ಎಲಾನ್ ಮಸ್ಕ್, ಅಮೆಜಾನ್ ಸಿಇಒ ಬೆಜೊ ಎಲ್ಲರೂ ಪರ್ಯಾಯ ಭೂಮಿಯನ್ನು ಹುಡುಕುತ್ತಿದ್ದಾರೆ. ಈ ಭೂಮಿ ಉಳಿಯಬೇಕೆಂದರೆ ಮನುಷ್ಯ ವಾಸಿಸಲು ಯೋಗದ ಜಾಗವೊಂದನ್ನು ಕಂಡುಕೊಳ್ಳುವ ಉತ್ಸಾಹ, ಆಸೆ ಹೆಚ್ಚಾಗಿದೆ. ಇತ್ತೀಚೆಗೆ ಸೌರಮಂಡಲದಾಚೆಗೆ ಗ್ರಹಗಳನ್ನು ಗುರುತಿಸಿದ ವಿಜ್ಞಾನಿಗಳಿಗೆ ನೊಬೆಲ್ ಪುರಸ್ಕಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಭೂಮಿಯಂತಹದ್ದೇ ಗ್ರಹಗಳನ್ನು ಕಂಡುಕೊಳ್ಳುವ ಬಗ್ಗೆ ಸ್ವಾರಸ್ಯಕರ ಲೇಖನ ಇಲ್ಲಿದೆ

“ಸಾರ್ ನಿನ್ನೆ ಚರ್ಚಿಸಿದಂತೆ ಇಷ್ಟೆಲ್ಲಾ ಗೆಲಾಕ್ಸಿಗಳಿವೆ. ಅವುಗಳಲ್ಲಿ ಎಷ್ಟೆಲ್ಲ ನಕ್ಷತ್ರಗಳಿರಬೇಕು. ಇಷ್ಟೆಲ್ಲಾ ಇದ್ದ ಮೇಲೆ ನಮ್ಮ ಭೂಮಿಯ ತರಹ ಗ್ರಹಗಳೂ ಇರಬೇಕಲ್ಲವೇ ”
ನಕ್ಷತ್ರಿಕ : ನೀನು ಹೇಳುವುದು ನಿಜ. 1960ರ ದಶಕದಲ್ಲಿ ಡ್ರೇಕ್ ಎಂಬ ಎಜ್ಞಾನಿ ಇದರ ಬಗ್ಗೆ ಬಹಳ ಯೋಚಿಸಿ ನಮ್ಮ ತರಹದ ಎಷ್ಟು ನಾಗರೀಕತೆಗಳಿರಬಹುದು ಎನ್ನುವುದಕ್ಕೆ ಒ೦ದು ಸಮೀಕರಣವನ್ನು ಬರೆದಿಟ್ಟರು. ಈಗ ಅದನ್ನು ನಾವೇ ಪ್ರಯತ್ನಿಸೋಣ. ಮೊದಲು ನಮ್ಮ ಗೆಲಕ್ಷಿಯಲ್ಲಿ ಎಷ್ಟು ನಕ್ಷತ್ರಗಳಿವೆ?
“ಆವತ್ತು ಚರ್ಚೆಸಿದೆವಲ್ಲ, ಸಾರ್ ! 100-200 ಬಿಲಿಯನ್ ಇರಬಹುದು.’
”ಸ್ವಲ್ಪ ಸೂರ್ಯನ ತರಹ ಇರಬೇಕು. ಅಲ್ಲವಾ ಸರ್ ? ಒಟ್ಟಿನಲ್ಲಿ 5% ಅಂದುಕೊಂಡರೆ ಸೂರ್ಯನ ತರಹ ತಾರೆಗಳು ಸುಮಾರು 5-10 ಬಿಲಿಯನ್.”
“ಸಾರ್ ! ಆವತ್ತು ಕಡಿಮೆ ಪ್ರಕಾಶದ ನಕ್ಷತ್ರಗಳಿಗೂ ಗ್ರಹಗಳಿರಬಹುದು ಎಂದಿರಿ ಅಲ್ಟೇ?’
