‘ಸೇಫರ್ ವರ್ಲ್ಡ್’: ಸುನಾಮಿ ಮತ್ತು ಭೂಕಂಪನದಿಂದ ಜಗತ್ತನ್ನು ರಕ್ಷಿಸುವ ಗೂಗಲ್ ಬಿಗ್ ಪ್ರಾಜೆಕ್ಟ್

ಇಂದಿನ ಡಿಜಿಟಲ್ ಲೋಕದಲ್ಲಿ ನಮ್ಮ ಜೀವನವನ್ನು ಆಕ್ರಮಿಸಿಕೊಂಡಿರುವ ಗೂಗಲ್, ಹೊಸ ಮಾದರಿಯ ಪ್ರಯತ್ನವೊಂದಕ್ಕೆ ಮುಂದಾಗಿದೆ. ಪ್ರಾಕೃತಿಕ ವಿಕೋಪಗಳಿಂದ ಮನುಕುಲವನ್ನು ರಕ್ಷಿಸುವ ಯೋಜನೆಯನ್ನು ರೂಪಿಸಲು ತಯಾರಿಯನ್ನು ನಡೆಸಲಾಗುತ್ತಿದೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ತಿಳಿಸಿದ್ದಾರೆ.

ಗೂಗಲ್ ಸುನಾಮಿ ಮತ್ತು ಭೂಕಂಪನವನ್ನು ಮೊದಲೇ ಗ್ರಹಿಸಿ ಜನರನ್ನು ಎಚ್ಚರಿಸುವ ತಂತ್ರಜ್ಞಾನವೊಂದನ್ನು ಕಂಡುಹಿಡಿಯಲಿದೆ ಎನ್ನಲಾಗಿದೆ.

ಗೂಗಲ್ ಉಪ ಸಮುದ್ರ ಫೈಬರ್ ಆಪ್ಟಿಕಲ್  ಕೇಬಲ್ (ಸನ್ ಸೀ ಫೈಬರ್ ಆಪ್ಟಿಕಲ್ ಕೇಬಲ್) ನೆಟ್‌ವರ್ಕ್ ಅನ್ನು ಬಳಸಿಕೊಂಡು ಸುನಾಮಿ ಮತ್ತು ಭೂಕಂಪನಗಳ ಕುರಿತು ಮೊದಲೇ ಮಾಹಿತಿಯನ್ನು  ಸಂಗ್ರಹಿಸಬಹುದು ಎಂದಿದೆ.

ಈ ಕುರಿತು ಗೂಗಲ್  ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿಯನ್ನು ನೀಡಿದ್ದು, ಗೂಗಲ್‌ನ ಜಾಗತಿಕ ನೆಟ್ವರ್ಕಿಂಗ್ ಎಂಜಿನಿಯರ್‌ಗಳಾದ ವ್ಯಾಲೆ ಕಮಾಲೋವ್ ಮತ್ತು ಮ್ಯಾಟಿಯಾ ಕ್ಯಾಂಟೊನೊ  ಈ ಹೊಸ ಸಾಧ್ಯತೆ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಓದಿ: ಕನ್ನಡಕದ ಮೂಲಕವೇ ವಿಶ್ವದ ಬೆಸ್ಟ್ ಟೆಕ್ ಅನುಭವ ಉಣ ಬಡಿಸಲಿದ್ದಾರೆ ಅಂಬಾನಿ…!

ಕಂಪನಿಯು ವ್ಯಾಪಕವಾದ ಫೈಬರ್ ಆಪ್ಟಿಕ್ ಸಬ್ ಸೀ ಕೇಬಲ್‌ಗಳನ್ನು ನಿರ್ವಹಿಸುತ್ತಿದೆ, ಅದು ಸಮುದ್ರ ತೀರದಲ್ಲಿ ಸಾವಿರಾರು ಕಿಲೋಮೀಟರ್ಗಳಷ್ಟು ವಿಸ್ತರಿಸಿದೆ, ಅವುಗಳ ಸಹಾಯವನ್ನು ಬಳಸಿಕೊಂಡು ಸುನಾಮಿ ಮತ್ತು ಭೂಕಂಪನಗಳ ಕುರಿತು ಮೊದಲೇ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿದೆ ಎಂದಿದ್ದಾರೆ.

ಸಬ್‌ ಸೀ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಸೆಕೆಂಡಿಗೆ 204,190 ಕಿಲೋಮೀಟರ್ ವೇಗದಲ್ಲಿ ಡೇಟಾಗಳನ್ನು ಸಾಗಿಸುತ್ತಿವೆ. ಇದರಿಂದಾಗಿ ಬೆಳಕಿನ ವೇಗದಲ್ಲಿ ಪ್ರಪಂಚದಾದ್ಯಂತ ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ಇವುಗಳಿಂದಲೇ ಭೂಕಂಪನದ ಕುರಿತು ಮೊದಲೇ ಮಾಹಿತಿಯನ್ನು ನೀಡಲು ಶಕ್ತವಾಗಿದೆ ಎಂದಿದ್ದಾರೆ.

ಭೂಕಂಪನಗಳು ಇಲ್ಲವೇ ಸುನಾಮಿ ಸಂಭವಿಸುವ ಸಂದರ್ಭದಲ್ಲಿ ಈ ಕೇಬಲ್ ಗಳಲ್ಲಿ“ಯಾಂತ್ರಿಕ ಅಡಚಣೆಗಳು” ಕಾಣಿಸಿಕೊಳ್ಳುತ್ತಿದೆ.  ಅಡಚಣೆಗಳು ಸಂಭವಿಸಿದಾಗ ಗೂಗಲ್‌ಗೆ ತಿಳಿಯುತ್ತದೆ ಏಕೆಂದರೆ ಅದರ ಸಬ್‌ಸೀಯ ಕೇಬಲ್‌ಗಳ ಮೂಲಕ ಚಲಿಸುವ ಪಲ್ಸಿಂಗ್ ಬೆಳಕು ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ವಿರೂಪಗಳನ್ನು ಎದುರಿಸುತ್ತದೆ. ನಂತರ ಅದನ್ನು ಡಿಜಿಟಲ್ ಸಿಗ್ನಲ್ ಸಂಸ್ಕರಣೆಯ ಮೂಲಕ ಸರಿಪಡಿಸಬೇಕು.

ಕೇಬಲ್‌ ಉದ್ದಕ್ಕೂ ಯಾಂತ್ರಿಕ ಅಡಚಣೆಗಳಿಗೆ ಪ್ರತಿಕ್ರಿಯೆಯಾಗಿ ಎಸ್ಒಪಿ ಅಳವಡಿಸಲಾಗಿದ್ದು, ಇದು ಬದಲಾವಣೆಗಳು ಮತ್ತು ಈ ಅಡಚಣೆಗಳನ್ನು ಪತ್ತೆಹಚ್ಚುವುದರ ಮೂಲಕ ಭೂಕಂಪನ ಚಟುವಟಿಕೆಯನ್ನು ಕಂಡುಹಿಡಿಯಲು ನಮಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.