2023ರಲ್ಲಿ ಬಾಹ್ಯಾಕಾಶಕ್ಕೆ ಭಾರತ ದೇಶದ ಮೊದಲ ಮಾನವ ಸಹಿತ ಯಾನಕ್ಕೆ ಸಕಲ ಸಿದ್ಧತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO), ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಾಗಿರುವ ಗಗನಯಾನವನ್ನು 2023ರಲ್ಲಿ ಉಡಾವಣೆ ಮಾಡಲು ಸಂಪೂರ್ಣ ಸಿದ್ಧವಾಗಿದ್ದು, ಲ್ಯಾಂಡಿಂಗ್ ಆಯ್ಕೆಗಳು, ಕ್ರ್ಯೂ ಎಸ್ಕೇಪ್ ವ್ಯವಸ್ಥೆ, ಮತ್ತು ತಂಡದ ಪ್ರತಿ ಸದಸ್ಯರ ಜೀವರಕ್ಷಕ ಪ್ಯಾಕೆಟ್‌ಗಳು ಸೇರಿದಂತೆ ಅದರ ಕ್ರ್ಯೂ ಮಾಡ್ಯುಲ್ (CM) ಬಗೆಗಿನ ವಿವರಗಳು ದೊರೆತಿವೆ.

ಒಂದು ವಾರದ ಪ್ರಾಯೋಗಿಕ ಸಿದ್ಧತೆಗಳ ನಂತರ 2023ರಲ್ಲಿ ಭಾರತೀಯ ಕರಾವಳಿಯ ಸಮೀಪ CM ಲ್ಯಾಂಡ್ ಆಗಲಿದೆ ಮತ್ತು ಕಡಿಮೆ ಉಬ್ಬರ ಇರುವ ಅರಬ್ಬಿ ಸಮುದ್ರ ನಮ್ಮ ಮೊದಲ ಆದ್ಯತೆ, ಆದರೆ ಬಂಗಾಳ ಕೊಲ್ಲಿಯನ್ನು ಸಹ ಒಂದು ಬೆಂಬಲ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ.

ಸುಸ್ಥಿರ ಮತ್ತು ಕೈಗೆಟುಕುವ ಉಡ್ಡಯನ ಚಟುವಟಿಕೆಗಳಿಗಾಗಿ 2019ರಲ್ಲಿ ಬೆಂಗಳೂರಿನಲ್ಲಿ HSFC ಅನ್ನು ISRO ರಚಿಸಿತು ಹಾಗೂ ಗಗನಯಾನವು ಅದರ ಮೊದಲ ಯೋಜನೆಯಾಗಿದೆ. ಕ್ರ್ಯೂ ಎಸ್ಕೇಪ್ ಸಿಸ್ಟಂ ಮತ್ತು ಗಗನಯಾನದ ಮೊದಲ ಮಾನವರಹಿತ ಮಿಷನ್‌ನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು 2022ರ ದ್ವಿತೀಯಾರ್ಧದ ಆರಂಭದಲ್ಲಿ ಪ್ರಾಯೋಗಿಕ ಉಡ್ಡಯನ ನಡೆಯಲಿದೆ.

ಕ್ರ್ಯೂ ಮಾಡ್ಯುಲ್ (CM) ಮತ್ತು ಸರ್ವೀಸ್ ಮಾಡ್ಯುಲ್ (SM) ಎಂಬ ಎರಡು ಭಾಗಗಳನ್ನು ಗಗನಯಾನ ಆರ್ಬಿಟಲ್ ಮಾಡ್ಯುಲ್ (OM) ಹೊಂದಿದೆ ಹಾಗೂ 8,000 ಕೆಜಿ ತೂಕ ಹೊಂದಿದೆ. ಆರ್ಬಿಟ್ ಮಾಡ್ಯುಲ್ 7,800 ಮೀ/ಸೆ ವೇಗದಲ್ಲಿ ಭೂಮಿಯ ಸುತ್ತ ಪರಿಭ್ರಮಣ ಮಾಡುತ್ತದೆ. ಕ್ರ್ಯೂ ಮಾಡ್ಯುಲ್ ಎಂಬುದು ಎರಡು ಪದರದ ವ್ಯವಸ್ಥೆ ಮತ್ತು ಮಾನವಸಹಿತ ಯೋಜನೆಯ ಭಾಗವಾಗಿರುವ ಗಗನಯಾತ್ರಿಗಳ ಆವಾಸಸ್ಥಾನವನ್ನು ಹೊಂದಿದ್ದು, ಉಡಾವಣೆ ಆಗುವಾಗ ಬಿಡುಗಡೆಯಾಗುವ ಅಪಾರ ಉಷ್ಣತೆಯಿಂದ ರಕ್ಷಣೆ ನೀಡಲು ಇದು ಥರ್ಮಲ್ ಪ್ರೊಟೆಕ್ಷನ್ ಸಿಸ್ಟಂ (TPS) ಅನ್ನು ಹೊಂದಿದೆ ಎಂದು ನಾಯರ್ ವಿವರಿಸಿದ್ದಾರೆ.