”ಹೌದಯ್ಯ! ಇಲ್ಲಿ ಒಂದು ಊಹೆ ಮಾಡ್ತಾ ಇದ್ದೀವಿ, ಅಷ್ಟೇ! ಸೂರ್ಯನಂತಹ ನಕ್ಚತ್ರಗಳನ್ನು ಮಾತ್ರ ತೆಗೆದುಕೋಳ್ಳೋಣ. ಅವುಗಳಲ್ಲಿ ಅರ್ಧದಲ್ಲಿ ಗ್ರಹಗಳಿರಬಹುದು ಎಂದುಕೊ೦ಡರೂ ಅದರ ಸಂಖ್ಯೆ 3-4 ಬಿಲಿಯನ್. ಪ್ರತಿಯೊಂದಕ್ಕೂ ಸರಾಸರಿ 2 ಗ್ರಹ ಇದೆ ಅಂದಕೊ೦ಡರೆ, 6-8 ಬಿಲಿಯನ್ ಗ್ರಹಗಳಿರಬಹುದು. ಇವುಗಳಲ್ಲಿ ಎಷ್ಟು “ಗೋಲ್ಡಲಾಕ್’ ಗ್ರಹಗಳು ಎ೦ಬುದನ್ನು ಲೆಕ್ಕ ಮಾಡಬೇಕು. ಮುಂದೆ ಮನುಷ್ಯ ವಲಸೆ ಹೋಗಬೇಕಾದರೆ ಇಂತಹ ಯಾವುದಾದರೂ ಜಾಗವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.”
“ಸಾರ್, ಸೌರಮಂಡಲದಲ್ಲಿ ಸೂರ್ಯ ಕೆಂಪು ದೈತ್ಯ ಘಟ್ಟಕ್ಕೆ ಬ೦ದಾಗ ಉಷ್ಣತೆ ಬಹಳ ಹೆಚ್ಚಾಗಿ ಮನುಷ್ಯ ಭೂಮಿಯನ್ನು ಬಿಡಬೇಕಾಗುತ್ತದೆ ಅಲ್ಲವೇ ?”
”ಕೆ೦ಪು ದೈತ್ಯ ಘಟ್ಟ ಸೇರುವ ಮೊದಲೇ ಅದರಿಂದ ಪ್ರಕಾಶ ಹೆಚ್ಚಿರುತ್ತದೆ. ಅದಕ್ಕೆ ಇನ್ನೂ ಒಂದೂವರೆ ಬಿಲಿಯನ್ ವರ್ಷಗಳು ಬೇಕು. ಅಷ್ಟು ಹೊತ್ತಿಗೆ ಭೂಮಿಯ ಉಷ್ಣತೆ 100 ಡಿಗ್ರಿ ಸೆಂಟಿಗ್ರೇಡಿಗೂ ಹೆಚ್ಚಿದ್ದು ಯಾವ ಜೀವಿಯೂ ಉಳಿದಿರುವ ಸಾಧ್ಯತೆ ಇಲ್ಲ.”
“ಸರ್ ! ಆಗ ಹೊರ ಗ್ರಹಗಳಾದ ಯುರೇನಸ್, ನೆಪ್ಟೂನ್‌ಲೆಲ್ಲಾ ಉಷ್ಣತೆ ಹೆಚ್ಚಾಗಿ ಅವು ವಾಸಯೋಗ್ಯವಾಗಬಹುದಲ್ಲವೆ ?”
“ಆ ಸಾಧ್ಯತೆ ಇದ್ದೇ ಇದೆ. ಆದರೂ ಎಂದಾದರೂ ಮಾನವ ಮನೆಯನ್ನು ಖಾಲಿ ಮಾಡಿಕೊಂಡು ಹೋಗಲೇ ಬೇಕು. ಆಗ ಅವನು ಭೂಮಿಯ ಗುಣಗಳುಳ್ಳ ಗ್ರಹವನ್ನು ಆರಿಸಬೇಕು.”
“ಅವನ್ನು ಭವಿಷ್ಯದ ಭೂಮಿಗಳು ಎಂದು ಕರೆಯಬಹುದೇ ಸಾರ್? ಅವುಗಳನ್ನು ಈಗಲೇ ಹುಡುಕಿಟ್ಟುಕೊಳ್ಳಬೇಕಲ್ಲವಾ ?’
