ವಿಜ್ಞಾನ ಪ್ರಸಾರ್‌ ಮತ್ತು ಕುತೂಹಲಿ ಸಹಯೋಗದಲ್ಲಿ ವೆಬಿನಾರ್‌ | ಜೂನ್‌ 13ರಂದು ಗೇಮ್‌ ಥಿಯರಿ ಕುರಿತು ವಿಶ್ವೇಶ‌ ಗುತ್ತಲ್‌ ಉಪನ್ಯಾಸ

ಕನ್ನಡದಲ್ಲಿ ವಿಜ್ಞಾನ ಜನಪ್ರಿಯಗೊಳಿಸುವ ಪ್ರಯತ್ನವಾಗಿ ಆರಂಭವಾದ ಕುತೂಹಲಿ ಬಳಗ ಹಾಗೂ ವಿಜ್ಞಾನ್‌ ಪ್ರಸಾರ್‌ ನವದೆಹಲಿ ಪ್ರತಿ ವಾರ ವೆಬಿನಾರ್‌ ಆಯೋಜಿಸಿದೆ. ತಪ್ಪದೇ ಪಾಲ್ಗೊಳ್ಳಿ

Webinar by vishwesh Guttal

ಕನ್ನಡದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ, ಹಲವು ಮಾಧ್ಯಮಗಳ ಮೂಲಕ ವೈಜ್ಞಾನಿಕ ಸಂಗತಿಗಳನ್ನು ತಲುಪಿಸುವ ಉದ್ದೇಶದೊಂದಿಗೆ ವಿಜ್ಞಾನ್‌ ಪ್ರಸಾರ್ ಆರಂಭಿಸಿದ ಕುತೂಹಲಿ ವತಿಯಿಂದ ಜೂನ್‌ 13ರಂದು ಮಧ್ಯಾಹ್ನ 3ಗಂಟೆಗೆ ವೆಬಿನಾರ್‌ ಆಯೋಜಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ವಿಶ್ವೇಶ್‌ ಗುತ್ತಲ್‌, ‘ಪ್ರಾಣಿಗಳು ಆಡುವ ಅಟಗಳು’ ವಿಷಯವಾಗಿ ವಿಚಾರ ಮಂಡಿಸಲಿದ್ದಾರೆ.

kutoohali webinar

ಪ್ರಾಣಿಕುಲದಲ್ಲಿ ವೈವಿಧ್ಮಯವಾದ ಸ್ವಭಾವಗಳು ಕಂಡುಬರುತ್ತವೆ. ಅವು ಬೇಟೆ ಆಡುವಾಗಾಗಲಿ ಅಥವಾ ಬೇಟೆಯಿಂದ ತಾವೇ ತಪ್ಪಿಸಿಕೊಳ್ಳುವಾಗ ಆಗಲಿ ಅಥವಾ ಆಹಾರಕ್ಕಾಗಿ ತಮ್ಮದೇ ಗುಂಪಿನವರ ಜೊತೆ ಪೈಪೋಟಿಯಾಗಿರಲಿ ಅವುಗಳ ಸ್ವಭಾವಗಳು ವಿಚಿತ್ರ ಮತ್ತು ಮನಸ್ಸಿಗೆ ಮುದ ನೀಡುವಂಥದ್ದು.

ಪ್ರಾಣಿಗಳ ಇಂತಹ ವಿಚಿತ್ರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಅರ್ಥಶಾಸ್ತ್ರಜ್ಞರು ‘ಗೇಮ್‌ ಥಿಯರಿ’ ಅನುಸರಿಸುತ್ತಾರೆ. ಇದು ಗಣಿತ ಮತ್ತು ಕಂಪ್ಯೂಟರ್‌ಗಳ ಬಳಕೆಗೆ ಪೂರಕವಾಗಿರುತ್ತದೆ ಎಂಬುದನ್ನು ವಿಶ್ವೇಶ್‌ ಗುತ್ತಲ್‌ ವಿವರಿಸಲಿದ್ದಾರೆ.

ಆಸಕ್ತರು ಈ ಕೆಳಗಿನ ಲಿಂಕ್‌ ಬಳಸಿ ವೆಬಿನಾರ್‌ನಲ್ಲಿ ಭಾಗಿಯಾಗಬಹುದು. ಲಿಂಕ್ : https://bit.ly/3h83Gwt

Id: 988 0181 0036

Password:  034589

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.