GSLV MK-III ಮಾರ್ಪಡಿಸಲಾದ ಆವೃತ್ತಿಯಾಗಿರುವ ಹ್ಯೂಮನ್ ರೇಟೆಡ್ ಲಾಂಚ್ ವೆಹಿಕಲ್‌ (HRLV) ಮೂಲಕ ಆರ್ಬಿಟಲ್ ಮಾಡ್ಯುಲ್ ಅನ್ನು ಉಡಾವಣೆ ಮಾಡಲಾಗುವುದು. ಈ CM,  ಹಸಿರು ಒತ್ತುಬಲವನ್ನು ಆಧರಿಸಿದ 100ಎನ್ ಒತ್ತುಬಲದ ಶಕ್ತಿ ಇರುವ ಸಣ್ಣ ರಾಕೆಟ್ ಎಂಜಿನ್‌ಗಳ ಗುಂಪನ್ನು ಹೊಂದಿದ್ದು, ಅದನ್ನು ಉಡ್ಡಯನದ ಮರು-ಪ್ರವೇಶ ಹಾಗೂ ವಾತಾವರಣದ ಹಂತಗಳ ಅವಧಿಯಲ್ಲಿ ನಿಯಂತ್ರಿತ ಸ್ಥಿತಿಯಲ್ಲಿ ಉಡಾವಣೆ ಮಾಡಲಾಗುವುದು.

ಲ್ಯಾಂಡಿಂಗ್ ಆದ ನಂತರ, CM ನ ವಿಭಿನ್ನ ಭಾಗಗಳು (coordinates) ನೌಕೆಗಳಲ್ಲಿ ಕಾಯುತ್ತಿರುವ ರಿಕವರಿ ತಂಡಕ್ಕೆ ವರ್ಗಾವಣೆ ಆಗುತ್ತವೆ. ಪ್ರತಿಯೊಬ್ಬ ಸದಸ್ಯನಿಗೂ ಜೀವರಕ್ಷಕ ಪ್ಯಾಕೆಟ್ ಅನ್ನು CM ಹೊಂದಿದ್ದು, ಅದು ಅವರನ್ನು ಬಹುತೇಕ ಎರಡು ದಿನಗಳವರೆಗೆ ಬೆಂಬಲಿಸುತ್ತದೆ. ಹಾಗಿದ್ದರೂ, ಉಡಾವಣೆ ಆದ ನಂತರದ ಎರಡು ಗಂಟೆಗಳಲ್ಲಿ ತಂಡದ ಸದಸ್ಯರು ಚೇತರಿಸಿಕೊಳ್ಳುತ್ತಾರೆ ಎಂಬ ಸಕಾರಾತ್ಮಕ ಧೋರಣೆಯನ್ನು ISRO ಹೊಂದಿದೆ.

ಗಗನಯಾನ ಯೋಜನೆಗಾಗಿ, ಆಯ್ಕೆ ಮಾಡಿದ ನಾಲ್ಕು ಗಗನಯಾತ್ರಿಗಳು ರಷ್ಯಾದಲ್ಲಿ ಸುಮಾರು 15 ತಿಂಗಳು ಜೆನರಿಕ್ ಬಾಹ್ಯಾಕಾಶ ಉಡಾವಣೆ ತರಬೇತಿ ಪಡೆದಿದ್ದಾರೆ. ಗಗನಯಾನ ಯೋಜನೆಗೆಂದು ನಿರ್ದಿಷ್ಟವಾದ ತರಬೇತಿಯು ಭಾರತದಲ್ಲಿ ನಡೆಯಲಿದ್ದು, ಅದನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ನೀಡಲಾಗುವುದು.

