ಲತಾ ಮಂಗೇಶ್ಕರ್‌ ಹಾಡು ಕೇಳಲು ಈ ಆಪ್‌‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ

ಗಾನಕೋಗಿಲೆ, ಲತಾ ಮಂಗೇಶ್ಕರ್ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಅದ್ಭುತ ಧ್ವನಿಯ ಕಾರಣದಿಂದ ಭಾರತದ ನೈಟಿಂಗೇಲ್ ಎಂದು ಕರೆಸಿಕೊಂಡ ಮಹಾನ್ ಗಾಯಕಿ ಏಳು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಹಾಡಿದ ಹಾಡುಗಳು ಅಜರಾಮರ. ಹಳೆಯ ತಲೆಮಾರಿನ ಜತೆಗೆ ಯುವ ತಲೆಮಾರೂ ತಲೆದೂಗುತ್ತಿದ್ದ ಮಹಾನ್ ಗಾಯಕಿ ಇಂದು ಇತಿಹಾಸ. ಆದರೆ ತಮ್ಮ ಹಾಡುಗಳ ಮೂಲಕ ನಮ್ಮ ನೆನಪುಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಅವರು ಹಾಡಿದ ಹೆಚ್ಚಿನ ಹಾಡುಗಳು ಜನಪ್ರಿಯವೇ, ಆ ಪೈಕಿ ಹೆಚ್ಚು ಜನಪ್ರಿಯವಾದವು ‘ಲಗ್ ಜಾ ಗಲೇ’, ‘ಗಮ್ ಹೈ ಕಿಸಿ ಕೆ ಪ್ಯಾರ್ ಮೇ’, :ಕೋರಾ ಕಾಗಜ್ ಥಾ ಯೇ ಮನ್ ಮೇರಾ’, ‘ತೇರೆ ಬಿನಾ ಜಿಂದಗಿ ಸೆ ಕೋಯಿ’ ಎನ್ನಬಹುದು. ಲತಾಜಿಯವರ ಹಾಡುಗಳನ್ನು ಕೇಳಲು ಹಲವು ಆ್ಯಪ್‌ಗಳಿವೆ. ಆ ಪೈಕಿ ಐದು ಅತ್ಯುತ್ತಮ ಆ್ಯಪ್‌ಗಳನ್ನು ಟೆಕ್ ಕನ್ನಡ ನಿಮಗಾಗಿ ಆಯ್ದು ಪಟ್ಟಿ ಮಾಡಿದೆ.

ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಕೇಳಲು ನೀವು ಬಳಸಬಹುದಾದ ಉತ್ತಮವಾದ 5 ಸಂಗೀತ ಅಪ್ಲಿಕೇಶನ್‌ಗಳು ಇಲ್ಲಿವೆ:

ವಿಂಕ್ ಮ್ಯೂಸಿಕ್ (Wynk Music): ‘ರಿಮೆಂಬರಿಂಗ್ ಲತಾ ಮಂಗೇಶ್ಕರ್’ ಎಂಬ ಹೆಸರಿನೊಂದಿಗೆ ವಿಂಕ್ ಮ್ಯೂಸಿಕ್ ಆ್ಯಪ್ ಪ್ಲೇ ಲಿಸ್ಟ್‌ ಕೂಡ ರಚಿಸಿದ್ದು, ಅದರಲ್ಲಿ ಅವರ ಎವರ್ಗ್ರೀನ್ ಹಾಡುಗಳನ್ನು ನೀವು ಕೇಳಬಹುದು. ನೀವು ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋ‌ರ್‌ನಿಂದ ಡೌನ್‌ಲೋಡ್ ಮಾಡಬಹುದು.

ಸ್ಪಾಟಿಫೈ (Spotify): ಇದು ಅತ್ಯಂತ ಜನಪ್ರಿಯವಾದ ಮ್ಯೂಸಿಕ್ ಅಪ್ಲಿಕೇಶನ್‌ಳಲ್ಲಿ ಒಂದಾಗಿದ್ದು, ವಿಶ್ವದ 62 ಭಾಷೆಗಳ ಹಾಡುಗಳು ಈ ಅಪ್ಲಿಕೇಷನ್‌ನಲ್ಲಿ ದೊರೆಯುತ್ತದೆ. ನಿಮ್ಮ ಮೆಚ್ಚಿನ ಆಲ್ಬಮ್‌ಗಳು, 16 ವಿವಿಧ ಭಾಷೆಗಳ ಗಾಯಕರ ಹಾಡುಗಳನ್ನು ಉಚಿತವಾಗಿ ಕೇಳಬಹುದು. ಲತಾ ಮಂಗೇಶ್ಕರ್ ಅವರ ಹಾಡುಗಳು ಈ ಆಪ್‌ನ ಲಭ್ಯವಿವೆ. ಈ ಆಪ್‌ಗೆ ಹಣ ನೀಡಿ ಸಬ್‌ಸ್ಕ್ರೈಬ್ ಮಾಡುವ ಮೂಲಕ ಪ್ರೀಮಿಯಂಗೆ ಅಪ್‌ಗ್ರೇಡ್ ಮಾಡಬಹುದು.

ಜಿಯೊ ಸಾವನ್ (Jiosaavn): ಭಾರತದಲ್ಲಿ ಅತಿ ಹೆಚ್ಚು ಹಾಡುಗಳ ಸಂಗ್ರಹವಿರುವ ಅಪ್ಲಿಕೇಷನ್ ಇದಾಗಿದೆ. ಈ ಆ್ಯಪ್‌ನಲ್ಲಿ ಹಾಡನ್ನು ಕೇಳಿ ಆನಂದಿಸುವುದರ ಜತೆಗೆ ಅದರ ಸಾಹಿತ್ಯವನ್ನೂ ನೋಡಬಹುದು.

ಗಾನ ಮ್ಯೂಸಿಕ್ (Gaana Music): ಇದು ಆನ್ ಲೈನ್ ಮ್ಯೂಸಿಕ್ ಅಪ್ಲಿಕೇಶನ್ ಆಗಿದ್ದು, ನೀವು ಇತ್ತೀಚಿನ ಹಿಂದಿ, ಪಂಜಾಬಿ, ತೆಲುಗು, ತಮಿಳು, ಕನ್ನಡ ಮತ್ತು ಇತರ ಪ್ರಾದೇಶಿಕ ಹಾಡುಗಳನ್ನು ಕೇಳಬಹುದು. ಈ ಆ್ಯಪ್ ರೇಡಿಯೊ ಸ್ಟೇಷನ್ ಕೂಡ ಹೊಂದಿದ್ದು ನೀವು ಪಾಡ್‌ಕಾಸ್ಟ್ ಸಹ ಕೇಳಬಹುದು.

ಅಮೆಜಾನ್ ಮ್ಯೂಸಿಕ್ (Amazon Music): ಈ ಅಪ್ಲಿಕೇಶನ್‌ನೊಂದಿಗೆ, ಪ್ರಪಂಚದ ವಿವಿಧ ಪ್ರಾಕಾರ ಮತ್ತು ಪ್ರದೇಶಗಳ ಹಾಡುಗಳನ್ನು ಕೇಳಬಹುದು. ಪ್ರೈಮ್ ಸದಸ್ಯತ್ವ ಪಡೆದರೆ ಲತಾ ಮಂಗೇಶ್ಕರ್ ಅವರ ಎಲ್ಲ ಹಾಡುಗಳನ್ನೂ ಕೇಳಲು ಅವಕಾಶವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: