ಅರವತ್ತು ಸೆಕೆಂಡ್‌ಗಳ ವಿಡಿಯೋ ಹಂಚಿಕೊಳ್ಳುವ ಚೀನಾದ ಆ್ಯಪ್ ಟಿಕ್‌ಟಾಕ್ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಆ್ಯಪ್‌ನ ಜನಪ್ರಿಯತೆಯಿಂದ ಆಕರ್ಷಿತವಾಗಿರುವ ಫೇಸ್‌ಬುಕ್ ಈ ಮಾರುಕಟ್ಟೆಯ ಮೇಲೆ ತನ್ನ ಹಿಡಿತ ಸಾಧಿಸಲು ಪ್ರತಿ ಸ್ಪರ್ಧಿಯನ್ನು ಪರಿಚಯಿಸಲು ಸಿದ್ಧವಾಗಿದೆ

ಈಗಾಗಲೇ ಅಮೆರಿಕದಲ್ಲಿ ಲಭ್ಯವಿರುವ ಲ್ಯಾಸೊ ಭಾರತಕ್ಕೆ ಬರಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಲ್ಯಾಸೊ ಟಿಕ್ ಟಾಕ್ ಮಾದರಿಯ ಸಣ್ಣ ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕೆಂದೇ ಇರುವ ಆ್ಯಪ್ . ಫೇಸ್‌ಬುಕ್ ಭಾರತೀಯ ಮಾರುಕಟ್ಟೆಗೆ ಇನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
ಎನ್‌ಟ್ರ್ಯಾಕರ್ ಈ ಕುರಿತು ವರದಿ ಪ್ರಕಟಿಸಿದ್ದು, ಕಳೆದ ವರ್ಷ ಟಿಕ್‌ಟಾಕ್ ಭಾರತದಲ್ಲಿ ಹಲವು ವಿವಾದಗಳಿಗೆ ಸಿಲುಕಿದ್ದರಿಂದ ಭಾರತ ಸರ್ಕಾರ ಆಪಲ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಹೊರಹಾಕಲಾಗಿತ್ತು. ಅಶ್ಲೀಲ ವಿಡಿಯೋಗಳು ಆ್ಯಪ್ ನಲ್ಲಿ ಹೆಚ್ಚು ಪ್ರಕಟವಾಗುತ್ತಿದುದು ಒಂದು ಮುಖ್ಯ ಕಾರಣವಾಗಿತ್ತು ಎಂದು ಫೇಸ್‌ಬುಕ್ ಹೊಸ ನಡೆಯ ಹಿಂದಿನ ಉದ್ದೇಶವನ್ನು ಬಿಚ್ಚಿಟ್ಟಿದೆ.
ಟಿಕ್‌ಟಾಕ್‌ಗಾಗಿ ವಿಡಿಯೋ ಚಿತ್ರಿಸಲು ಹೋಗು ದೆಹಲಿ ಮೂಲದ ನಟರೊಬ್ಬರು ಸಾವಿಗೀಡಾಗಿದ್ದರು. ಹಲವು ಹಿಂಸಾಚಾರಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಿಷೇಧಕ್ಕೆ ಒಳಪಟ್ಟಿದ್ದ ಆ್ಯಪ್ ಕೆಲವೇ ದಿನಗಳಲ್ಲಿ ಮರಳಿ ಸಕ್ರಿಯವಾಗಿತ್ತು. ಭಾರತದಲ್ಲಿ 62.7 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಈ ಪೈಕಿ 50 ಕೋಟಿ ಬಳಕೆದಾರರು ಟಿಕ್‌ಟಾಕ್ ಡೌನ್‌ಲೋಡ್ ಮಾಡಿಕೊಂಡು ಬಳಸಿದ್ದಾರೆ.

ಇಷ್ಟು ದೊಡ್ಡ ಮಾರುಕಟ್ಟೆ ಇರುವುದನ್ನು ಗಮನಿಸಿದ ಫೇಸ್‌ಬುಕ್, ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ತಮ್ಮ ಕುಟುಂಬದ ಲ್ಯಾಸೊವನ್ನು ಭಾರತದ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ ಎಂದು ಎನ್‌ಟ್ರ್ಯಾಕರ್ ವರದಿಯಲ್ಲಿ ಹೇಳಿದೆ. ಪ್ರಸ್ತುತ ಲ್ಯಾಸೊಗೆ ಮೆಕ್ಸಿಕೊ ಒಂದರಲ್ಲೇ 22 ಲಕ್ಷ ಬಳಕೆದಾರರಿದ್ದಾರೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ ಆ್ಯಪ್ ಮೂಲಕ ಅತಿ ದೊಡ್ಡ ಬಳಕೆದಾರರ ಜಾಲವನ್ನು ಹೊಂದಿರುವ ಫೇಸ್‌ಬುಕ್ ಸಂಸ್ಥೆ ಲ್ಯಾಸೊ ಮೂಲಕ ಮತ್ತಷ್ಟು ವ್ಯಾಪಕವಾಗಿ ವಿಸ್ತರಿಸಿಕೊಳ್ಳುವ ಮತ್ತು ಜನಪ್ರಿಯತೆಯ ಲಾಭ ಪಡೆದುಕೊಳ್ಳುವುದಕ್ಕೆ ಸಿದ್ಧವಾಗಿದೆ ಎನ್ನಲಾಗಿದೆ.