ಉಚಿತ ಫೋಟೋ ಸ್ಟೋರೇಜ್ ಸೇವೆ ಸ್ಥಗಿತಗೊಳಿಸಲಿರುವ ಗೂಗಲ್; ನಿಮಗಿರುವ ಬೇರೆ ಆಯ್ಕೆಗಳೇನು?

ಇಲ್ಲಿಯವರೆಗೆ ಗೂಗಲ್ ಫೋಟೋ ಬಳಕೆದಾರರು 16 ಎಂಬಿಗಿಂತಲೂ ಕಡಿಮೆ ಇರುವ High Quality Images ಗಳನ್ನು ಅನಿಯಮಿತವಾಗಿ ಸ್ಟೋರ್ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ನಿಮಗಿರುವ ಬೇರೆ ಆಯ್ಕೆಗಳೇನು?

ಈವರೆಗೆ ಅನಿಯಮಿತವಾಗಿ ಫೋಟೋಗಳನ್ನು ಸ್ಟೋರ್ ಮಾಡಲು ಅವಕಾಶ ನೀಡುತ್ತಿದ್ದ ಗೂಗಲ್ ಫೊಟೋಸ್, ಜೂನ್ 1ರಿಂದ ತನ್ನ ಉಚಿತ ಸೇವೆಯನ್ನು ನಿಲ್ಲಿಸಲಿದೆ. ಇದರ ಬದಲಾಗಿ, ತಮ್ಮ ಗೂಗಲ್ ಖಾತೆಯ 15 ಜಿಬಿ ಉಚಿತ ಸ್ಟೋರೇಜ್ ಮುಗಿದ ಬಳಿಕ ಹೆಚ್ಚಿನ ಸ್ಟೋರೇಜ್ ಸೇವೆ ಬಳಸಲು ಹಣ ಪಾವತಿಸಬೇಕಾದ ಅಗತ್ಯವಿದೆ.

ಇಲ್ಲಿಯವರೆಗೆ ಗೂಗಲ್ ಫೋಟೋ ಬಳಕೆದಾರರು 16 ಎಂಬಿಗಿಂತಲೂ ಕಡಿಮೆ ಇರುವ High Quality Images ಗಳನ್ನು ಅನಿಯಮಿತವಾಗಿ ಸ್ಟೋರ್ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಆದರೆ, ನಿಮ್ಮ ಖಾತೆಯ 15 ಜಿಬಿ ಸ್ಟೋರೇಜ್ ಇನ್ನೂ ಬಾಕಿಯಿದ್ದರೆ, ಸದ್ಯಕ್ಕೆ ನಿಮಗೆ ಏನೂ ಚಿಂತೆಯಿಲ್ಲ. ಯಾರ ಖಾತೆಯ 15 ಜಿಬಿ ಕೋಟಾ ಈಗಾಗಲೇ ಖಾಲಿಯಾಗಿದೆಯೋ ಅವರಿಗೆ ಮಾತ್ರ ಈ ನೀತಿ ಅನ್ವಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ಜೂನ್ 1ರ ಹಿಂದೆ ಅಪ್ಲೋಡ್ ಮಾಡಲಾದ ‘High’ quality ಮತ್ತು ‘Express’ quality ಇಮೇಜ್ಗಳು 15 ಜಿಬಿಯನ್ನು ಮೀರಿದ್ದರೂ ಕೂಡಾ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದರೆ, ಜೂನ್ ೧ರ ಹಿಂದೆ ‘Original’ qualityಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದರೆ ಅದು ನಿಮ್ಮ ಖಾತೆಯ 15 ಜಿಬಿ ಕೋಟಾದ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

ಜೂನ್ ೧ರ ಮೊದಲು ‘High’ quality ಮತ್ತು ‘Express’ quality backup ಮಾಡುವುದು ಹೇಗೆ?

ಜೂನ್ ೧ರ ಮೊದಲು ಯಾರಾದರೂ ತಮ್ಮ ಫೋನ್ ಅಥವಾ ಕಂಪ್ಯೂಟರ್’ನಲ್ಲಿ ಇರುವ ಫೋಟೋಗಳನ್ನು ಅಪ್ಲೋಡ್ ಮಾಡಲು ಬಯಸಿದರೆ, ಅವರು ಈ ವಿಧಾನವನ್ನು ಅನುಸರಿಸಬಹುದು.

ನಿಮ್ಮ ಗೂಗಲ್ ಫೋಟೋಸ್ ಆ್ಯಪ್’ನಲ್ಲಿ, ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಅದರಲ್ಲಿ ಫೋಟೋ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ Backup and Sync ಆಯ್ಕೆಯ ಮುಖಾಂತರ ಅಪ್ಲೋಡ್ ಸೈಜ್ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅಪ್ಲೋಡ್ ಸೈಜ್’ನಲ್ಲಿ ‘High’ quality ಮತ್ತು ‘Express’ qualityಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಫೋಟೋಗಳ ಬ್ಯಾಕ್’ಅಪ್ ಮಾಡಬಹುದು.

