
ಮೈಸೂರಿನ ಸಿಎಸ್ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ನವದೆಹಲಿಯ ವಿಜ್ಞಾನಪ್ರಸಾರ್ ನೆರವಿನೊಂದಿಗೆ ಮೈಸೂರಿನಲ್ಲಿ ಇದೇ ಸೆಪ್ಟೆಂಬರ್ 20-21ರಂದು “ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು” ಎನ್ನುವ ವಿಷಯದ ಕುರಿತು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸುತ್ತಿವೆ.
ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಆಸಕ್ತರಾಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವ್ಯಕ್ತಿಗಳು ಹಾಗೂ ಪ್ರಕಾಶಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚರ್ಚಿಸಲು ಇದು ವೇದಿಕೆಯನ್ನು ಒದಗಿಸಲಿದೆ. ನೋಂದಣಿ ಉಚಿತ. ಸೀಮಿತ ಸಂಖ್ಯೆಯ ಅವಕಾಶಗಳು ಇರುವುದರಿಂದ ಆಸಕ್ತರು ಮುಂದಾಗಿಯೇ ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಬಹುದು.
ಅರ್ಜಿಯ ಲಿಂಕ್ : http://bit.ly/2kp5pF7
ಸೆಪ್ಟೆಂಬರ್ 15, 2019 ನೋಂದಣಿಗೆ ಕಡೆಯ ದಿನ. ಆಯ್ಕೆಯ ಬಗ್ಗೆ 18ನೇ ತಾರೀಖಿನ ವೇಳೆಗೆ ವೈಯಕ್ತಿಕವಾಗಿ ಇ-ಮೇಲ್ ಇಲ್ಲವೇ ಫೋನಿನ ಮೂಲಕ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ಶ್ರೀ ಶರ್ಮ, ದೂರವಾಣಿ ಸಂಖ್ಯೆ 9886640328 ಅಥವಾ iandp.cftri@gmail.com ಇವರನ್ನು ಸಂಪರ್ಕಿಸಿ.