲ್ ಕಂಪನಿಯ ಷೇರು ಒಂದು ಶೇಕಡಾ ಹಾಗೂ HP ಕಂಪನಿಯ ಷೇರು ಆರು ಶೇಕಡಾ ಇಳಿಕೆಯಾಗಿದ್ದರೂ, ಡೆಲ್ ಕಂಪನಿ 12%ಕ್ಕಿಂತ ಹೆಚ್ಚು ಲಭವನ್ನು ದಾಖಲಿಸಿದೆ. ಮೂರು ತಿಂಗಳ ಅವಧಿಯಲ್ಲಿ $24.49 ಬಿಲಿಯನ್ (ಅಂದಾಜು ರೂ. 1,77,340 ಕೋಟಿ) ಆದಾಯ ದಾಖಲಿಸಿದೆ.

ಇನ್ನೊಂದೆಡೆ HP ಕಂಪೆನಿಯು $15.9 ಬಿಲಿಯನ್ ಆದಾಯ ದಾಖಲಿಸಿದೆ. ಇದರ ಅಂದಾಜು ಮೊತ್ತ ರೂ. 1,15,167 ಕೋಟಿ.

ಆದಾಯದಲ್ಲಿ ಏರಿಕೆಯಾಗಿದ್ದರು ಕೂಡಾ ಜಾಗತಿಕವಾಗಿ ಚಿಪ್ ಗಳ ಕೊರತೆ ಉಂಟಾಗಿರುವುದರಿಂದ ಬೇಡಿಕೆಗೆ ತಕ್ಕಂತೆ ಪರ್ಸನಲ್ ಲ್ಯಾಪ್ ಟಾಪ್ ಗಳನ್ನು ಪೂರೈಸಲು ಸಾಧ್ಯವಾಗದೇ ಇರುವುದು ಈ ಕಂಪೆನಿಗಳಿಗೆ ದೊಡ್ಡ ಹೊಡೆತ ನೀಡಿದೆ.

“ಲ್ಯಾಪ್ ಟಾಪ್ ಬಿಡಿ ಭಾಗಗಳ ಕೊರತೆ ಇನ್ನೂ ಮುಂದುವರೆದಿದೆ. ಇದರೊಂದಿಗೆ ಚಿಪ್ ಸೇರಿದಂತೆ ಇತರೆ ಬಿಡಿ ಭಾಗಗಳ ಬೆಲೆಯಲ್ಲಿಯೂ ಏರಿಕೆಯಾದ್ದರಿಂದ ಉತ್ಪಾದನೆಯ ಹೊರೆಯೂ ಹೆಚ್ಚಾಗಲಿದೆ. ಇನ್ನು ಮುಂಬರುವ ದಿನಗಳಲ್ಲಿ ಆದಾಯ ಕುಂಠಿತವಾಗಬಹುದು,” ಎಂದು ಡೆಲ್ ನ ಮುಖ್ಯ ಹಣಕಾಸು ಅಧಿಕಾರಿ ಥಾಮಸ್ ಸ್ವೀಟ್ ಅವರು ಹೇಳಿದ್ದಾರೆ.

ಲ್ಯಾಪ್ ಟಾಪ್ ತಯಾರಿಕೆಯಲ್ಲಿ ಡೆಲ್ ನಂತರದ ಸ್ಥಾನ ಹೊಂದಿರುವ HP ಕಂಪನಿಯು ಈ ವರ್ಷಾಂತ್ಯದ ವರೆಗೆ ಬಿಡಿ ಭಾಗಗಳ ಕೊರತೆಯಿಂದ ಲ್ಯಾಪ್ ಟಾಪ್ ಹಾಗು ಪ್ರಿಂಟರ್’ಗಳ ಬೇಡಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಐಡಿಸಿ ವರದಿ ಮಾಡಿದೆ. ಇದರೊಂದಿಗೆ ವಿಶ್ವದಾದ್ಯಂತ ಲ್ಯಾಪ್ ಟಾಪ್ ಗಳ ಸರಬರಾಜು ಹಿಂದಿಗಿಂತಲೂ 55.2 ಶೇಕಡಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಲಾಕ್ಡೌನ್, ವರ್ಕ್ ಫ್ರಮ್ ಹೋಂ, ಆನ್ಲೈನ್ ಶಿಕ್ಷಣ ಸೇರಿದಂತೆ ಇತರ ಕಾರಣಗಳಿಂದ ಲ್ಯಾಪ್ ಟಾಪ್ ಗಳ ಬೇಡಿಕೆ ಹೆಚ್ಚಾದರೂ, ಅದನ್ನು ಪೂರೈಸಲು ತಯಾರಿಕಾ ಕಂಪನಿಗಳು ಹರಸಾಹಸ ಪಡುತ್ತಿವೆ. ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳದೇ ಕೇವಲ ಬೇಡಿಕೆ ಪೂರೈಸುವತ್ತ ಗಮನ ಹರಿಸಬೇಕಾದ ಸಂದರ್ಭ ಈಗ ಎದುರಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.