ಬಾಹ್ಯಾಕಾಶ ನೌಕೆಯಲ್ಲಿ ಇದ್ದಾಗ ಸಂಭವಿಸಬಹುದಾದ ಎಲ್ಲಾ ಪರಿಸ್ಥಿತಿಗಳ ಬಗ್ಗೆ ಗಗನಯಾನಿಗಳ ತಂಡವು ಚೆನ್ನಾಗಿ ತಿಳಿದುಕೊಂಡಿದೆ ಮತ್ತು ಅಂತಹ ಪರಿಸ್ಥಿಗಳನ್ನು ಎದುರಿಸಲು ಅವರಿಗೆ ತರಬೇತಿ ನೀಡಲಾಗುವುದು. ವಿಭಿನ್ನ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಗಗನಯಾತ್ರೆಯ ಸುರಕ್ಷತಾ ವಿಚಾರಗಳ ಬಗೆಗಿನ ತರಗತಿ ಅವಧಿಗಳನ್ನು ಈ ತರಬೇತಿಯು ಒಳಗೊಂಡಿರುತ್ತದೆ. ಪ್ಯಾರಾಬೋಲಿಕ್ ಮಾರ್ಗದ ಮೂಲಕ ವಿಶೇಷ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತಂಡವು ತೂಕರಹಿತ ಸ್ಥಿತಿಯಲ್ಲಿ ತರಬೇತಿ ಪಡೆಯಲಿದ್ದು, ಅದು ಅವರಿಗೆ 25 ರಿಂದ 30 ಸೆಕಂಡ್‌ಗಳ ಅವಧಿಯ ತೂಕರಹಿತ ಸ್ಥಿತಿಯನ್ನು ಒದಗಿಸುತ್ತದೆ.

ಉಡಾವಣೆ ಅಂತ್ಯಗೊಂಡ ಸಂದರ್ಭಗಳಲ್ಲಿ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆಯೂ ತಂಡವು ತಿಳಿವಳಿಕೆ ಪಡೆಯಲು, ಅವರು ಸಮುದ್ರ, ಹಿಮ, ಪರ್ವತ ಮತ್ತು ಮರುಭೂಮಿ ಪರಿಸ್ಥಿತಿಗಳಲ್ಲಿ ಜೀವರಕ್ಷಣೆಯ ತರಬೇತಿಯನ್ನು ಪಡೆಯಲಿದ್ದಾರೆ. ಅಂತಹ ಸಂದರ್ಭಗಳಲ್ಲಿ ಅವರೊಂದಿಗೆ ಇರುವ ಜೀವರಕ್ಷಕ ಕಿಟ್ ಬಳಸಿಕೊಂಡು ಹೇಗೆ ಬದುಕಿ ಉಳಿಯುವುದು ಎಂಬುದರ ಬಗ್ಗೆ ಅವರಿಗೆ ಹೇಳಿಕೊಡಲಾಗಿದೆ. ತಂಡವು ವಿಶೇಷ ಸಿಮ್ಯುಲೇಟರ್‌ಗಳಲ್ಲಿ ದೀರ್ಘಾವಧಿಯ ತರಬೇತಿಯನ್ನು ಸಹ ಪಡೆಯಲಿದ್ದು, ಅದು ಕ್ರ್ಯೂ ಮಾಡ್ಯುಲ್‌ನ ಒಳಭಾಗದ ಅನುಕರಣೆಯನ್ನು ಹೊಂದಿದೆ.

 

ಬೆಂಗಳೂರು ISRO ದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನ (HSFC) ನಿರ್ದೇಶಕರಾದ ಡಾ. ಉನ್ನಿಕೃಷ್ಣನ್ ನಾಯರ್ ಎಸ್ ಬರೆದ ‘ಇಂಡಿಯನ್ ಹ್ಯೂಮನ್ ಸ್ಪೇಸ್ ಮಿಷನ್’ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಲೇಖನವು ಮನೋರಮಾ ಇಯರ್‌ಬುಕ್ 2022 ರ ಇಂಗ್ಲೀಷ್ ಆವೃತ್ತಿಯಲ್ಲಿ ಪ್ರಕಟವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.