ಏರ್‌ಟೆಲ್‌ಗೆ ಗೂಗಲ್ ನೂರು ಕೋಟಿ ಡಾಲರ್ ಹೂಡಿಕೆ

ಭಾರತದಲ್ಲಿ ನೂರು ಕೋಟಿ‌ ಡಾಲರ್ ಹೂಡಿಕೆ ಮಾಡುವುದಾಗಿ ಗೂಗಲ್ ಘೋಷಿಸಿದೆ. ಡಿಜಿಟಲ್ ಜಗತ್ತಿಗೆ ವೇಗ ನೀಡುವ ಉದ್ದೇಶದ ಈ ಹೂಡಿಕೆ ಏರ್‌ಟೆಲ್ ಸಹಯೋಗದಲ್ಲಿ ಆಗಕಿದೆ‌ ಎಂದು ಕಂಪನಿ ತಿಳಿಸಿದೆ.

‘ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್’ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಟ್ಟು ಒಂದು ಸಾವಿರ ಕೋಟಿ ಡಾಲರ್ ಹೂಡಿಕೆ‌ ಮಾಡುವ ಕುರಿತು ಗೂಗಲ್ ಸಿಇಒ‌ ಸುಂದರ್ ಪಿಚೈ 2020ರಲ್ಲಿ ಘೋಷಿಸಿದ್ದರು. ಈ ಮೂಲಕ ಭಾರತೀಯ ಟೆಕ್ ಕಂಪನಿಗಳಲ್ಲಿ ಪಾಲು ಖರೀದಿ ಹಾಗೂ ಮೂಲಧನ ಹೂಡಿಕೆಗೆ ಸಹಾಯ ಮಾಡಲಿರುವುದಾಗಿ ತಿಳಿಸಲಾಗಿತ್ತು. ಸದ್ಯದ ಏರ್‌ಟೆಲ್ ಜತೆಗಿನ ಹೂಡಿಕೆ ಆ ಡಿಜಿಟಲೀಕರಣ ನಿಧಿಯ ಭಾಗವಾಗಿದೆ.

ಡಿಜಿಟಲ್ ಜಗತ್ತನ್ನು ಇನ್ನಷ್ಟು ಮಂದಿಗೆ ವಿಸ್ತರಿಸುವುದು, ಅಗ್ಗದ ದರದಲ್ಲಿ‌ ಉನ್ನತ ಮಟ್ಟದ ಸೇವೆ ಒದಗಿಸುವುದು ಮತ್ತು ಕ್ಲೌಡ್ ಸೇವೆ ಹಾಗೂ ಕೈಗೆಟುಕುವ ದರದ ಸ್ಮಾರ್ಟ್‌ಪೋನ್‌ನಂಥ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಇದರಿಂದ ಸಾಧ್ಯವಾಗುತ್ತದೆ ಎಂದು ಏರ್‌ಟೆಲ್ ಹಾಗೂ ಗೂಗಲ್ ಜಂಟಿ ಹೇಳಿಕೆಯಲ್ಲಿ‌ ತಿಳಿಸಿವೆ.

ಈ ಒಪ್ಪಂದದ ಪ್ರಕಾರ ಗೂಗಲ್ 70 ಕೋಟಿ ಡಾಲರ್ ಹೂಡುವ ಮೂಲಕ ಏರ್‌ಟೆಲ್‌ನ ಶೇ.1.28ರಷ್ಟು ಪಾಲು ಖರೀದಿ ಮಾಡಲಿದೆ. ಈ ಪೈಕಿ 30 ಕೋಟಿ ಡಾಲರ್ ಬಹುವಾರ್ಷಿಕ ವಾಣಿಜ್ಯ ಒಪ್ಪಂದಗಳ ಬಾಬ್ತು ಆಗಿರಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.