ಹಾಟ್‌ಸ್ಟಾರ್‌ VIPನಲ್ಲಿ ಪ್ರಸಾರವಾಗಲ್ಲ IPL 2020 ಲೈವ್ ಸ್ಟೀಮಿಂಗ್: ಇಲ್ಲಿದೇ ಜಿಯೋ ಮಾಸ್ಟರ್ ಪ್ಲಾನ್!

ಶೀಘ್ರವೇ ಆರಂಭವಾಗಲಿರುವ ಐಪಿಎಲ್ 2020ಗೆ ಎಲ್ಲರೂ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಈ ವರ್ಷ ಪ್ರೀಮಿಯಂ ಶ್ರೇಣಿ ಚಂದಾದಾರರಿಗೆ ಮಾತ್ರವೇ ಐಪಿಎಲ್ 2020 ಸ್ಟ್ರೀಮಿಂಗ್ ಅನ್ನು ನೀಡಲು ಪ್ಲಾನ್‌ ಮಾಡುತ್ತಿದೆ ಎನ್ನಲಾಗಿದೆ.

ಆದರೆ ಜಿಯೋ ಪ್ರಿಪೇಯ್ಡ್ ಮತ್ತು ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಉಚಿತ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ನೀಡಲು ಜಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಒಂದಾಗಿವೆ.

ಜಿಯೋ ರೂ. 401 ರೀಚಾರ್ಜ್ ಮಾಡಿದ ಪ್ರೀಪೇಯ್ಡ್‌ ಬಳಕೆದಾರರಿಗೆ ಮತ್ತು ರೂ. 2,599 ರಿಚಾರ್ಜ್ ಮಾಡುವ ಪ್ರಿಪೇಯ್ಡ್ ಚಂದಾದಾರರಿಗೆ ಈಗಾಗಲೇ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನು ಓದಿರಿ: ಫೇಸ್‌ಬುಕ್‌ನಿಂದ ಟಿಕ್‌ಟಾಕ್ ಮಾದರಿಯ ವಿಡಿಯೋ ಆಯ್ಕೆ: ಬೇರೆ ಆಪ್ ಬೇಕಾಗಿಲ್ಲ..!

ಇದೇ ಮಾದರಿಯಲ್ಲಿ ಜಿಯೋ ಫೈಬರ್ ರೂ. 849 ಮತ್ತು ಅದಕ್ಕಿಂತ ಹೆಚ್ಚಿನ ಚಂದದಾರಿಕೆಯನ್ನು ಪಡೆದವರಿಗೆ ಈಗಾಗಲೇ ಪೂರಕ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ವಾರ್ಷಿಕ ಚಂದಾದಾರಿಕೆಯನ್ನು ನೀಡಿದೆ. ಆದರೆ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ಪ್ರವೇಶದ ವಿವರಗಳು ಇಲ್ಲಿಯವರೆಗೆ ಖಚಿತವಾಗಿಲ್ಲ.

ವರದಿಯೊಂದರ ಪ್ರಕಾರ ರೂ. 401 ರೀಚಾರ್ಜ್ ಮಾಡಿದ ಪ್ರೀಪೇಯ್ಡ್‌ ಬಳಕೆದಾರರಿಗೆ ಮತ್ತು ರೂ. 2,599 ರಿಚಾರ್ಜ್ ಮಾಡುವ ಪ್ರಿಪೇಯ್ಡ್ ಚಂದಾದಾರರಿಗೆ ಜಿಯೋ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡಲಿದೆ ಮತ್ತು ಜಿಯೋ ಫೈಬರ್ ರೂ. 849 ಮತ್ತು ಅದಕ್ಕಿಂತ ಹೆಚ್ಚಿನ ಚಂದದಾರಿಕೆಯನ್ನು ಪಡೆದವರಿಗೂ ಈಗ ಐಪಿಎಲ್ 2020 ಲೈವ್ ಸ್ಟ್ರೀಮಿಂಗ್‌ಗೆ ಉಚಿತ ಪ್ರವೇಶವನ್ನು ದೊರೆಯುವಂತೆ ಮಾಡಲಿದೆ.

ಜಿಯೋ ಬಳಕೆದಾರರಾಗಿ ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರರಾಗಿಲ್ಲವಾದರೆ ಅಥವಾ ಉಚಿತ ಪ್ರವೇಶವಿಲ್ಲದಿದ್ದಲ್ಲಿ, ಐಪಿಎಲ್ 2020 ಸ್ಟ್ರೀಮಿಂಗ್ ಕೇವಲ 5 ನಿಮಿಷಗಳಿಗೆ ಸೀಮಿತವಾಗಿರುತ್ತದೆ.

ಡಿಸ್ನಿ + ಹಾಟ್‌ಸ್ಟಾರ್ ಈ ವರ್ಷ ಪ್ರೀಮಿಯಂ ಶ್ರೇಣಿ ಚಂದಾದಾರರಿಗೆ ಮಾತ್ರವೇ ಐಪಿಎಲ್ 2020 ಸ್ಟ್ರೀಮಿಂಗ್ ಅನ್ನು ನೀಡಲು ಯೋಜಿಸುತ್ತಿರುವುದರಿಂದ ಜಿಯೋ ಒಪ್ಪಂದವು ಮುಖ್ಯವಾಗಿದೆ.

ಆದ್ದರಿಂದ ಕೇವಲ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಯೋಜನೆಗೆ ಚಂದಾದಾರರಾಗಿದ್ದರೂ, ಜಿಯೋ ಬಳಕೆದಾರರು ರೂ. 401 ಮತ್ತು ರೂ. 2,599ಕ್ಕೆ ರಿಚಾರ್ಜ್ ಮಾಡಿಸಿಕೊಂಡಿದ್ದಲ್ಲಿ ಐಪಿಎಲ್ 2020 ಅನ್ನು ನೇರಪ್ರಸಾರ ನೋಡಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: