ಟೆಕ್‌ ಸ್ಟಾರ್ಟಪ್‌ಗಳಲ್ಲಿ ಕೆಲಸ ಹುಡುಕಲು ನೆರವಾಗಲಿದೆ ಗೂಗಲ್‌ ಪೇ ಆ್ಯಪ್‌

ಗೂಗಲ್‌ ಸರ್ಚ್‌ ಇಂಜಿನ್‌ ಕೆಲವು ತಿಂಗಳುಗಳ ಹಿಂದೆ ನೌಕರಿ ಹುಡುಕುವ ಅವಕಾಶವನ್ನು ಸೃಷ್ಟಿಸಿತ್ತು ಅದು ಎಷ್ಟರ ಮಟ್ಟಿಗೆ ಬಳಕೆದಾರರಿಗೆ ನೆರವಾಯಿತೊ ಗೊತ್ತಿಲ್ಲ. ಈಗ ಅದೇ ಫೀಚರ್‌ ಅನ್ನು ಗೂಗಲ್‌ ಪೇ ಆ್ಯಪ್‌ನಲ್ಲಿ ಪರಿಚಯಿಸುತ್ತಿದೆ

ಸರ್ಚ್‌ ಇಂಜಿನ್‌ ಆಗಿ ಗೊತ್ತಿರುವ ಗೂಗಲ್‌ ಇನ್ನು ಉದ್ಯೋಗ ಹುಡುಕುವುದಕ್ಕೂ ನೆರವಾಗಲಿದೆ. ತನ್ನ ಜಾಬ್ಸ್‌ ಪ್ಲಾಟ್‌ ಫಾರ್ಮ್‌ಗೆ ಹೊಸ ರೂಪ ನೀಡುತ್ತಿರುವ ಗೂಗಲ್‌ ಗೂಗಲ್‌ ಪೇ ಆ್ಯಪ್‌ನಲ್ಲಿ ಜಾಬ್ಸ್‌ ಎಂಬ ಫೀಚರ್‌ ಅನ್ನು ಪರಿಚಯಿಸಿದೆ.

ಬಳಕೆದಾರರು ಲಿಂಕ್ಡ್‌ ಇನ್‌. ನೌಕರಿ.ಕಾಂನಲ್ಲಿ ಮಾದರಿಯಲ್ಲಿ ತಮ್ಮ ಪ್ರೊಫೈಲ್‌ ಕ್ರಿಯೇಟ್‌ ಮಾಡಿಕೊಳ್ಳಬೇಕು. ಇದರ ಆಧಾರದ ಮೇಲೆ ಗೂಗಲ್‌ಪೇ ಕೆಲಸಗಳನ್ನು ಶಿಫಾರಸು ಮಾಡುತ್ತದೆ. ಜೊತೆಗೆ ಸಂದರ್ಶನಗಳನ್ನು ನಿಗದಿಪಡಿಸಲು ಮತ್ತು ಅರ್ಜಿಗಳ ಸ್ಥಿತಿಯನ್ನು ತಿಳಿಯಲು ಅವಕಾಶ ಮಾಡಿಕೊಡುತ್ತದೆ. ಅಷ್ಟೇ ಅಲ್ಲ ನಿಮ್ಮ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಅನುಕೂಲವಾಗುವ ತರಬೇತಿ ವಿಡಿಯೋಗಳನ್ನು ಮತ್ತು ಲೇಖನಗಳನ್ನು ಶಿಫಾರಸು ಮಾಡುತ್ತದೆ.

ಇತ್ತೀಚೆಗೆ ನಡೆದ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ನಲ್ಲಿ ಈ ಫೀಚರ್‌ ಅನ್ನು ಪರಿಚಯಿಸಿದ್ದು, ಈಗಾಗಲೇ ಹೆಲ್ತ್‌ ಕಾರ್ಟ್‌, ಡನ್ಜೊ, ಝೊಮ್ಯಾಟೊ, ಸ್ವಿಗಿ, ಡೆಲ್ಹಿವರಿ, ಝಿವಾಮೆ, 24ಸೆವೆನ್‌, ಫ್ಯಾಬ್‌ ಹೊಟೆಲ್ಸ್‌ ಸೇರಿ 25 ಮಂದಿ ಪಾಲುದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೂಗಲ್‌ ಜಾಬ್ಸ್‌ ಪ್ಲಾನ್ಸ್‌ ಸ್ಪಾಟ್‌ ಕೋಡ್‌ ಅನ್ನು ಪರಿಚಯಿಸಲಿದ್ದು, ಇದು ಆಫ್‌ಲೈನ್‌ ಉದ್ಯೋಗಗಳನ್ನು ಹುಡುಕಿಕೊಳ್ಳಲು ನೆರವಾಗಲಿದೆಯಂತೆ.

%d bloggers like this: