ಇನ್ನು ಮುಂದೆ ಗೂಗಲ್‌ ತನ್ನ ಚಿತ್ರಗಳಿಗೆ ಹೆಣ್ಣು, ಗಂಡು ಎಂದು ಲೇಬಲ್ ಮಾಡುವುದಿಲ್ಲ

ಗೂಗಲ್‌ ತನ್ನ ಚಿತ್ರಗಳನ್ನು ವಿಶ್ಲೇಷಿಸಿ ಗುರುತಿಸುವ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿತ ಈ ಸೇವೆ ಹೆಣ್ಣು-ಗಂಡು ಎಂದು ಲಿಂಗಾಧಾರಿತ ಗುರುತಿಸುವಿಕೆಯನ್ನು ಕೈಬಿಟ್ಟಿದೆ. ಇದೊಂದು ಮಹತ್ವದ ಬದಲಾವಣೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ

ಗೂಗಲ್‌ ಸಂಸ್ಥೆಗಳನ್ನ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಲಿಂಗದ ಆಧಾರದ ಮೇಲೆ ಚಿತ್ರಗಳನ್ನು ಗುರುತಿಸುವ ವಿಧಾನವನ್ನು ಕೈಬಿಟ್ಟಿದೆ. ಇನ್ನು ಮುಂದೆ ಗಂಡಿರಲಿ, ಹೆಣ್ಣಿರಲಿ ಅವರನ್ನು ವ್ಯಕ್ತಿ ಎಂದಷ್ಟೇ ಗುರುತಿಸಲಿದೆ.

ಗೂಗಲ್‌ ಕ್ಲೌಡ್ನ ವಿಷನ್‌ ಎಪಿಐ ಅನ್ನು ಡೆವೆಲಪರ್‌ಗಳು ಚಿತ್ರದಲ್ಲಿರುವ ಎಲ್ಲ ರೀತಿಯ ಆಕಾರಗಳನ್ನು ಗುರುತಿಸಲು ಬಳಸುತ್ತಾರೆ. ಹೀಗೆ ಗುರುತಿಸುವ ಎಪಿಐ ಅದಕ್ಕೆ ಲೇಬಲ್‌ ಮಾಡುತ್ತದೆ. ಆದರೆ ಈ ಹೊಸ ಬದಲಾವಣೆಯ ಮೂಲಕ ಲಿಂಗಾಧಾರಿತ ಪೂರ್ವಗ್ರಹಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವುದಾಗಿ ಗೂಗಲ್‌ ಹೇಳಿಕೊಂಡಿದೆ.

ಗುರುವಾರ ಡೆವೆಲಪರ್‌ಗಳಿಗೆ ಈ ಮೇಲ್‌ ಮೂಲಕ ಈ ಮಾಹಿತಿಯನ್ನು ನೀಡಿರುವ ಗೂಗಲ್, ಇನ್ನು ಮುಂದೆ ಲಿಂಗಾಧಾರಿತ ಲೇಬಲ್‌ಗಳನ್ನು ಇಮೇಜ್‌ ಟ್ಯಾಗ್‌ಗಳಿಗೆ ಬಳಸುವುದಿಲ್ಲ. ಯಾವುದೇ ಚಿತ್ರವನ್ನು ಲಿಂಗ ಸೂಚಕವಲ್ಲದ, ವ್ಯಕ್ತಿ (ಪರ್ಸನ್‌) ಎಂದು ಸೂಚಿಸಲಾಗುತ್ತದೆ.

ಈ ಟೂಲ್‌ ಯಾವುದೇ ಚಿತ್ರದಲ್ಲಿರುವ ವ್ಯಕ್ತಿಗಳ ಮುಖ, ಸ್ಥಳ, ಬ್ರ್ಯಾಂಡ್‌ ಲೊಗೊಗಳನ್ನು ಗುರುತಿಸಿ, ಇಮೇಜ್‌ ಸರ್ಚ್‌ ಮಾಡುವವರಿಗೆ ರಿಸಲ್ಟ್‌ ರೂಪದಲ್ಲಿ ನೀಡುತ್ತದೆ. ಹೀಗೆ ಗುರುತಿಸುವಾಗ ಅದು ಹೆಣ್ಣು, ಗಂಡೆಂದು ಪ್ರತ್ಯೇಕಿಸದೆ ಮನುಷ್ಯ/ವ್ಯಕ್ತಿ ಎಂದಷ್ಟೇ ತೋರಿಸುತ್ತದೆ. ಹಾಗಾಗಿ ಗೂಗಲ್‌ ಲಿಂಗ ಪ್ರತ್ಯೇಕಿಸುವ ಲೇಬಲ್‌ಗಳನ್ನು ತೆಗೆದು ಹಾಕಿದೆಯಂತೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮುಂದಿರುವ ಕೆಲವು ಜೈವಿಕ ಸಮಸ್ಯೆಗಳೂ ಈ ಬದಲಾವಣೆಗೆ ಕಾರಣವಿರಬಹುದು. ಬಣ್ಣ, ಆಕಾರ, ರಚನೆಗಳಲ್ಲಿರುವ ವೈವಿಧ್ಯತೆ, ನಿರ್ದಿಷ್ಟ ಫಲಿತಾಂಶ ನೀಡಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ಗೆ ಸವಾಲೇ ಆಗಿ ಉಳಿದಿದೆ.

ಉಡುಪು, ಕೇಶರಾಶಿ, ಮುಖಚರ್ಯೆಯ ಆಧಾರದ ಮೇಲೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಗಂಡು-ಹೆಣ್ಣನ್ನು ತಪ್ಪಾಗಿ ಗುರುತಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ ಗೂಗಲ್‌ ಈ ನಿಲುವು ತಳೆದಿರುವುದು ಸ್ವಾಗತಾರ್ಹ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.