ಮತ್ತೊಮ್ಮೆ ಬಳಕೆದಾರರ ಡೇಟಾ ಲೀಕ್ ಮಾಡಿದ ಫೇಸ್‌ಬುಕ್: ತಪ್ಪು ಯಾರದ್ದು?

ಈಗಾಗಲೇ ಹಲವು ಬಾರಿ ತನ್ನ ಬಳಕೆದಾರರ ಡೇಟಾವನ್ನು ಬೇರೆಯವರೊಂದಿಗೆ ಯಾವುದೇ ಅನುಮತಿ ಇಲ್ಲದೇ ಹಂಚಿಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಟೆಕ್ ದೈತ್ಯ ಫೇಸ್‌ಬುಕ್, ಮತ್ತೊಮ್ಮೆ ಇಂತಹದೇ ತಪ್ಪೊಂದನ್ನು ಎಸಗಿದೆ.

ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ಡೇಟಾವನ್ನು ತಪ್ಪಾಗಿ ಹಂಚಿಕೊಂಡಿರುವುದನ್ನು ಫೇಸ್‌ಬುಕ್ ಮತ್ತೆ ಒಪ್ಪಿಕೊಂಡಿದೆ.

ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ನಲ್ಲಿನ ದೋಷದಿಂದಾಗಿ ಸುಮಾರು 5,000 ಡೆವಲಪರ್‌ಗಳಿಗೆ ಬಳಕೆದಾರರ ಪ್ರೊಫೈಲ್‌ಗಳಿಗೆ ಅನಧಿಕೃತ ಪ್ರವೇಶವನ್ನು ನೀಡಿರುವುದನ್ನು ಕಂಪನಿ ಒಪ್ಪಿಕೊಂಡಿದೆ.

ವೈಯಕ್ತಿಕ ಮಾಹಿತಿಯನ್ನು ಥರ್ಡ್‌ ಪಾರ್ಟಿ ಡೆವಲಪರ್‌ಗಳು ಬಳಸಿಕೊಳ್ಳುವ ನಿಟ್ಟಿನಲ್ಲಿ ಫೇಸ್‌ಬುಕ್‌ನ ಮಾಡಿದಂತಹ ನಿಯಮಗಳು ವಿಫಲವಾದ ಹಿನ್ನಲೆಯಲ್ಲಿ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎನ್ನಲಾಗಿದೆ.

2018 ರಿಂದ ಫೇಸ್‌ಬುಕ್ ತನ್ನ ಬಳಕೆದಾರರ ಡೇಟಾ ಬಳಕೆಯ ವಿಧಾನವನ್ನು ಬದಲಾವಣೆ ಮಾಡಿದ್ದು, ಓಮ್ಮೆ 90 ದಿನಗಳಲ್ಲಿ ಅಪ್ಲಿಕೇಶನಲ್ಲಿ ಬಳಕೆದಾರರು ಸಂವಹನ ನಡೆಸದಿದ್ದರೆ ಡೇಟಾವನ್ನು ಪಡೆಯುವುದು ಸ್ವಯಂಚಾಲಿತವಾಗಿ ನಿರ್ಬಂಧಿತವಾಗುತ್ತದೆ. ಆದರೆ ಇದಲ್ಲಿ ದೋಷದಿಂದ ಅನೇಕ ಡೇವಲಪರ್‌ಗಳು ನಿರಂತವಾಗಿ ಬಳಕೆದಾರರ ಡೇಟಾವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.   

ಇದನ್ನು ಓದಿ: ಜಿಯೋಮೀಟ್: ರಿಲಯನ್ಸ್ ಜಿಯೋ ನಿಂದ ಉಚಿತ ದೇಶಿ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್

ಒಮ್ಮೆ 90 ದಿನಗಳ ಸಮಯ ಮಿತಿ ಮುಗಿದ ನಂತರ, ಫೇಸ್‌ಬುಕ್‌ ನಲ್ಲಿರುವ ಜನರ ತಮ್ಮ ಡೇಟಾವನ್ನು ಪಡೆಯಲು ಡೆವಲಪರ್‌ಗಳು ಬಳಕೆದಾರರನ್ನು ಮತ್ತೆ ಅನುಮತಿ ಕೇಳಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಫೇಸ್‌ಬುಕ್‌ ನ ಲಾಕಿಂಗ್ ವ್ಯವಸ್ಥೆಯು ವಿಫಲವಾಗಿದೆ. ಅನುಮತಿ ಇಲ್ಲದೆಯೇ ಬಳಕೆದಾರರ ಮಾಹಿತಿ ಡೇವಲಪರ್‌ಗಳಿಗೆ ಲಭ್ಯವಾಗುತ್ತಿದೆ.

“ಕೆಲವು ನಿದರ್ಶನಗಳಲ್ಲಿ ಅವರು ಕಳೆದ 90 ದಿನಗಳಲ್ಲಿ ಅಪ್ಲಿಕೇಶನ್ ಅನ್ನು ಬಳಸಿಲ್ಲವಾದರು ಈ ಹಿಂದೆ ಅಧಿಕೃತಗೊಳಿಸಿದ ಡೇಟಾವನ್ನು ಡೇವಲಪರ್‌ಗಳು ಸ್ವೀಕರಿಸುತ್ತಲೇ ಇದ್ದಾರೆ ಎಂಬುದು ನಮಗೆ ತಿಳಿದುಬಂದಿದೆ. ” ಎಂದು ಫೇಸ್‌ಬುಕ್‌ನ ಪ್ಲ್ಯಾಟ್‌ಫಾರ್ಮ್ ಪಾಲುದಾರಿಕೆಗಳ ವಿ.ಪಿ. ಕಾನ್‌ಸ್ಟಾಂಟಿನೋಸ್ ಪಾಪಾಮಿಲ್ಟಿಯಾಡಿಸ್ ಹೇಳಿದ್ದಾರೆ.

ಈ ಉಲ್ಲಂಘನೆಯ ಸ್ವರೂಪವು ಫೇಸ್‌ಬುಕ್‌ಗೆ ಕೆಟ್ಟ ಸುದ್ದಿಯಾಗಿದೆ, ಏಕೆಂದರೆ ಈ ಹಿಂದೆ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ಫೇಸ್‌ಬುಕ್‌ ಡೇಟವನ್ನು ಇದೇ ಮಾದರಿಯಲ್ಲಿ ಮೂರನೇ ವ್ಯಕ್ತಿ ಪ್ರವೇಶ ಮಾಡಿ ಬೇಕಾಬಿಟ್ಟಿ ಬಳಕೆ ಮಾಡಿಕೊಂಡಿದ್ದರು. ಈ ತಪ್ಪನ್ನು ಸರಿ ಮಾಡಲು ಈಗಾಗಲೇ ಫೇಸ್‌ಬುಕ್ ಕಾರ್ಯನಿರತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: