ಇಂದಿನ ಗೂಗಲ್ ಡೂಡಲ್ ಕರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಮುಖವಾಡ ಧರಿಸುವುದನ್ನು ವಿಶ್ವದಾದ್ಯಂತ ಜನರಿಗೆ ನೆನಪಿಸುತ್ತಿದೆ. ಫೇಸ್ ಮಾಸ್ಕ್ ಧರಿಸಿದ ಎಲ್ಲಾ ಗೂಗಲ್ ಅಕ್ಷರಗಳನ್ನು ಡೂಡಲ್ ತೋರಿಸುತ್ತದೆ. ಇದು ವೈರಸ್ ಹರಡುವುದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ವಿವರಿಸುತ್ತದೆ.

ಸತ್ಯಗಳನ್ನು ತಿಳಿದುಕೊಳ್ಳುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮನ್ನು ಮತ್ತು ನಿಮ್ಮ ಸುತ್ತಲಿರುವ ಇತರರನ್ನು ರಕ್ಷಿಸಿ. ನಿಮ್ಮ ಸ್ಥಳೀಯ ಆರೋಗ್ಯ ಪ್ರಾಧಿಕಾರವು ನೀಡಿದ ಸಲಹೆಯನ್ನು ಅನುಸರಿಸಿ ಎಂಬ ಮಾಹಿತಿಯನ್ನು ಭಿತ್ತರಿಸುತ್ತಿದೆ.
COVID-19 ಹರಡುವುದನ್ನು ತಡೆಯಲು ಏನು ಮಾಡಬೇಕು:
- ನಿಮ್ಮ ಕೈಗಳನ್ನು ಆಗಾಗ್ಗೆ ಸ್ವಚ್ಚ ಗೊಳಿಸಿ. ಸೋಪ್ ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಬಳಸಿ.
- ಕೆಮ್ಮು ಅಥವಾ ಸೀನುವಾಗ ಬೇರೆಯವರಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ.
- ದೈಹಿಕ ದೂರವಿರಲು ಸಾಧ್ಯವಾಗದಿದ್ದಾಗ ಮುಖವಾಡ ಧರಿಸಿ.
- ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.
- ನೀವು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ನಿಮ್ಮ ಕೈನಿಂದ ಮುಚ್ಚಿ.
- ನಿಮಗೆ ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ.
- ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಮುಖವಾಡ (ಮಾಸ್ಕ್) ಧರಿಸಿದ ವ್ಯಕ್ತಿಯಿಂದ ಇತರರಿಗೆ ವೈರಸ್ ಹರಡುವುದನ್ನು ತಡೆಯಲು ಮುಖವಾಡಗಳು ಸಹಾಯ ಮಾಡುತ್ತವೆ. ಮುಖವಾಡಗಳು COVID-19 ನಿಂದ ರಕ್ಷಿಸುವುದಿಲ್ಲ. ಬೇರೆಯವರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ನಿಮ್ಮ ಕೈಗಳನ್ನು ಆಗ್ಗಾಗೆ ತೊಳೆದುಕೊಳ್ಳಿ ಎಂದು ಎಂದು ಗೂಗಲ್ ಮಾಹಿತಿಯನ್ನು ನೀಡುತ್ತಿದೆ.