ಭಾರತದಲ್ಲಿ ಹೆಚ್ಚು ಬಳಕೆದಾರರನ್ನು ಸಂಪಾಸಿಕೊಂಡಿರುವ ಅಮೆರಿಕ ಮೂಲದ ಟೆಕ್ ದೈತ್ಯ ಫೇಸ್‌ಬುಕ್ ಹೊಸದೊಂದು ಅವತಾರವನ್ನು ಸೃಷ್ಟಿ ಮಾಡಿದ್ದು, ಈಗಾಗಲೇ ವೈರಲ್ ಆಗಿದೆ. ಫೇಸ್‌ಬುಕ್ ತನ್ನ ಮೊಬೈಲ್ ಆಪ್‌ನಲ್ಲಿ ಅವತಾರ್ ಅನ್ನು ಭಾರತೀಯರಿಗಾಗಿ ಬಿಡುಗಡೆ ಮಾಡಿದೆ.
ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗಾಗಿ ನಿಮ್ಮ ಕಾರ್ಟೂನ್ ರಚಿಸಲು ಅವತಾರ್ ಸಹಾಯವನ್ನು ಮಾಡುತ್ತದೆ. ಫೇಸ್‌ಬುಕ್ ಬಳಕೆದಾರರು ತಮ್ಮದೇ ಆದ ಅವತಾರಗಳನ್ನುತಮ್ಮದೇ ರೂಪಕ್ಕೆ ಸರಿಹೊಂದುವಂತೆ ರೂಪಿಸಿಕೊಳ್ಳುಬಹುದಾಗಿದೆ.
ಹೊಸದಾಗಿ ನೀಡಿರುವ ಅವತಾರ್ ಆಯ್ಕೆಯ ಕುರಿತು ಮಾಹಿತಿಯನ್ನು ನೀಡಿರುವ ಫೇಸ್‌ಬುಕ್ “ವಿನೋದ ಮತ್ತು ವೈಯಕ್ತಿಕ ರೀತಿಯಲ್ಲಿ ಹಲವಾರು ಭಾವನೆಗಳು ಮತ್ತು ಅಭಿವ್ಯಕ್ತಿಗಳನ್ನು ಹಂಚಿಕೊಳ್ಳಲು ಅವತಾರ್ ನಿಂದ ಸಾಧ್ಯವಾಗುತ್ತದೆ” ಎಂದು ಹೇಳಿದೆ.
ಡಿಜಿಟಲ್ ಪರಿಸರದಲ್ಲಿ ಆನ್‌ಲೈನ್‌ನಲ್ಲಿ ಸಂವಹನಗಳು ನಡೆಯುತ್ತಿರುವ ಸಮಯದಲ್ಲಿ ಈ ಹೊಸ ಆಯ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಭಾರತದಲ್ಲಿನ ಅವತಾರ್ ವೈಶಿಷ್ಟ್ಯವಾಗಿದ್ದು, ಇದರಲ್ಲಿ ವಿವಿಧ ಮುಖಗಳು, ಕೇಶವಿನ್ಯಾಸ ಮತ್ತು ಬಟ್ಟೆಗಳನ್ನು ಭಾರತೀಯ ಬಳಕೆದಾರರಿಗಾಗಿ ವಿಶೇಷವಾಗಿ ಕಸ್ಟಮೈಸ್ ಮಾಡಲಾಗಿದೆ.
