ಇಂದು ಅಮೆರಿಕದ ಅಪೂರ್ವ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪ್ರತಿಭೆ ಜೆರ್ರಿ ಲಾಸನ್ ಜನ್ಮದಿನ. ಮೊತ್ತಮೊದಲ ಕಮರ್ಷಿಯಲ್ ವಿಡಿಯೋ ಗೇಮ್ ಕಾರ್ಟ್ರಿಡ್ಜ್ ರೂಪಿಸಿದ ಖ್ಯಾತಿ ಇವರದ್ದು.

ವಿಶ್ವದ ಮೊದಲ ಕಮರ್ಷಿಯಲ್ ವಿಡಿಯೋ ಗೇಮ್ ಕಾರ್ಟ್ರಿಡ್ಜ್ ಮತ್ತು ಫೇರ್ ಚೈಲ್ಡ್ ಚಾನೆಲ್ ಎಫ್ ವಿಡಿಯೋ ಗೇಮ್ ಸಿಸ್ಟಮ್ಗಳನ್ನು ರೂಪಿಸಿದ ಅಮೆರಿಕದ ಎಲೆಕ್ಟ್ರಾನಿಕ್ ಎಂಜಿನಿಯರ್ ಜೆರ್ರಿ ಲಾಸನ್ ಅವರ 82ನೇ ಜನ್ಮ ದಿನವಿದು. ಈ ನೆನಪಲ್ಲಿ ಗೂಗಲ್ ಜೆರ್ರಿ ಸಾಧನೆಯ ಸಂಕ್ಷಿಪ್ತ ವಿವರ ನೀಡುವ ಗೂಗಲ್ ಡೂಡಲ್ ಅರ್ಪಿಸಿದೆ.

ಆಟದ ರೂಪದಲ್ಲೇ ಇರುವ ಆನಿಮೇಟೆಡ್ ಡೂಡಲ್ ಅನ್ನು ಡೇವಿಯನ್ ಗೂಡನ್, ಲಾರೆನ್ ಬ್ರೌನ್ ಮತ್ತು ಮೊಮೊ ಪಿಕ್ಸೆಲ್ ಕೂಡಿ ರೂಪಿಸಿದ್ದಾರೆ. ವಿಶ್ವಕ್ಕೆ ಮೊತ್ತಮೊದಲ ಬಾರಿಗೆ ಮನೆಯಲ್ಲೇ ವಿಡಿಯೋ ಆಡುವುದಕ್ಕೆ ಬೇಕಾದ ವ್ಯವಸ್ಥೆಯೊಂದನ್ನು ಕಾರ್ಟ್ರಿಡ್ಜ್ ರೂಪದಲ್ಲಿ (ಕೆಳಗಿನ ಚಿತ್ರ ನೋಡಿ) ನೀಡಿದವರು ಜೆರ್ರಿ.

ವಿಡಿಯೋ ಗೇಮ್ ಕಾರ್ಟ್ರಿಡ್ಜ್ಗಳ ಪಿತಾಮಹ ಎಂದೇ ಕರೆಸಿಕೊಳ್ಳುವ ಜೆರ್ರಿ 70ರ ದಶಕದಲ್ಲಿ ಈ ಕ್ಷೇತ್ರದಲ್ಲಿ ಇದ್ದ ಕೆಲವೇ ಕೆಲವು ಪ್ರತಿಭಾವಂತ ಕಪ್ಪು ಜನಾಂಗದವರಲ್ಲಿ ಒಬ್ಬರು. ವಿಡಿಯೋ ಸಾಫ್ಟ್ ಹೆಸರಿನ ತಮ್ಮ ಆದ ವಿಡಿಯೋ ಗೇಮ್ ಕಂಪನಿ ಆರಂಭಿಸಿ ಅಪಾರ ಸಾಧನೆ ಮಾಡಿದರು.