“ಹೆಸರು ಚೆನ್ನಾಗಿದೆಯಯ್ಯ ನಕ್ಷತ್ರಿಕ, ಹೌದು ಅಂತಹ ಭೂಮಿಗಳಿಗೆ ಹುಡುಕಬೇಕು. ಆ ಕೆಲಸವನ್ನು ಆಗಲೇ ಆರಂಭಿಸಿದ್ದಾನೆ. ಆ ವಿಧಾನಗಳು ಯಾವುವು ಎಂದು ಈಗ ನೋಡೋಣ. ಯಾವ ಹೊರ ಗ್ರಹವನ್ನೂ ಪ್ರತ್ಯಕ್ಷವಾಗಿ ನೋಡುವುದು ಅತಿ ಕಷ್ಟ ದೂರದಿಂದ ನಕ್ಷತ್ರಗಳ ಬೆಳಕೇ ಕಡಿಮೆ ಇರುತ್ತದೆ. ಅದಲ್ಲದೆ ಈ ಬೆಳಕು ಗಹದ ಮೇಲೆ ಬಿದ್ದು ಅದು ಪ್ರತಿಫಲನವಾಗಿ ನಮ್ಮನ್ನು ಸೇರಬೇಕಲ್ಲ ?”
“ಈ ಸಂಶೋಧನೆಗಳು ಯಾವಾಗ ಶುರುವಾದವು ಸರ್.”
“1960ರ ದಶಕದಲ್ಲೇ ಕೆಲವು ಸುದ್ದಿಗಳಿದ್ದವು. ನಮಗೆ ಹತ್ತಿರದ ಒ೦ದು ನಕ್ಷತ್ರವಿದೆ. ಬರ್ನಾರ್ಡ್ ನಕ್ಷತ್ರ. 6 ಜ್ಯೋತಿವರ್ಷಗಳ ದೂರದಲ್ಲಿದೆ. ಪುಟ್ಟ ನಕ್ಷತ್ರ! ಕೆ೦ಪು ಕುಬ್ಬ ಅದು ಸ್ವಲ್ಪ ಅಡ್ಡಾದಿಡ್ಡಿ ಚಲಿಸುತ್ತಿರಬೇಕೆಂದು ಕೆಲವು ಖಗೋಳಜ್ಞರು ಅನುಮಾನಪಟ್ಟರು.”
“ಅದರ ಸುತ್ತ ಗ್ರಹಗಳು ಸುತ್ತುತ್ತಿದ್ದರೆ ನಕ್ಷತ್ರದ ಚಲನೆಯಲ್ಲಿ ಇರುತ್ತದೆ ಅಲ್ವಾ ಸರ್ ?”
“ಹೌದು, ನಿಹಾರಿಕಾ, ನಮ್ಮ ಸೌರಮಂಡಲದ ಅತಿ ಆಚೆಯ ಗ್ರಹ, ನೆಪ್ಚೂನ್ ಗ್ರಹವನ್ನು ಕಂಡು ಹಿಡಿದಿದ್ದೇ ಈ ವಿಧಾನದಿ೦ದ! ಆದರೆ ಅನೇಕ ಬಾರಿ ಪರಿಶೀಲಿಸಿದ ನಂತರ ಬರ್ನಾರ್ಡ್ ನಕ್ಷತ್ರದ ಬೆಳಕು ನಮ್ಮ ವಾತಾವರಣವನ್ನು ಪ್ರವೇಶಿಸಿದ ನಂತರ ಈ ಏರು ಪೇರು ನಡೆದಿದೆ ಎ೦ದು ಗೊತ್ತಾಯಿತು. ಏನೇ ಆಗಲೀ ಇದು ಒಂದು ವಿಧಾನ, ಮುಖ್ಯ ವಿಧಾನ. ಇನ್ನೊಂದು ವಿಧಾನದಲ್ಲಿ ನಕ್ಚತ್ರದ ಬೆಳಕನ್ನು ಸತತವಾಗಿ ವೀಕ್ಷಿಸುತ್ತ ಅದರ ಪ್ರಕಾಶ ಹೆಚ್ಚು ಕಡಿಮೆಯಾದರೆ ಅದನ್ನು ಮತ್ತೊಂದು ಆಕಾಶಕಾಯ ಸುತ್ತುತ್ತಿರಬಹುದು ಎಂದು ಹೇಳಬಹುದು.”
“ಸರ್ ! ಸರ್ ! ಇದು “ಟ್ರಾನ್ಸಿಟ್ ಆಫ್ ವೀನಸ್ ತರಹ ಅಲ್ವಾ?”
“ಹೌದು ಸಾರ್, 2012ರ ಜೂನ್ ತಿ೦ಗಳಲ್ಲಿ ನಡೆದ ಶುಕ್ರ ಸಂಕ್ರಮಣದ ವಿಧಾನ.”
