ಪ್ರಪಂಚದಾದ್ಯಂತ ಪ್ರತಿದಿನ ಭೂಕಂಪಗಳು ಸಂಭವಿಸುತ್ತಿದ್ದು, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನರಿಗೆ ಎಚ್ಚರಿಕೆಯನ್ನು ನೀಡಲು ಆಂಡ್ರಾಯ್ಡ್ ಹೊಸ ಪ್ರಯತ್ನವನ್ನು ಮಾಡಲು ಮುಂದಾಗಿದೆ.

ಮೊದಲಿಗೆ ಇದು ಅಮೆರಿಕಾದಲ್ಲಿ ಶುರುವಾಗಲಿದೆ. ಭೂಕಂಪನಕ್ಕೂ ಮುನ್ನವೇ ಜನರಿಗೆ ಎಚ್ಚರಿಕೆಯನ್ನು ನೀಡಿದರೆ ಜನರಿಗೆ ಅಪಾಯವನ್ನು ಎದುರಿಸುವ ಸಲುವಾಗಿ ತಯಾರಾಗಲು ಸಹಾಯ ಮಾಡುತ್ತದೆ.
ಅಮೆರಿಕಾದ ಪ್ರಮುಖ ಭೂಕಂಪಶಾಸ್ತ್ರಜ್ಞರು ಅಭಿವೃದ್ಧಿಪಡಿಸಿದ ಶೇಕ್ ಅಲರ್ಟ್ ವ್ಯವಸ್ಥೆಯಿಂದ ಭೂಕಂಪನದ ಮುನ್ನೇಚ್ಚರಿಕೆಯೂ ನೀಡಲಿದೆ. USGS, ಕ್ಯಾಲ್ OES, ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಭಿವೃದ್ಧಿ ಪಡಿಸಿರುವ ಭೂಕಂಪಮಾಪಕಗಳಿಂದ ಸಂಕೇತಗಳನ್ನು ಬಳಕೆ ಮಾಡಿಕೊಂಡು ಈ ಎಚ್ಚರಿಕೆ ಸಂದೇಶವು ದೊರೆಯಲಿದೆ.
ಅಮೆರಿಕಾದಲ್ಲಿ ಸ್ಥಾಪಿಸಲಾಗಿರುವ 700 ಕ್ಕೂ ಹೆಚ್ಚು ಶೇಕ್ ಅಲರ್ಟ್ ವ್ಯವಸ್ಥೆಯಿಂದ ಭೂಂಪನ ನಡೆಯುವ ಕೆಲವು ಸೆಕೆಂಡುಗಳ ಮುನ್ನ ಎಚ್ಚರಿಕೆ ನೀಡುವುದು ಹಲವು ಜನರ ಪ್ರಾಣವನ್ನು ರಕ್ಷಿಸಲು ಸಹಾಯಕಾರಿಯಾಗಲಿದೆ.
ಇದನ್ನು ಓದಿ: ಟಿಕ್‌ಟಾಕ್ ಖರೀದಿಸಲಿದೆ ಜಿಯೋ? ಮಾತುಕತೆ ಆರಂಭಿಸಿದ ರಿಲಯನ್ಸ್-ಬೈಟ್‌ಡ್ಯಾನ್ಸ್!
ಆದರೆ ವಿಶ್ವದ ಎಲ್ಲಾ ಭಾಗದಲ್ಲಿಯೂ ಶೇಕ್ ಅಲರ್ಟ್ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ವಿಶ್ವದಲ್ಲಿ ಬಳಕೆಯಲ್ಲಿರುವ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳನ್ನು ಭೂಕಂಪನದ ಎಚ್ಚರಿಕೆಯ ಘಂಟೆಯ ಮಾದರಿಯಲ್ಲಿ ಬಳಕೆ ಮಾಡಲು ಯೋಜನೆಯೊಂದು ರೂಪಿತವಾಗಿದೆ.
ಇಂದಿನಿಂದ, ನಿಮ್ಮ ಆಂಡ್ರಾಯ್ಡ್ ಫೋನ್ ನೀವು ಜಗತ್ತಿನ ಎಲ್ಲೇ ಇದ್ದರೂ ಆಂಡ್ರಾಯ್ಡ್ ಭೂಕಂಪ ಎಚ್ಚರಿಕೆ ವ್ಯವಸ್ಥೆಯ ಭಾಗವಾಗಬಹುದು. ನಿಮ್ಮ ಆಂಡ್ರಾಯ್ಡ್ ಫೋನ್ ಮಿನಿ ಸೀಸ್ಮೋಮೀಟರ್ ಸಹಾಯದಿಂದ ಇದು ಸಾಧ್ಯವಾಗಲಿದೆ. ನಿಮ್ಮ ಫೋನಿನೊಂದಿಗೆ ಲಕ್ಷಾಂತರ ಇತರ ಆಂಡ್ರಾಯ್ಡ್ ಫೋನ್‌ಗಳನ್ನು ಸೇರಿಕೊಂಡು ವಿಶ್ವದ ಅತಿದೊಡ್ಡ ಭೂಕಂಪ ಪತ್ತೆ ಜಾಲವನ್ನು ರೂಪಿಸುತ್ತದೆ.

ಎಲ್ಲಾ ಸ್ಮಾರ್ಟ್‌ಫೋನ್‌ಗಳು ಸಣ್ಣ ಅಕ್ಸೆಲೆರೊಮೀಟರ್‌ಗಳೊಂದಿಗೆ ಬರುತ್ತವೆ, ಅದು ಭೂಕಂಪ ಸಂಭವಿಸುತ್ತಿರುವುದನ್ನು ಸೂಚಿಸುವ ಸಂಕೇತಗಳನ್ನು ಗ್ರಹಿಸುತ್ತದೆ. ಫೋನ್ ಭೂಕಂಪ ಎಂದು ಭಾವಿಸುವ ಯಾವುದನ್ನಾದರೂ ಪತ್ತೆ ಮಾಡಿದರೆ, ಅದು ನಮ್ಮ ಭೂಕಂಪ ಪತ್ತೆ ಸರ್ವರ್‌ಗೆ ಸಂಕೇತವನ್ನು ಕಳುಹಿಸುತ್ತದೆ.
ನಂತರ ಈ ಸಂಕೇತಗಳನ್ನು ಬಳಕೆ ಮಾಡಿಕೊಂಡು ಭೂಕಂಪ ಸಂಭವಿಸುತ್ತಿದೆಯೇ ಎಂದು ಕಂಡುಹಿಡಿಯಲು ಸರ್ವರ್ ಅನೇಕ ಫೋನ್‌ಗಳಿಂದ ಮಾಹಿತಿಯನ್ನು ಸಂಯೋಜಿಸುತ್ತದೆ. ಇದರಿಂದ ಎಚ್ಚರಿಕೆಯ ಸಂದೇಶವು ದೊರೆಯಲಿದೆ.
ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ ಎಚ್ಚರಿಕೆಗಳೊಂದಿಗೆ ಇದು ಪ್ರಾರಂಭವಾಗುತ್ತಿದೆ. ಮುಂಬರುವ ವರ್ಷದಲ್ಲಿ ವಿಶ್ವದಲ್ಲಿ ಆಂಡ್ರಾಯ್ಡ್ ಫೋನ್ ಆಧಾರಿತ ಭೂಕಂಪನ ಪತ್ತೆಹಚ್ಚುವಿಕೆಯನ್ನು ನೀವು ನಿರೀಕ್ಷಿಸಬಹುದು.