ಈ ಅವತಾರಗಳನ್ನು ಫೇಸ್‌ಬುಕ್ ಸ್ಟೋರಿಯಲ್ಲಿ, ಫೇಸ್‌ಬುಕ್ ಮೆಸೆಂಜರ್ ಚಾಟ್ ವಿಂಡೋಗಳಲ್ಲಿ ಮತ್ತು ಫೇಸ್‌ಬುಕ್ ಕಾಮೆಂಟ್‌ಗಳಲ್ಲಿ ಬಳಸಬಹುದು. ಇದಲ್ಲದೇ ಈ ಅವತಾರಗಳನ್ನು ವಾಟ್ಸಾಪ್ ಚಾಟ್‌ಗಳಲ್ಲಿ ಸಹ ಹಂಚಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ಇದನ್ನು ನೋಡಿ: ಚೀನಾ ಆಪ್‌ಗಳು ಇಲ್ಲ ಅಂತ ಬೇಜಾರು ಬೇಡ: ಇಲ್ಲಿದೆ ನೋಡಿ ಸುರಕ್ಷಿತ ಆಪ್‌ಗಳು
ಫೇಸ್ ಬುಕ್ ಅವಾತರ್ ನಿಮ್ಮ ವಿಶಿಷ್ಟ ಡಿಜಿಟಲ್ ಪ್ರಾತಿನಿಧ್ಯವನ್ನು ರಚಿಸಲು ಮುಖದ ವೈಶಿಷ್ಟ್ಯಗಳು, ಕೂದಲು, ಬಣ್ಣಗಳು, ಬಟ್ಟೆಗಳನ್ನು ಮತ್ತು ಹೆಚ್ಚಿನದನ್ನು ಆಯ್ಕೆಗಳನ್ನು ಹೊಂದಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಲ್ಲಿ ಈ ವೈಶಿಷ್ಟ್ಯ ಲಭ್ಯವಿದೆ. ಆದರೆ ಈ ಹಿಂದೆಯೇ ಈ ಆಯ್ಕೆಯನ್ನು ಆಪಲ್ ತನ್ನ ಹೊಸ ಐಒಎಸ್ ನಲ್ಲಿ ಬಳಕೆದಾರರಿಗೆ ನೀಡಿತ್ತು. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮೊದಲು ಎನ್ನಬಹುದಾಗಿದೆ.
ಫೇಸ್‌ಬುಕ್‌ನಲ್ಲಿ ನಿಮ್ಮ ಅವತಾರವನ್ನು ಹೇಗೆ ರಚಿಸುವುದು:
ನಿಮ್ಮ ವೈಯಕ್ತಿಕ ಅವತಾರವನ್ನು ರಚಿಸಲು ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿನ ಕಾಮೆಂಟ್ ರಚಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ.
- ಕಾಮೆಂಟ್ ವಿಂಡೋದಲ್ಲಿ ಕ್ಲಿಕ್ ಮಾಡಿ.
- ‘ಸ್ಮೈಲಿ’ ಐಕಾನ್ ಮೇಲೆ ಟ್ಯಾಪ್ ಮಾಡಿ.
- ‘ಸ್ಟಿಕ್ಕರ್’ ಟ್ಯಾಪ್ ಮಾಡಿ
- “ನಿಮ್ಮ ಅವತಾರ್” ಆಯ್ಕೆಯನ್ನು ಮಾಡಿ.
- ನಂತರ ಅವತಾರವನ್ನು ರಚಿಸುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
- ಫೇಸ್‌ಬುಕ್ ಪ್ರೋಫೈಲ್‌ನಿಂದ ಹಿಡಿದು, ಕಾಮೆಂಟ್‌ನಲ್ಲಿಯೂ ವಿವಿಧ ರೀತಿಯಲ್ಲಿ ನಿಮ್ಮ ಅವರಾತ್ ಅನ್ನು ಫೋಸ್ಟ್ ಮಾಡಬಹುದಾಗಿದೆ.
ಇದನ್ನು ಫೇಸ್‌ಬುಕ್ ಮೆಸೆಂಜರ್ ಆ್ಯಪ್ ಮೂಲಕವೂ ಮಾಡಬಹುದು. ಸದ್ಯ ಮೆಸೆಂಜರ್ ಅಪ್ಲಿಕೇಶನ್‌ನಿಂದ ಅವತಾರ ರಚನೆಯು ಆಂಡ್ರಾಯ್ಡ್ ನಲ್ಲಿ ಮಾತ್ರ ಲಭ್ಯವಿದೆ ಮತ್ತು ಶೀಘ್ರದಲ್ಲೇ ಐಒಎಸ್ ನಲ್ಲಿಯೂ ಲಭ್ಯವಾಗಲಿದೆ.