”ಭೇಷ್ ! ಇಬ್ಬರೂ ಸರಿಯಾಗಿಯೇ ಹೇಳಿದ್ದೀರಿ. ಚಿತ್ರಗಳನ್ನು (10.3, 10.4) ನೋಡಿ. ಚೆನ್ನಾಗಿ ಅರ್ಥವಾಗಬಹುದು. 3ನೆಯ ವಿಧಾನ ಒಂದನೆಯ ವಿಧಾನದ ಎಸ್ತರಣೆ. ಗ್ರಹವಿದ್ದರೆ ನಕ್ಷತ್ರದ ಪಥ ಬದಲಾಗುತ್ತಲ್ಲವೇ ? ಹಾಗೇ ನಕ್ಷತ್ರಕ್ಕೂ ನಮ್ಮ ಭೂಮಿಗೂ ಇರುವ ದೂರ ಬದಲಾಯಿಸುತ್ತ ಹೋಗುತ್ತದೆ. ಆ ನಕ್ಷತ್ರ ಭೂಮಿಗೆ ಹತ್ತಿರ ಬಂದಾಗ ಅದರ ಬೆಳಕು ಹೆಚ್ಚು ನೀಲಿಯಾಗಿಯೂ ಅದು ದೂರಹೋಗುತ್ತಾ ಅದರ ಕೆಂಪು ಕಡೆಯೂ ವಾಲಿರುತ್ತದೆ.”
“ಡಾಪ್ಲರ್ ಪರಿಣಾಮ ! ರೈಲು ನಮಗೆ ಹತ್ತಿರ ಬರುವಾಗ ಒ೦ದು ತರಹದ ಶಬ್ದ ಮತ್ತು ದೂರ ಹೋದಾಗ ಬೇರೆಯ ತರಹದ ಶಬ್ದ ಕೇಳುವತರಹ. ಸರಿಯಾ ಸಾರ್?”
”ಸರಿ ನಕ್ಷತ್ರಿಕ ! ಆದ್ದರಿ೦ದ ಈ ನಕ್ಷತ್ರದ ವರ್ಣ ಪಟಲವನ್ನು ಗಮನಿಸುತ್ತಾ ಹೋದರೆ ಗ್ರಹಗಳ ಅಸ್ತಿತ್ವ ಗೊತ್ತಾಗುತ್ತದೆ. ಈಗ ಸುಮಾರು 30 ವರ್ಷಗಳ ಹಿಂದೆ ಇಂತಹ ಸಂಶೋಧನೆಗಳು ಹೆಚ್ಚಾದವು ಗ್ರೀಕರು ಒಂದು ನಕ್ಷತ್ರ ಪುಂಜಕ್ಕೆ, ಅಂದ್ರೆ ನಿಹಾರಿಕಾ, ಕ್ಯಾನ್ಸೆಲೇಷನ್‌ಗೆ, ಅವರ ಪುರಾಣಗಳ ಹಾರುವ ಕುದುರೆಯ ಹೆಸರಿಟ್ಟಿದ್ದರು. ಹೆಸರು ಪೆಗಾಸಿಸ್.”
“ಸಾರ್ ! ನಮ್ಮ ಪುರಾಣದಲ್ಲೂ ಉಚ್ಚೈಶ್ಚವಸ್ ಎ೦ಬ ಕುದುರೆ ಇದೆ. ಅಮೃತ ಮಂಥನದಲ್ಲಿ ಹುಟ್ಟಿತಂತೆ. ಏಳು ತಲೆಗಳು. ”
“ಸರಿ ನಕ್ಚತ್ರಿಕ! ಆ ಪೆಗಸಿಸ್ ನಕ್ಷತ್ರ ಪು೦ಜದಲ್ಲಿ ಒಂದು ತಾರೆ. ಹೆಸರಿಲ್ಲ. ಅಂಕಿ ಮಾತ್ರ: ಪೆಗಾಸಿ 51 ಎಂದು ಅದರ ಹೆಸರು.”
“ಖೈದಿಗಳಿಗೆ ಕೊಡುವ ಹಾಗೆ”
“ನಕ್ಷತ್ರಿಕಾ! ನನ್ನನ್ನು ಮುಂದೆ ಹೋಗಲು ಬಿಡು. ಸುಮಾರು 50 ಜ್ಯೋತಿವರ್ಷಗಳು ದೂರ ಅದು. ನಮ್ಮ ಸೂರ್ಯನ ಗುಣಗಳಿರುವ ತಾರೆ. ಅದರಿಂದ ಬರುತ್ತಿದ್ದ ವರ್ಣಪಟಲ ಬದಲಾಗುತ್ತಲೇ ಇದ್ದಿತು. ಆದ್ದರಿಂದ ಗುರುಗ್ರಹದ ತರಹ ಹೆಚ್ಚು ದ್ರವ್ಯರಾಶಿಯ ಗ್ರಹವೊಂದು ಈ ನಕ್ಷತ್ರವನ್ನು 4.2 ದಿನಗಳಲ್ಲಿ ಸುತ್ತುತ್ತಿದೆ ಎಂದು ತಿಳಿಯಿತು (ಚಿತ್ರ 10.12. ಇದನ್ನು ಪ್ರಥಮ ಅನ್ಯಗ್ರಹ ಎ೦ದು ಪರಿಗಣಿಸಲಾಗಿದೆ. ಈ ಎಲ್ಲ ವಿಧಾನಗಳನ್ನು ಅನುಸರಿಸಿ ಅನೇಕ ಅನ್ಯಗ್ರಹಗಳನ್ನು ಕಂಡುಹಿಡಿಯಲಾಗಿದೆ. ಇವುಗಳಲ್ಲಿ ಒಂಟಿ ಗ್ರಹಗಳೇ ಹೆಚ್ಚು ಚಿಕ್ಕ ಗ್ರಹಗಳು ಇದ್ದರೂ ಹುಡುಕುವುದು. ಕಷ್ಟವಾದ್ದರಿಂದ ಗುರುವಿನಂತಹ ದೊಡ್ಡ ಗ್ರಹಗಳೇ ಹೆಚ್ಚು ಸಿಕ್ಕಿರುವ ಗ್ರಹಗಳೆಲ್ಲ ಹತ್ತಿರ (300 ಜ್ಯೋತಿರ್ವರ್ಷಗಳ ಒಳಗೆ) ಇರುವುದೂ ಆಶ್ಚರ್ಯವೇನಲ್ಲ. ಏಕೆಯೆಂದು ಹೇಳ್ತೀರ?”
“ಭೂಮಿಯಲ್ಲಿನ ದೂರದರ್ಶಕಗಳಿ೦ದ ಬಾಹ್ಯಾಕಾಶದಲ್ಲಿ ಚಿಕ್ಕ ಗ್ರಹಗಳನ್ನು ಹುಡುಕಲು ಕಷ್ಟ ಮೂಲ ನಕ್ಫತ್ರದ ಬೆಳಕು ಪ್ರತಿಫಲಿಸಿ ನಮಗೆ ಬರಬೇಕಾದರೆ ಗ್ರಹ ದೊಡ್ಡದೇ ಇರಬೇಕಾಗುತ್ತದೆ. ಆದ್ದರಿ೦ದ ಹತ್ತಿರದ ಗ್ರಹಗಳೇ ಹೆಚ್ಚು ಸಿಗುತ್ತವೆ.”
“ಹೌದು ! ಅದಲ್ಲವೆ ವಾತಾವರಣ ಬೆಳಕನ್ನು ಹೀರಿಯೂ ಬಿಡುತ್ತವೆ. ಇದಕ್ಕೋಸ್ಕರವೇ ನಾಸಾ ಸಂಸ್ಥೆ 2009ರಲ್ಲಿ ಒಂದು ಉಪಗ್ರಹವನ್ನು ಕಕ್ಷೆಯಲ್ಲಿ ಅದರ ಹೆಸರು ಕೆಪ್ಲರ್ !”
“ಕೆಪ್ಲರ್ ! ಕೆಪ್ಲರ್! ಸೌರಮ೦ಡಲದ ಮಾದರಿಯ ಸುಧಾರಣೆಗಳನ್ನು ಮಾಡಿದವನು ಅವನೇ ! ನೆಲದ ಮೇಲೆ ಎರಡು ಕಾಲು ಊರಿದ್ದ ವಿಜ್ಞಾನಿಯಾದರೂ ಕಲ್ಪನಾ ಲೋಕದಲ್ಲಿ ವಿಹರಿಸಿ, ಪ್ರಥಮ ವೈಜ್ಞಾನಿಕ ಕಾದಂಬರಿಯನ್ನು ಬರೆದವನೂ ಅವನೇ! ”
” ಕಡೆಗಾದರೂ ಅವನ ಮಹತ್ವನ್ನು ಅರಿತು ವೈಜ್ಞಾನಿಕ ಉಪಗ್ರಹಕ್ಕೆ ಅವರ ಹೆಸರನ್ನು ಇಟ್ಟರಲ್ಲಾ ಸಾರ್.”
