ಹೊಸ ಸುದ್ದಿ! ಫೇಸ್‌ಬುಕ್‌ನಲ್ಲಿ ಮತ್ತೆ ಕಾಣಿಸಿಕೊಳ್ಳಲಿವೆ ಸುದ್ದಿ!!

ಫೇಸ್‌ಬುಕ್‌ ಸುದ್ದಿಗಳನ್ನು ನೀಡುವ ವಿಷಯದಲ್ಲಿ ಸಾಕಷ್ಟು ವಿವಾದಕ್ಕೆ ಸಿಲುಕಿ ಆ ಸೇವೆಯನ್ನೇ ನಿಲ್ಲಿಸಿತ್ತು. ಈಗ ಮತ್ತೆ ಹೊಸ ರೂಪದಲ್ಲಿ ಸುದ್ದಿಗಳನ್ನು ನೀಡಲು ಸಿದ್ಧವಾಗಿದೆ. ಇನ್ನೊಂದು ವಾರದಲ್ಲಿ ಈ ಸೇವೆ ಲಭ್ಯವಾಗಲಿದೆ ಎನ್ನಲಾಗಿದೆ

ಫೇಸ್‌ಬುಕ್‌ನಲ್ಲಿ ಮಾರ್ಕೆಟ್‌ಪ್ಲೇಸ್‌ ಮುಂತಾದ ಟ್ಯಾಬ್‌ಗಳ ಜೊತೆಗೆ ಸುದ್ದಿಯದ್ದೊಂದು ಟ್ಯಾಬ್‌ ಸೇರ್ಪಡೆಯಾಗಲಿದೆ. ಹೌದು ಫೇಸ್‌ಬುಕ್‌ ಮತ್ತೆ ಸುದ್ದಿಗಳನ್ನು ನೀಡುವುದಕ್ಕೆ ಸಿದ್ಧವಾಗಿದ್ದು, ಇನ್ನೊಂದು ವಾರದಲ್ಲಿ ಲಭ್ಯವಾಗಲಿದೆ. ದೊಡ್ಡ ಸುದ್ದಿ ಸಂಸ್ಥೆಗಳೊಂದಿಗೆ ಕೈ ಜೋಡಿಸಿರುವ ಫೇಸ್‌ಬುಕ್‌ ಸುದ್ದಿ ಭಾರಿ ಮೊತ್ತವನ್ನು ಈ ಸಂಸ್ಥೆಗಳಿಗೆ ನೀಡುತ್ತಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಫೇಸ್‌ಬುಕ್‌ನ ಸಿಇಒ ಝುಕರ್‌ ಬರ್ಗ್‌ ಈ ಸುಳಿವು ನೀಡಿದ್ದಾರೆ. ಸುದ್ದಿ ಮತ್ತು ಪತ್ರಿಕೋದ್ಯೋಗಕ್ಕೆ ಸಂಬಂಧಿಸಿದ ಬಹಳ ದಡ್ಡ ಪ್ರಕಟಣೆ ಹೊರಬೀಳಲಿದೆ ಉತ್ತಮ ಗುಣಮಟ್ಟದ ಪತ್ರಿಕೋದ್ಯೋಗದಲ್ಲಿ ಸಕ್ರಿಯರಾಗಿರುವ ದೊಡ್ಡ ಸಂಸ್ಥೆಗಳೊಂದಿಗೆ ಕೈ ಜೋಡಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತು ವಾಷಿಂಗ್ಟನ್‌ ಪೋಸ್ಟ್‌ ವರದಿಯೊಂದನ್ನು ಪ್ರಕಟಿಸಿದ್ದು, ಸುದ್ದಿಯ ಟ್ಯಾಬ್‌ಗೆ ಬಹುಮುಖ್ಯವಾದ ಸುದ್ದಿಗಳನ್ನು ಹೆಕ್ಕಿ ತೆಗೆಯುವುದಕ್ಕೆ ಸಣ್ಣ ತಂಡವೊಂದು ಕೆಲಸ ಮಾಡಲಿದೆ. ಉಳಿದ ಸುದ್ದಿಗಳನ್ನು ಆಲ್ಗರಿದಮ್‌ ಮಾಡಲಿದೆ. ಇದು ಬಳಕೆದಾರರ ಆಸಕ್ತಿಗಳನ್ನು ಆಧರಿಸಿ ಸುದ್ದಿಗಳನ್ನು ನೀಡಲಿದೆ ಎಂದು ವರದಿ ಹೇಳಿದೆ.

ಮೊದಲ ಹಂತದಲ್ಲಿ ವಾಪೊ ಇಟ್ಸ್‌ಸೆಲ್ಫ್‌, ವಾಲ್‌ಸ್ಟ್ರೀಟ್‌ ಜರ್ನಲ್‌, ಬಿಸಿನೆಸ್‌ ಇನ್‌ಸೈಡರ್‌, ಬಝ್‌ಫೀಡ್‌ ನ್ಯೂಸ್‌,ಯುಎಸ್‌ಎ ಟುಡೆ ಮತ್ತು ಸ್ಥಳೀಯ ಸುದ್ದಿ ಮೂಲಗಳನ್ನು ಒಳ್ಳಗೊಳ್ಳಲಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ವಿವರಗಳು ತಿಳಿಸುತ್ತವೆ. ಈ ಸಂಸ್ಥೆಗಳನ್ನು ತನ್ನ ವೇದಿಕೆ ಕರೆತರಲು ವರ್ಷಕ್ಕೆ ಸುಮಾರು 3 ಮಿಲಿಯನ್‌ ಡಾಲರ್‌ಗಳನ್ನು ನೀಡುತ್ತಿದೆ ಎನ್ನಲಾಗಿದೆ. ಪ್ರಸ್ತುತ ಆರು ಭಾಷೆ ಸುದ್ದಿ ಸಂಸ್ಥೆಗಳು ಫೇಸ್‌ಬುಕ್‌ ಮೂಲಕ ಸುದ್ದಿ ಹಂಚಿಕೊಳ್ಳುವ ಅವಕಾಶವಿದೆ.

ಆದರೆ ಸುದ್ದಿ ನೀಡುವ ಎಲ್ಲ ಸಂಸ್ಥೆಗಳು ಫೇಸ್‌ಬುಕ್‌ನಿಂದ ಹಣ ಸಿಗುತ್ತದೆಯೇ? ಕೇವಲ ದೊಡ್ಡ ಸುದ್ದಿ ಸಂಸ್ಥೆಗಳಿಗೆ ಮಾತ್ರ ಈ ಸೌಲಭ್ಯವಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಇದರಿದ ಸ್ಥಳೀಯ ಸುದ್ದಿ ಮೂಲಗಳಿಗೆ ಯಾವ ರೀತಿಯ ಅನುಕೂಲ ಮತ್ತು ಅನನುಕೂಲವಾಗಲಿದೆ ಎಂಬುದು ಈ ಸೇವೆ ಜಾರಿಗೆ ಬಂದ ಮೇಲೆ ತಿಳಿಯಲಿದೆ.

ಕಳೆದ ವರ್ಷ ಜನವರಿವರೆಗೆ ಸುದ್ದಿಗಳ ಫೀಡ್‌ ಅನ್ನು ಹೊಂದಿದ್ದ ಫೇಸ್‌ಬುಕ್‌, ಸುದ್ದಿ ವಿತರಣೆಯ ನಿಯಂತ್ರಣ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆಗಳ ಕಾರಣಕ್ಕೆ ವಿವಾದಕ್ಕೆ ಸಿಲುಕಿತ್ತು.