ಬಿ ಜಿ ಎಲ್ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪೂರ್ವ ಬರಹಗಾರ, ವಿಜ್ಞಾನಿ. ಸಸ್ಯಲೋಕದ ಹಲವು ವಿಸ್ಮಯಗಳನ್ನು ಎಲ್ಲರೂ ಓದುವಂತೆ ಮಾಡಿದ, ವಿಜ್ಞಾನ, ಸಂಶೋಧನೆಯ ಹಲವು ಅನುಭವಗಳನ್ನು ತಮ್ಮ ಬರವಣಿಗೆಯ ಮೂಲಕ ವಿಭಿನ್ನವಾಗಿ ಉಣಬಡಿಸಿದ ಲೇಖಕ. ಇಂದು ಅವರ ಜನ್ಮದಿನ. ಈ ಸಂದರ್ಭದಲ್ಲಿ ಕಲಾಮಾಧ್ಯಮ ಅವರ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ.
ಕಲಾಮಾಧ್ಯಮ ಸಂಸ್ಥೆ ನಿರ್ಮಾಣದ ಈ ಸಾಕ್ಷ್ಯಚಿತ್ರದಲ್ಲಿ ಬಿಜಿಎಲ್ ಸ್ವಾಮಿ, ಅವರನ್ನ ಕುಟುಂಬದ ಸದಸ್ಯರು, ಹತ್ತಿರದಿಂದ ಬಲ್ಲವರು, ಅವರ ಸಂಶೋಧನೆ, ಸಾಹಿತ್ಯದಿಂದ ಪ್ರೇರಿತರಾದವರು ಈ ಸಾಕ್ಷ್ಯಚಿತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ವಿಜ್ಞಾನಿ, ಕಾದಂಬರಿಕಾರ, ಕೆ ಎನ್ ಗಣೇಶಯ್ಯ, ಟಿ ಆರ್ ಅನಂತರಾಮು, ನಾಗೇಶ್ ಹೆಗಡೆ, ಚಿತ್ರ ನಿರ್ದೇಶಕ, ನಾಗತಿಹಳ್ಳಿ ಚಂದ್ರಶೇಖರ್, ಕತೆಗಾರ ಎಸ್ ದಿವಾಕರ್ ಹಾಗೂ ಸ್ವಾಮಿ ಅವರ ಸೋದರಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಿ ಜಿ ಎಲ್ ಸ್ವಾಮಿ ಅವರ ಮಹತ್ವದ ಕೃತಿಗಳಿಂದ ಆಯ್ದ ಸಾಲುಗಳನ್ನು ನಿರ್ದೇಶಕರಾದ ಬಿ ಎಂ ಗಿರಿರಾಜ್, ನಟಿ ಸವಿತ ಪರಮೇಶ್ವರ್ ಹಾಗೂ ಕೆ ಎಸ್ ಪರಮೇಶ್ವರ್ ಓದಿದ್ದು, ಇದು ಸ್ವಾಮಿ ಬರವಣಿಗೆ ಝಲಕ್ ಅನ್ನು ಸಾಕ್ಷ್ಯಚಿತ್ರ ವೀಕ್ಷಕರಿಗೆ ನೀಡುತ್ತದೆ
ಒಂದು ಗಂಟೆ ಎಳು ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರವನ್ನು ಕೆ ಎಸ್ ಪರಮೇಶ್ವರ್ ನಿರ್ದೇಶಿಸಿದ್ದು, ನಟ ಸುಚೇಂದ್ರ ಪ್ರಸಾದ್ ದನಿ ನೀಡಿದ್ದಾರೆ.
Thanks a lot Tech Kannada