“ಇದುವರೆವಿಗೂ ಐನ್‌ಸ್ಟೈನ್, ಚಂದ್ರ ಮತ್ತು ರೊಸ್ಸಿ ಯವರ ಹೆಸರುಗಳನ್ನು ಎಕ್ಸರೇ ಆಕಾಶಕಾಯಗಳ ಅಧ್ಯಯನದ ಉಪಕರಣಗಳಿಗೆ.”
”ಚ೦ದ್ರ ಅಂದರೆ ನಮ್ಮ ಎಸ್. ಚ೦ದ್ರಶೇಖರ್ ಅಲ್ವಾ ಸಾರ್.’
”ಹೌದು, ಹಬಲ್‌ನ ಹೆಸರನ್ನು ಆಪ್ಟಿಕಲ್ ಅಂದರೆ ಬೆಳಕಿನ ಖಗೋಳದ ಅಧ್ಯಯನಕ್ಕೆ, ಕಾಂಪ್ಟನ್ ಮತ್ತು ಫರ್ಮಿಯವರ ಹೆಸರನ್ನು ಗ್ಯಾಮಾ ಕಿರಣಗಳ ಖಗೋಳದ ಅನ್ವೇಷಣೆಗೆ. ಕ್ಯಾಸಿನಿ ಮತ್ತು ಹಾಯಘನ್ಸ್‌ರ ಹೆಸರುಗಳನ್ನು ಶನಿಗ್ರಹದ ಸಂಶೋಧನೆಗೆ, ಗೆಲೆಲಿಯೊ ಹೆಸರನ್ನು ಗುರುಗ್ರಹದ ಸ೦ಶೋಧನೆಗೆ.’
“ಅ೦ತೂ ಖ್ಯಾತ ವಿಜ್ಞಾನಿಗಳಲ್ಲ ಆಕಾಶದಲ್ಲಿ ಇಂಥ ಉಪಗ್ರಹಗಳ ರೂಪದಲ್ಲಿಯಾದರೂ ಬಂದು ಹೋಗುತ್ತರಲ್ಲವೇ ಸಾರ್.”
“ಹೌದು ನಕ್ಷತ್ರಿಕ ! ನಮ್ಮ ಗೆಲಾಕ್ಷಿಯಲ್ಲಿ ಭೂಮಿಯ ತರಹದ ಚಿಕ್ಕ ಗ್ರಹಗಳನ್ನು ಕಂಡುಹಿಡಿಯುವುದು ಈ ಕೆಪ್ಟರ್ ಉಪಗ್ರಹದ ಮುಖ್ಯ ಉದ್ದೇಶ. ಸುಮಾರು 1 ಲಕ್ಷ ಸೂರ್ಯನಂತಹ ನಕ್ಷತ್ರಗಳ ಪ್ರಕಾಶವನ್ನು ಸತತವಾಗಿ ಗಮನಿಸಿ ಅದರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಆ ಮಾಹಿತಿ ದಾಖಲೆಯಾಗುತ್ತದೆ. ತನ್ನ ಮೂರುವರೆ ವರ್ಷಗಳ ಅವಧಿಯಲ್ಲಿ 2740 ಅನ್ಯಗ್ರಹಗಳನ್ನು ಈ ಉಪಗ್ರಹ ಕಂಡುಹಿಡಿದಿದೆ. ಅವುಗಳಲ್ಲಿ 115 ಭೂಮಿಯ ತರಹವೇ ಇದ್ದು ಜೀವ ಇರಬಹುದಾದ ಸಾಧ್ಯತೆಗಳಿವೆ. ದೂರದಲ್ಲಿರುವ ಯಾವ ಗ್ರಹವನ್ನೂ ಪ್ರತ್ಯಕ್ಷವಾಗಿ ನೋಡುವುದು ಅತಿ ಕಷ್ಟವಲ್ಲವೇ? ಆದ್ದರಿಂದಲೇ 5% ಗೂ ಕಡಿಮೆ ಗ್ರಹಗಳು ಪ್ರತ್ಯಕ್ಷವಾಗಿ ಕ೦ಡು ಬಂದಿವೆ. ಬೇರೆಲ್ಲಕ್ಕೂ ವಿವಿಧ ಎಧಾನಗಳನ್ನು ಅನುಸರಿಸಲಾಗಿದೆ. ಕೆಪ್ತರ್ ಉಪಕರಣ ಮತ್ತು ಟೆಲೆಸ್ಕೋಪ್‌ಗಳು ಈ ವಿಶ್ವದಲ್ಲಿ ಇರುವ ಗ್ರಹಗಳ ವೈವಿಧ್ಯವನ್ನು ಎತ್ತಿ ತೋರಿಸಿವೆ. ಸೌರಮಂಡಲದ ಗ್ರಹಗಳ ಪರಿಚಯ ಮಾತ್ರ ಇರುವ ನಮಗೆ ಇಂತಹ ವೈವಿಧ್ಯ ಅಚ್ಚರಿಯನ್ನು ಉ೦ಟುಮಾಡುತ್ತದೆ.”