Google One ಬಳಸಿ ಸ್ಟೋರೇಜ್ ಹೆಚ್ಚಿಸಿಕೊಳ್ಳಿ:

ನಿಮ್ಮ ಖಾತೆಯಲ್ಲಿ ಇರುವ 15 ಜಿಬಿ ಸ್ಟೋರೇಜ್ ನಲ್ಲಿ ಯಾವುದಾದರೂ ಅನಗತ್ಯವಾದ ಫೋಟೊ, ವೀಡಿಯೋ ಅಥವಾ ಫೈಲ್ ಇದ್ದರೆ ಅದನ್ನು ಗೂಗಲ್ ಒನ್ ಬಳಸಿ ಡಿಲೀಟ್ ಮಾಡಿ, ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದು. ಗೂಗಲ್ ಒನ್ ಆ್ಯಪ್’ನಲ್ಲಿ ಇರುವ ಸ್ಟೋರೇಜ್ ಟ್ಯಾಬ್’ನಲ್ಲಿ Free up Account Storage ಆಯ್ಕೆಯನ್ನು ಬಳಸಿಕೊಂಡು ಏಕಕಾಲಕ್ಕೆ ಹೆಚ್ಚು ಫೋಟೋಗಳನ್ನು ಡಿಲೀಟ್ ಮಾಡಲು ಅವಕಾಶವಿದೆ.

ಗೂಗಲ್ ನೀಡಿರುವ ಮಾಹಿತಿಯ ಪ್ರಕಾರ, 15 ಜಿಬಿ ಸ್ಟೋರೇಜ್’ನಲ್ಲಿ ಅಪ್ಲೋಡ್ ಆಗಿರುವ ಬ್ಲರ್, ಕಡಿಮೆ ಬೆಳಕು ಹೊಂದಿರುವ ಅಥವಾ ಕಡಿಮೆ ಕ್ವಾಲಿಟಿಯ ಫೋಟೋಗಳನ್ನು ತನ್ನಿಂತಾನೆ ಪತ್ತೆ ಹಚ್ಚುವ ಟೂಲ್ ಒಂದನ್ನು ಶೀಘ್ರದಲ್ಲಿಯೇ ಪರಿಚಯಿಸಲಿದೆ. ಇದರಿಂದಾಗಿ ಬಳಕೆದಾರರು ಕಡಿಮೆ ಸಮಯದಲ್ಲಿ ಅನಗತ್ಯವಾದ ಫೊಟೋಗಳನ್ನು ಡಿಲೀಟ್ ಮಾಡಬಹುದು.

ಇತರ ಆಯ್ಕೆಗಳೇನು?

ಒಂದು ವೇಳೆ ಸ್ಟೋರೇಜ್ ಹೆಚ್ಚಿಸಿಕೊಳ್ಳಲು ಅಥವಾ ಜೂನ್ ಒಂದರ ಮೊದಲು ಬ್ಯಾಕ್ಅಪ್ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಏನು ಮಾಡಬಹುದು ಎಂಬ ಪ್ರಶ್ನೆ ಉತ್ತರ ಇಲ್ಲಿದೆ. ಈ ಕೆಳಗಿನ ಕ್ಲೌಡ್ ಸ್ಟೋರೇಜ್ ಸೇವೆಗಳು ಗ್ರಾಹಕರಿಗೆ ಉಚಿತವಾಗಿ ಲಭ್ಯವಿದೆ.

 1. Flickr
 2. 500px
 3. Imgur
 4. Free Image Hosting 

  ಇನ್ನುಳಿದಂತೆ 30 ಜಿಬಿಯ ವರೆಗೆ (ಎಲ್ಲವೂ ಅಲ್ಲ) ಉಚಿತವಾಗಿ ಫೋಟೋ ಸ್ಟೋರೇಜ್’ಗೆ ಅವಕಾಶ ನೀಡಿ ನಂತರ ಹೆಚ್ಚಿನ ಸ್ಟೋರೇಜ್’ಗೆ ಶುಲ್ಕ ವಿಧಿಸುವ ಇತರ ಸ್ಟೋರೇಜ್ ಆಯ್ಕೆಗಳು ಇಲ್ಲಿವೆ
 1. Photobucket – 2 ಜಿಬಿ ಉಚಿತ
 2. Amazon Prime Photos – ಅಮೇಜಾನ್ ಪ್ರೈಮ್ ಸಬ್’ಸ್ಕ್ರಿಪ್ಷನ್ ಜತೆ ಲಭ್ಯವಿದೆ
 3. Drop Box– 2 ಜಿಬಿ ಉಚಿತ
 4. iCloud – 5 ಜಿಬಿ ಉಚಿತ
 5. Microsoft OneDrive– 5 ಜಿಬಿ ಉಚಿತ
 6. ImageShack – 30 ಜಿಬಿ ಉಚಿತ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.