ಈಗ ನೋಡಿ
- ಎರಡು ನಕ್ಚತ್ರಗಳನ್ನು ಸುತ್ತುತ್ತಿರುವ ಕೆಲವು ಗ್ರಹಗಳಿವೆ. ಅ೦ದರೆ ಎರಡರ ಗುರುತ್ವಾಕರ್ಷಣಗೂ ಸಿಕ್ಕಿಕೊಂಡಿರುವ ಗ್ರಹಗಳು |! ಅವುಗಳ ಪಥಗಳು ಸ್ವಾರಸ್ಯವಾಗಿರುತ್ತವೆ. ಅಂತಹ ಒ೦ದು ಗ್ರಹದ ನಾಮಾಂಕ ಕೆಪ್ಟರ್ 16ಬಿ.
- ಕೆಲವು ಗ್ರಹಗಳು ನಕ್ಚತ್ರಕ್ಕೆ ಅತಿ ಸಮೀಪವಾಗಿ ಸುತ್ತುತ್ತಿವೆ. ನಮ್ಮ ಬುಧ ಗ್ರಹಕ್ಕಿಂತಲೂ ಹತ್ತಿರ. ಅಂದರೆ ಶಾಖ ಹೆಚ್ಚಿರುತ್ತದೆ.
- ಕೆಪ್ಲರ್ 11 ಎ೦ಬ ನಕ್ಷತ್ರ ಮಂಡಲದಲ್ಲಿ 6 ಗ್ರಹಗಳಿವೆ. ಅಂದರೆ ನಮ್ಮ ಸೌರಮಂಡಲದ ತರಹವೇ ಇದೆ.
- ಕೆಲವು ಗೃಹಗಳು ಸೂರ್ಯನಿಗಿಂತ ಕಡಿಮೆ ಪ್ರಕಾಶದ ನಕ್ಷತ್ರಗಳನ್ನು ಸುತ್ತುತ್ತಿವೆ. ಇವು ನಕ್ಷತಕ್ಕೆ ಹತ್ತಿರವಿದ್ದರೂ ವಾಸಮಾಡಲು ಯೋಗ್ಯವಿರುವ ಸಾಧ್ಯತೆಗಳಿವೆ.
- ಇತ್ತೀಚೆಗೆ ಚಂದ್ರನ ಗಾತ್ರದ ಒಂದು ಗ್ರಹವೂ ಕಂಡುಬಂದಿದೆ. ಆದರೆ ಕಡಿಮೆ ದ್ರವ್ಯರಾಶಿ ಇದ್ದರೆ ವಾತಾವರಣವನ್ನು ಉಳಿಸಿಕೊಳ್ಳಲಾಗುವುದಿಲ್ಲ.
- 13 ಜ್ಯೋತಿವರ್ಷಗಳ ದೂರದಲ್ಲಿ ಭೂಮಿಯ ತರಹದ ಒಂದು ಗ್ರಹ ಸಿಕ್ಕಿದೆ.
“ಸಾರ್ ! ಅಂತು ಬಹಳ ವೈವಿಧ್ಯವಿದೆ ಈ ಗ್ರಹಗಳಲ್ಲಿ ! ಭೂಮಿಗೆ ಕಡೆಗೂ ಸಂಗಾತಿ ಸಿಗಬಹುದಲ್ಲವೇ?’